ಕಂಬಳದ ಮೇಲಿನ ನಿಷೇಧ ವಿರೋಧಿಸಿ ಬೃಹತ್‌ ಪ್ರತಿಭಟನೆ

Saturday, January 28th, 2017
Kambala-Protest

ಮಂಗಳೂರು : ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಮೇಲಿನ ನಿಷೇಧ ವಿರೋಧಿಸಿ ಕಡಲ ನಗರಿಯಲ್ಲಿ ಪ್ರತಿಭಟನೆಗಳು ಪ್ರಬಲಗೊಂಡಿವೆ. ಇಂದು ಸಹ ಸಚಿವ ಅಭಯಚಂದ್ರ ಜೈನ್‌ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ( ಹಕ್ಕೊತ್ತಾಯ ಜಾಥಾ ) ನಡೆಯಿತು. ನೂರಾರು ಕೋಣಗಳ ಸಮೇತ ಬೀದಿಗಳಿದ ಸಾವಿರಾರು ಸಂಖ್ಯೆಯ ಕಂಬಳ ಪ್ರಿಯರು ಮೂಡಬಿದರೆಯ ಸ್ವರಾಜ್ ಮೈದಾನದಿಂದ ಪ್ರತಿಭಟನೆ ಜಾಥಾ ಪ್ರಾರಂಭಿಸಿದರು. ಈ ಜಾಥಾ ಸ್ವರಾಜ್‌ ಮೈದಾನದಿಂದ ಕಡಲಕೆರೆವರೆಗೆ ಸಾಗಲಿದೆ. ಪ್ರತಿಭಟನಾ ಮೆರವಣೆಗೆಯಲ್ಲಿ ಕಂಬಳದ ಮೇಲಿನ ನಿಷೇಧಕ್ಕೆ ವಿರೋಧ ವ್ಯಕ್ತ ಪಡಿಸಿದ ಪ್ರತಿಭಟನಾಕಾರರು, […]

ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ಏರೋನಾಟಿಕ್ಸ್ ಕ್ಷೇತ್ರದಲ್ಲಿ ಏರೋ ಮಾದರಿ ಸ್ಪರ್ಧೆ

Saturday, January 28th, 2017
Air-Show

ಮಂಗಳೂರು: ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಆಡಳಿತಾತ್ಮಕ ಕಾಲೇಜು ಏರೋನಾಟಿಕ್ಸ್ ಕ್ಷೇತ್ರದಲ್ಲಿ ವಿಶಾಲ ದೃಷ್ಟಿಕೋನದಿಂದ ಎರಡು ದಿನಗಳ ಏರೋ ಮಾದರಿ ರಾಷ್ಟ ಮಟ್ಟದ ಸ್ಪರ್ಧೆಯನ್ನು ಆಯೋಜಿಸಿದ್ದು, ಏರೋಫಿಲಿಯಾ-2017 ವಾರ್ಷಿಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ವಿಮಾನ ಮಾದರಿಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಿದೆ. ಏರೊಫಿಲಿಯಾ 2017ರ ಈ ಏರ್ ಶೋ ವನ್ನು ಅಬ್ದುಲ್ಲಾ ಜಸೀಮ್ ನಿರ್ವಹಿಸಿದ್ದಾರೆ. ಏರ್ ಶೋ ಗಣಿತ, ಇತಿಹಾಸ, ಕಲೆ, ವಿನ್ಯಾಸ ಹಾಗೂ ವಿಜ್ಞಾನದಲ್ಲಿ ವೈವಿಧ್ಯಮಯ ಅನುಭವವನ್ನು ವಿದ್ಯಾರ್ಥಿಗಳಿಗೆ ನೀಡಿದೆ. ಏರೋಫೀಲಿಯಾ-2017 ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳು 1,45,000 […]

ಹೆಜ್ಜೇನು ದಾಳಿಗೆ ತುತ್ತಾಗಿ ಮಹಿಳೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಸಾವು

Saturday, January 28th, 2017
Kamala

ಮಂಗಳೂರು: ಹೆಜ್ಜೇನು ದಾಳಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ದೇರಳಕಟ್ಟೆಯ ನಿಟ್ಟೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿ.8ರಂದು ಉಳಾಯಿಬೆಟ್ಟು ನಿವಾಸಿ ಕಮಲ, ಪಿಲಾರ್ ನಿವಾಸಿ ಶ್ರೀಧರ್, ಪತ್ನಿ ಲೀಲಾವತಿ ಪಿಲಾರ್ ಹಾಗೂ ಲಕ್ಷ್ಮಿ ಎಂಬುವರು ಹೆಜ್ಜೇನು ದಾಳಿಗೆ ತುತ್ತಾಗಿದ್ದರು. ಈ ಪೈಕಿ ಕಮಲ (65) ಹೆಜ್ಜೇನು ದಾಳಿಗೊಳಗಾದ ದಿನವೇ ಮೃತಪಟ್ಟಿದ್ದರು. ಇನ್ನು ಚಿಂತಾಜನಕ ಸ್ಥಿತಿಯಲ್ಲಿದ್ದ ಲೀಲಾವತಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಪೇಟಾ ವಿರುದ್ಧ ಮಾನವ ಸರಪಳಿ ರಚಿಸಿ ಹೋರಾಟಕ್ಕಿಳಿದ ತುಳುನಾಡಿನ ಜನತೆ

Saturday, January 28th, 2017
kambala

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕಂಬಳ ಉಳಿಸಿ ಹೋರಾಟ ಸಮಿತಿ ಆಯೋಜಿಸಿರುವ  ಕಂಬಳ ಉಳಿವಿಗಾಗಿ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳು, ರಾಜಕಾರಣಿಗಳು, ತುಳು ಸಿನಿ ತಾರೆಗಳು ಮಾನವ ಸರಪಳಿ ರಚಿಸಿ ಬೆಂಬಲ ನೀಡಿದ್ದಾರೆ. ಶುಕ್ರವಾರ ಮಂಗಳೂರಿನ ಹಂಪನಕಟ್ಟೆ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ರೂಪಿಸಿ ಪ್ರತಿಭಟನೆ ನಡೆಸಿ ಪೇಟಾ ವಿರುದ್ಧ ಘೋಷಣೆ ಕೂಗಿ ಪೇಟಾ ನಿಷೇಧಕ್ಕೆ ಆಗ್ರಹಿಸಿದರು. ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು,  ಮಾತನಾಡಿ, ಕಂಬಳ ಉಳಿವಿಗಾಗಿ ಯಾವುದೇ ಹೋರಾಟಕ್ಕೆ ನಾವು ಸಿದ್ಧ. ಕಂಬಳದೊಂದಿಗೆ ತುಳುನಾಡಿನ ಸಂಸ್ಕೃತಿ ಅಡಗಿದೆ. […]

25 ವಾರ ಮುಗಿಸಿದ ಪೊಲೀಸ್ ಕಮಿಷನರ್ ಪೋನ್ ಇನ್’ ಕಾರ್ಯಕ್ರಮ

Friday, January 27th, 2017
commissioner

ಮಂಗಳೂರು :  ಪೊಲೀಸ್ ಕಮಿಷನರ್ ವತಿಯಿಂದ ಆರಂಭಿಸಲಾಗಿರುವ ‘ಪೋನ್ ಇನ್’ ಕಾರ್ಯಕ್ರಮಕ್ಕೆ 25 ವಾರ ಮುಗಿದಿದ್ದು  ಈ ತನಕ ಒಟ್ಟು 428 ದೂರುಗಳನ್ನು ಸ್ವೀಕರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಹೇಳಿದ್ದಾರೆ. ಪೋನ್ ಇನ್’ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು 24 ಕಂತುಗಳಲ್ಲಿ ಸ್ವೀಕರಿಸಿದ ಒಟ್ಟು 403 ದೂರುಗಳ ಪೈಕಿ 373 ದೂರುಗಳಿಗೆ ಪೂರ್ಣ ಪ್ರಮಾಣದಲ್ಲಿ ಮತ್ತು 10 ದೂರುಗಳಿಗೆ ಆಂಶಿಕವಾಗಿ ಸ್ಪಂದಿಸಲಾಗಿದೆ. 20 ದೂರುಗಳನ್ನು ಇತರ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. 261 ದೂರುಗಳು ಸಂಚಾರ ಸುವ್ಯವಸ್ಥೆಗೆ ಸಂಬಂಧ ಪಟ್ಟಿರುತ್ತವೆ. 52 […]

