ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆ ನಿರ್ಮಾಣದ ಹೊಂಡಕ್ಕೆ ಕಾರು ಬಿದ್ದು ಐವರಿಗೆ ಗಾಯ

Friday, December 27th, 2024
Ambalpady-Car-accident

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಅಗೆದಿರುವ ಹೊಂಡಕ್ಕೆ ಕಾರು ಮಗುಚಿಬಿದ್ದು ಪ್ರಯಾಣಿಕರಿಗೆ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಅಗೆದಿರುವ ಹೊಂಡಕ್ಕೆ ಕಾರು ಬಿದ್ದಿರುವುದು ಮೊದಲ ಅಪಘಾತವಾಗಿದ್ದು ವಾಹನ ಸವಾರರು ಜಾಗರೂಕರಾಗಿರಬೇಕಿದೆ ಎಂದು ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ. ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆ ಕಾಮಗಾರಿಗೆ ಪರವಿರೋಧ ಚರ್ಚೆಗಳು/ಹೋರಾಟಗಳು ಜೋರಾಗಿ ನಡೆಯುತ್ತಿರುವ […]

ಸಂಘಟಕ, ಸಾಹಿತಿ ಪ್ರಭು ಲಿಂಗಪ್ಪ ರಂಗಾಪುರ ಕನ್ನಡ ಭವನದ ಧಾರವಾಡ ಜಿಲ್ಲಾಧ್ಯಕ್ಷರಾಗಿ ನೇಮಕ

Friday, December 27th, 2024
Prabhulingappa

ಕಾಸರಗೋಡು : ಸಂಘಟಕ, ಕನ್ನಡ ಪರ ಹೋರಾಟಗಾರ, ಧಾರವಾಡದ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿ, ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ, 2022-23 ನೇ ಸಾಲಿನ ನ್ಯಾಷನಲ್ ಐಕಾನಿಕ್ ಅವಾರ್ಡ್ ಪಡೆದ ಶ್ರೀ ಪ್ರಭುಲಿಂಗಪ್ಪ ರಂಗಾಪುರ ಕೇರಳ ರಾಜ್ಯದ ಕಾಸರಗೋಡು ಕನ್ನಡ ಭವನದ ಕರ್ನಾಟಕ ದಾರವಾಡ ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕನ್ನಡ ಭವನದ “ರಜತ ಸಂಭ್ರಮ ” ವರ್ಷವಾದ 2025,ರಲ್ಲಿ ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಘಟಕವನ್ನು ಸ್ಥಾಪಿಸಿ ಕನ್ನಡಪರ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಸದುದ್ದೇಶದಿಂದ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. […]

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದಿಂದ ರಾಷ್ಟ್ರೀಯ ವೀರ ಬಾಲ ದಿನ ಆಚರಣೆ

Friday, December 27th, 2024
Veer-Bal-Din

ಮಂಗಳೂರು : ಸಿಖ್ ಗುರು ಶ್ರೀ ಗುರು ಗೋವಿಂದ ಸಿಂಗ್ ಅವರ ಮಕ್ಕಳಾದ ಸಾಹಿಬ್ ದಾದಾ ಜೋರಾವರ್ ಸಿಂಗ್ ಮತ್ತು ಸಾಹಿಬ್ ದಾದಾ ಬಾಬಾ ಫತೇರ್ ಸಿಂಗ್ ಅವರುಗಳು ವೀರ ಮರಣವನ್ನಪ್ಪಿದ ದಿನದ ಅಂಗವಾಗಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ವತಿಯಿಂದ “ರಾಷ್ಟ್ರೀಯ ವೀರ ಬಾಲ ದಿನವನ್ನು” ಅಟಲ್ ಸೇವಾ ಕೇಂದ್ರದಲ್ಲಿ ಆಚರಿಸಲಾಯಿತು. ವೀರ ಬಾಲಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ರವರು, ಮೊಘಲರ ಅಟ್ಟಹಾಸವನ್ನು ಎದುರಿಸಿ ಮತಾಂತರಕ್ಕೆ […]

ಡಿ.28ರಂದು 8ನೇ ವರ್ಷದ ಮಂಗಳೂರು ಕಂಬಳ ವೈಭವ: ಸಂಸದ ಕ್ಯಾ. ಬ್ರಿಜೇಶ್ ಚೌಟ

Friday, December 27th, 2024
Mangaluru Kambala

ಮಂಗಳೂರು: ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ ಡಿ.28 ರಂದು 8ನೇ ವರ್ಷದ ‘ಮಂಗಳೂರು ಕಂಬಳ’ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಕಂಬಳದ ಕುರಿತು ಮಾಹಿತಿ ನೀಡಿದ ಅವರು, ‘ಡಿ. 28ರಂದು ಬೆಳಿಗ್ಗೆ 8.30ಕ್ಕೆ ದಿ. ರತ್ನ ಮಾಧವ ಶೆಟ್ಟಿ ವೇದಿಕೆಯಲ್ಲಿ ಸಭಾಕಾರ್ಯಕ್ರಮ ನಡೆಯಲಿದ್ದು, ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಕಾಳಗದಲ್ಲಿ ಹುತಾತ್ಮರಾದ ನಾಡಿನ ಹೆಮ್ಮೆಯ […]

ಕೂಳೂರು ಗುರುದ್ವಾರದಲ್ಲಿ ಗೌರವ ನಮನ ಸಲ್ಲಿಸಿದ ಸಂಸದ ಕ್ಯಾ. ಚೌಟ

Friday, December 27th, 2024
Kottara Gurudwar

ಮಂಗಳೂರು: ‘ವೀರ್ ಬಾಲ್ ದಿವಸ್’ ಅಂಗವಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರು ಪಾಲಿಕೆ ಸದಸ್ಯ ಕಿರಣ್ ಕುಮಾರ್ ಅವರೊಂದಿಗೆ ನಗರದ ಕೂಳೂರು ಕೊಟ್ಟಾರ ಚೌಕಿಯಲ್ಲಿರುವ ಗುರುದ್ವಾರಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಹತ್ತನೇ ಸಿಖ್ ಗುರು ಗೋಬಿಂದ್ ಸಿಂಗ್ ಅವರ ಎಳೆಯ ಪುತ್ರರಾಗಿದ್ದ ಸಾಹಿಬ್ಜಾದೋಸ್ ಬಾಬಾ ಜೋರಾವರ್ ಸಿಂಗ್ ಮತ್ತು ಬಾಬಾ ಫತೇ ಸಿಂಗ್ ಅವರ ಅಪ್ರತಿಮ ತ್ಯಾಗಕ್ಕೆ ಗೌರವ ನಮನ ಸಲ್ಲಿಸಿದ್ದಾರೆ. ಬಳಿಕ ಮಾತನಾಡಿದ ಸಂಸದ ಕ್ಯಾ. ಚೌಟ, […]

ಕಟೀಲಿನಲ್ಲಿ ತುಳುವರ್ಲ್ಡ್ ಫೌಂಡೇಶನನಿನ ಪ್ರಧಾನ ಕಛೇರಿ ಉದ್ಘಾಟನೆ

Friday, December 27th, 2024
Tulu-world

ಮಂಗಳೂರು : ತುಳುನಾಡಿನಲ್ಲಿ ಜಾತಿ ಮತ ಭಾಷೆ ಭೇದವಿಲ್ಲದೆ ಸರ್ವರನ್ನು ಅನುಗ್ರಹಿಸುವವಳು ಕಟೀಲ ಉಳ್ಳಾಲ್ತಿ ಶ್ರೀ ದುರ್ಗಾಪರಮೇಶ್ವರಿ ತಾಯಿ. ತುಳುನಾಡಿನಲ್ಲಿ ಪಂಗಡ ಬೇದ ಭಾವವಿಲ್ಲದೆ ಒಗ್ಗೂಡಿಸುವ ಮನೋಭಾವದಿಂದ ತುಳುವರ್ಲ್ಡ್ ಫೌಂಡೇಶನ್ ಕಟೀಲಿನ ಈ ಪುಣ್ಯ ನೆಲದಲ್ಲಿ ಪ್ರವರ್ತನ ಆರಂಭಿಸಿರುವುದು ಮಹಾತಾಯಿಯ ಅನುಗ್ರಹ. ನಮ್ಮ ನಡುವೆ ಇರುವ ವಿಭಜನೆಗಳ ಹಿಂದಿರುವ ಕಟ್ಟುಕಥೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕು ಹಾಗೂ ಸತ್ಯ ಅಸತ್ಯಗಳ ಬಗ್ಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದು ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಹಾಗೂ ಕಟೀಲು ಶ್ರೀ […]

ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು

Thursday, December 26th, 2024
R Ashoka

ಬೆಂಗಳೂರು : ಸರ್ಕಾರದ ಹಣವನ್ನು ಬಳಸಿ ಬೆಳಗಾವಿಯಲ್ಲಿ ಕಾಂಗ್ರೆಸ್‌ ಸರ್ಕಾರ ತನ್ನ ಪಕ್ಷದ ಸಮಾವೇಶವನ್ನು ಮಾಡುತ್ತಿರುವುದು ಖಂಡನೀಯ. ಇದರ ವಿರುದ್ಧ ವಿಧಾನಸೌಧ ಮುಂಭಾಗ ಶುಕ್ರವಾರ ಪ್ರತಿಭಟಿಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತ ನಂತರ ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಿ ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ನಕಲಿ ಗಾಂಧಿಗಳು ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಿ ಈಗ ಬೆಳಗಾವಿಯಲ್ಲಿ ಸಮಾವೇಶ ಮಾಡುತ್ತಿದ್ದಾರೆ. ಗಾಂಧೀಜಿ ಬಹಳ ಸರಳವಾಗಿದ್ದರು. ಆದರೆ ಕಾಂಗ್ರೆಸ್‌ ನಾಯಕರು ಆಡಂಬರದ ಬದುಕು ನಡೆಸುತ್ತಿದ್ದಾರೆ. […]