ಚಲನಚಿತ್ರೋತ್ಸವ ಸಪ್ತಾಹಕ್ಕೆ ಚಾಲನೆ

Friday, January 27th, 2017
Film-Festival

ಮಂಗಳೂರು :  ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಪಡೆದ ಕನ್ನಡ ಚಲನಚಿತ್ರಗಳನ್ನು ಪ್ರದರ್ಶಿಸುವ ಸಲುವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಏರ್ಪಡಿಸಲಾಗಿರುವ ಚಲನಚಿತ್ರೋತ್ಸವ ಸಪ್ತಾಹಕ್ಕೆ ಶುಕ್ರವಾರ ಮಂಗಳೂರಿನಲ್ಲಿ ಚಾಲನೆ ನೀಡಲಾಯಿತು. ನಗರದ ನ್ಯೂಚಿತ್ರಾ ಚಿತ್ರಮಂದಿರದಲ್ಲಿ ನಡೆಯುತ್ತಿರುವ ಸಪ್ತಾಹವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾರ್‍ಸ್ಟ್ರೀಟ್ ಇಲ್ಲಿನ ಪ್ರಾಂಶುಪಾಲ ಡಾ. ರಾಜಶೇಖರ ಹೆಬ್ಬಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಮಾಜಿಕ ಆಧಾರಿತ ಸದಭಿರುಚಿಯ ಚಲನಚಿತ್ರಗಳನ್ನು ವೀಕ್ಷಿಸುವ ಅವಕಾಶ ಇತ್ತೀಚಿನ ದಿನಗಳಲ್ಲಿ ಅಪರೂಪವಾಗಿದೆ. ಮನೋರಂಜನೆಯೊಂದಿಗೆ ಕಲಾಧಾರಿತ […]

ಜಾತಿ ಭೇದ ಮರೆತು ಗೋಮಾತೆಯ ರಕ್ಷಣೆಗೆ ಮುಂದಾಗೋಣ : ರಾಘವೇಶ್ವರ ಭಾರತಿ ಸ್ವಾಮೀಜಿ

Friday, January 27th, 2017
Mangala gou Yatre

ಮಂಗಳೂರು: ಸಂತರೇ ಎಂಜಿನ್‌ಗಳಾಗಿ ಭಕ್ತರೇ ಬೋಗಿಗಳಾಗಿ ಗೋಹತ್ಯೆ ನಿಷೇಧದ ಸಂಗ್ರಾಮದಲ್ಲಿ ಫಾಲ್ಗೊಳ್ಳುವ ಮೂಲಕ ಸಮಾಜಕ್ಕೊಂದು ಶುಭ ಸಂದೇಶ ನೀಡುವ ಕಾಯಘ ನಡೆಯುತ್ತಿದೆ ಎಂದು ಶ್ರೀ ರಾಮಚಂದ್ರಾಫುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು. ಕೂಳೂರಿನ ಮಂಗಲಭೂಮಿಗೆ ಮಂಗಲ ಗೋಯಾತ್ರೆಯ ಪುರಪ್ರವೇಶದಲ್ಲಿ ಗೋಧ್ವಜ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು. ಎರಡು ದಿನಗಳ ಬಳಿಕ ಇದೇ ಸ್ಥಳದಲ್ಲಿ ವಿಶ್ವದಲ್ಲಿ ಹೊಸದೊಂದು ಶಕ್ತಿ ಉದಯವಾಗಲಿದೆ. ಅದು ಗೋವಿನ ಸುತ್ತ ಭದ್ರ ಕೋಟೆ ಕಟ್ಟಿ, ಗೋವಿನ ಕಾವಲಿಗೆ ನಿಲ್ಲಲಿದೆ. ತನ್ಮೂಲಕ ಗೋಹತ್ಯೆಯನ್ನು […]