ಅದ್ಯಪಾಡಿ ಶ್ರೀ ಅದಿನಾಥೇಶ್ವರ ದೇವಳದ ವೆಬ್ ಸೈಟ್ ಲೋಕಾರ್ಪಣೆ

Thursday, December 26th, 2024
Adyapadi-website

ಮಂಗಳೂರು: ಕರ್ನಾಟಕ ಸರಕಾರ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಹಾಗೂ ಶ್ರೀ ಆದಿನಾಥೇಶ್ವರ ದೇವಸ್ಥಾನ ಅದ್ಯಪಾಡಿ ಜೀರ್ಣೋದ್ಧಾರ ಸಮಿತಿ ಇದರ ಸಹಯೋಗದೊಂದಿಗೆ ಶ್ರೀ ಆದಿನಾಥೇಶ್ವರ ದೇವಸ್ಥಾನದ ವೆಬ್‌ಸೈಟ್ ಅನಾವರಣ ಕಾರ್ಯಕ್ರಮವು ಗುರುವಾರ ಬೆಳಗ್ಗೆ ಶ್ರೀ ಕ್ಷೇತ್ರದ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು, “ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭದಲ್ಲಿ ಅಧಿಕೃತ ವೆಬ್ ಸೈಟ್ ಇಂದು ಲೋಕಾರ್ಪಣೆಗೊಂಡಿದೆ. ಕ್ಷೇತ್ರದ […]

ಬಿಜೆಪಿ ಮಂಗಳೂರು ದಕ್ಷಿಣ ಮಂಡಲದಿಂದ ಸುಶಾಸನ ದಿನ ಆಚರಣೆ

Thursday, December 26th, 2024
Sushana-day

ಮಂಗಳೂರು : ದೇಶದ ಮಾಜಿ ಪ್ರಧಾನಿ, ಭಾರತ ರತ್ನ, ಅಜಾತಶತ್ರು ದಿ. ಅಟಲ್ ಬಿಹಾರಿ ವಾಜಪೇಯಿ ಯವರ 100 ನೇ ಜನ್ಮದಿನದ ಪ್ರಯುಕ್ತ ನಗರದ ಕೊಡಿಯಾಲ್ ಬೈಲ್ ನ ಅಟಲ್ ಸೇವಾ ಕೇಂದ್ರದಲ್ಲಿ “ಸುಶಾಸನ ದಿನ” (ಉತ್ತಮ ಆಡಳಿತ ದಿನ) ಆಚರಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ರವರು ರಾಷ್ಟ್ರ ಮೊದಲು, ಅಧಿಕಾರ ನಂತರ ಎನ್ನುವ ಸಿದ್ಧಾಂತವನ್ನು ಅಟಲ್ ಜೀ ಪದೇ ಪದೇ ಉಚ್ಚರಿಸಿ ಕೋಟಿ ಕೋಟಿ ಕಾರ್ಯಕರ್ತರ ಪ್ರೇರಣೆಯಾಗಿದ್ದಾರೆ. ಪ್ರಧಾನಿ ಶ್ರೀ ನರೇಂದ್ರ […]

ಪಾಲ್ದನೆ ಚರ್ಚ್ ನಲ್ಲಿ ಕ್ರಿಸ್ಮಸ್ ಕ್ಯಾರೊಲ್ ಗಾಯನ

Wednesday, December 25th, 2024
Paldane church

ಮಂಗಳೂರು: ಪಾಲ್ದನೆ ಸಂತ ತೆರೆಸಾ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆ ಸಂದರ್ಭ ಗಾಯನ ಮಂಡಳಿಯ ಮುಖ್ಯಸ್ಥೆ ಲಿಝಿ ಫೆರ್ನಾಂಡಿಸ್ ನೇತೃತ್ವದಲ್ಲಿ ಕ್ರಿಸ್ಮಸ್ ಗೀತೆಗಳನ್ನು ಅಂದರೆ ಕ್ಯಾರೊಲ್‌ಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಲಾಯಿತು. ಗಾಯನ ತಂಡದಲ್ಲಿ ಚರ್ಚ್ ಉಪಾಧ್ಯಕ್ಷ ಎಲಿಯಾಸ್ ಫೆರ್ನಾಂಡಿಸ್, ಚಾರ್ಲ್ಸ್ ಡಿಮೆಲ್ಲೊ, ಲ್ಯಾನಿಶ್ ಡಿಸೋಜಾ, ಮಾರಿಯೋ ರೇಗೊ, ಮಿಶಲ್ ರೇಗೊ, ರೀಶಲ್ ಡಿಸೋಜಾ, ಜೋಯಲ್ ಫೆರ್ನಾಂಡಿಸ್, ಜೆಸಿಂತಾ ಕ್ರಾಸ್ತಾ, ಅಲೀಶಾ ಮೊಂತೇರೊ, ರೆನಿಶಾ ಡಿಸೋಜಾ, ಅಲಿಟಾ ಟೆಲ್ಲಿಸ್, ಈತನ್ ಮೊಂತೆರೋ, ಓಶಿನ್ ಮೊರಾಸ್, ಜನಿಶಾ ಫೆರ್ನಾಂಡಿಸ್, […]