ಕಂಬಳ ಹೋರಾಟಕ್ಕೆ ಬೀದಿಗಿಳಿಯಲಿರುವ ತುಳು ಕಲಾವಿದರು

Friday, January 27th, 2017
Tulu Actors

ಮಂಗಳೂರು: ತುಳು ಚಿತ್ರರಂಗದ ಕಲಾವಿದರು ಕಂಬಳ ಹೋರಾಟಕ್ಕೆ ಮುಂದಾಗಿದ್ದು , ಜ. 27 ರಂದು ಮಂಗಳೂರು ನಗರದಲ್ಲಿ ನಡೆಯುವ ಮಾನವ ಸರಪಳಿ ಹಾಗೂ 28 ರಂದು ಮೂಡುಬಿದಿರೆಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದು ತುಳು ಚಿತ್ರರಂಗದ ಹಿರಿಯ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ಮತ್ತು ಹಿರಿಯ ನಟ, ನಿರ್ದೇಶಕ ದೇವದಾಸ ಕಾಪಿಕಾಡ್ ಹೇಳಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಕೊಡಿಯಾಲ್‌ಬೈಲ್, ತುಳು ಚಿತ್ರರಂಗದ ಕಲಾವಿದರು ಮಾತ್ರವಲ್ಲ ನಾಟಕ, ಯಕ್ಷಗಾನ, ಸಾಂಸ್ಕೃತಿಕ ರಂಗಭೂಮಿಯ ಕಲಾವಿದರು ಕಂಬಳ ಬೆಂಬಲಿಸಿ […]

ಕದ್ರಿ ಉದ್ಯಾನವನದಲ್ಲಿ ನಾಲ್ಕು ದಿನದ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ

Thursday, January 26th, 2017
Palapushpa

ಮಂಗಳೂರು: ದ.ಕ. ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಹಾಗೂ ಸಿರಿ ತೋಟಗಾರಿಕೆ ಸಂಘದ ಸಹಯೋಗದಲ್ಲಿ ಕದ್ರಿ ಉದ್ಯಾನವನದಲ್ಲಿ  ಜನವರಿ. 26 ರಿಂದ 29 ರವರೆಗೆ ಕದ್ರಿ ಉದ್ಯಾನವನದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು . ಫಲಪುಷ್ಪ ಪ್ರದನರ್ಶದಲ್ಲಿ ಸುಮಾರು  10 ಅಡಿ ಎತ್ತರದಲ್ಲಿ ಉಳ್ಳಾಲದ ವೀರರಾಣಿ ಅಬ್ಬಕ್ಕಳ ಪ್ರತಿಕೃತಿ ಹಾಗೂ ಕುದುರೆಯನ್ನು  ಹೂವುಗಳಿಂದ ರಚಿಸಲಾಗಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ನಿರ್ಮಿಸಿದ ಆನೆ, ಸೈನಿಕರು ಎಲ್ಲ ಸೇರಿ ಸುಮಾರು 9 ಅಡಿ […]

ಮಂಗಳೂರಿನಲ್ಲಿ 68ನೇ ಗಣರಾಜ್ಯೋತ್ಸವದ ಧ್ವಜಾರೋಹಣಗೈದ ರಮಾನಾಥ ರೈ

Thursday, January 26th, 2017
Republic day

ಮಂಗಳೂರು: 68ನೇ ಗಣರಾಜ್ಯೋತ್ಸವವನ್ನು ಮಂಗಳೂರಿನ ನೆಹರೂ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣಗೈಯುವ ಮೂಲಕ ಪರಿಸರ, ಅರಣ್ಯ, ಜೀವಿಶಾಸ್ತ್ರ ಮತ್ತು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಆಚರಿಸಿದರು. ಬಳಿಕ ಗಣರಾಜ್ಯೋತ್ಸವದ ಸಂದೇಶ ನೀಡಿದ ಸಚಿವ ರೈ, ಸುಮಾರು 125 ಕೋಟಿ ಜನಸಂಖ್ಯೆ ಇರುವ ಬಹುಸಂಸ್ಕೃತಿ, ಬಹುಭಾಷೆ, ಜಾತಿ, ಮತಗಳ ನೆಲೆಯಾಗಿರುವ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಸಾರಿದ ರಾಷ್ಟ್ರ. ಆದ್ದರಿಂದ ಗಣರಾಜ್ಯೋತ್ಸವವು ಜನತೆಯ, ಜನತಂತ್ರ ವ್ಯವಸ್ಥೆಯ ಹಬ್ಬ ಎಂದರು. ಸಮಾಜದ ಎಲ್ಲಾ ಬಡಜನತೆಯನ್ನು ಆರ್ಥಿಕವಾಗಿ […]