ಇಕೋಲಾರ್ಟ್ 2010 ಪ್ರದರ್ಶನ

Saturday, August 21st, 2010
ಇಕೋಲಾರ್ಟ್ 2010 ಪ್ರದರ್ಶನ

ಮಂಗಳೂರು : ಇಕೋಲಾರ್ಟ್-2010, ಪ್ರಕೃತಿ ಹಾಗೂ ಜಾಗತಿಕ ತಾಪಮಾನ ಬದಲಾವಣೆಯ ಕುರಿತು ಚಿತ್ರಕಲಾ ಪ್ರದರ್ಶನ ಮತ್ತು ಸಿನಿಮಾ ಪ್ರದರ್ಶನವು ಮಂಗಳೂರು ವಿಶ್ವವಿದ್ಯಾನಿಲಯ, ಎನ್.ಜಿ ಪಾವಂಜಿ ಚೇರ್ ಇನ್ ಫೈನ್ ಆರ್ಟ್ಸ್, ಬ್ರಿಟೀಷ್ ಕೌನ್ಸಿಲ್, ಚೆನೈ ಅಸೋಸಿಯೇಶನ್ ಆಫ್ ಬ್ರಿಟೀಷ್ ಸ್ಕಾಲರ್ಸ್ ಆರ್ಟಿಸ್ಟ್ ಕಂಬೈನ್ ಸಯನ್ಸ್ ಪೋರಮ್, ವಿಶ್ವವಿದ್ಯಾನಿಲಯ ಕಾಲೇಜಿನ ಸಹಬಾಗಿತ್ವದಲ್ಲಿ ಶುಕ್ರವಾರ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ ಶಿವಶಂಕರ ಮೂರ್ತಿಯವರು, ಕಂಚದಲ್ಲಿ ಚಿತ್ರ ಬಿಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]

ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ:

Saturday, August 21st, 2010
ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ:

ಮಂಗಳೂರು : ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ ಶುಕ್ರವಾರ ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈ 21ನೇ ಶತಮಾನದಲ್ಲಿ ಭಾರತವನ್ನು ಅಭಿವೃದ್ದಿಯ ಪಥಕ್ಕೆ ಕೊಂಡುಹೋಗಬೇಕೆಂದು ಕನಸು ಕಂಡವರು ರಾಜಿವ್ ಗಾಂಧಿ , ಇವರು ಆಕಸ್ಮಿಕ ಸನ್ನಿವೇಷದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದರು, ಸಾಕ್ಷಾರತಾ ಆಂದೋಲನಕ್ಕೆ ಕಾರಣ ರಾಜೀವ್ ಗಾಂಧಿಯವರಾಗಿದ್ದಾರೆ. ಮೀಸಲಾತಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ತಂದವರು ರಾಜೀವ್ ಗಾಂಧಿಯವರಾಗಿದ್ದು […]

ಕಾಲ್ಗೆಜ್ಜೆ ಚಿತ್ರ ವಿಮರ್ಶೆ

Saturday, August 21st, 2010
ಕಾಲ್ಗೆಜ್ಜೆ ಚಿತ್ರ ವಿಮರ್ಶೆ

ಬೆಂಗಳೂರು : ಕಾಲ್ಗೆಜ್ಜೆ  ದ್ವನಿ ಸುರುಳಿ  ಜನರನ್ನು  ಮೋಡಿ ಮಾಡಿದೆ. ನಟಿ ರೂಪಿಕಾ, ನಟ ಶ್ರೀಧರ್, ಯುವ ನಟ ವಿಶ್ವಾಸ್ ಅಭಿನಯದ ಈ ಚಿತ್ರ ಸಂಗೀತ ಹಾಗೂ ನೃತ್ಯವನ್ನೇ ಪ್ರಧಾನವಾಗಿಟ್ಟುಕೊಂಡ ಕಥೆಯನ್ನು ಹೊಂದಿರುವುದು ಇದರ ಗುಟ್ಟು. ಬ್ರೈಟ್ ಎಂಟರ್‌ಟೈನ್‌ಮೆಂಟ್ ಹೊರತಂದಿರುವ ಸಂಗೀತ ಪ್ರಧಾನ ಚಿತ್ರ ಇದಾಗಿದೆ. ಇದಕ್ಕೆ ಹೆಸರಾಂತ ಸಂಗೀತ ನಿರ್ದೇಶಕರಾದ ವಿ. ಮನೋಹರ್, ಕೆ. ಕಲ್ಯಾಣ್, ಹಂಸಲೇಖ ಹಾಗೂ ನಿರ್ದೇಶಕ ಎಸ್. ಮಹೇಂದರ್ ಹಾಡುಗಳನ್ನು ಬರೆದಿದ್ದಾರೆ.  ಇದೊಂದು ಸಂಗೀತದ ಸುಗ್ಗಿಯನ್ನೇ ನೀಡುವ ಚಿತ್ರವಾಗಿದೆ . ಚಿತ್ರದ […]

ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

Friday, August 20th, 2010
ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

ಮಂಗಳೂರು: ಸಮತಾ (ರಿ) ಮಹಿಳಾ ಬಳಗದ, ಬಿಜೈ ಮಂಗಳೂರು (ದ.ಕ.) ಇದರ ವತಿಯಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯು ಇಂದು ಸಂಜೆ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆಯಿತು. ಸಮತಾ ಮಹಿಳಾ ಬಳಗವು ಈ ವರ್ಷ ವಿಂಶತಿ ಉತ್ಸವವನ್ನು ಆಚರಿಸುತ್ತಿದ್ದು, ತಲಾ 7 ವರ್ಷಗಳಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯನ್ನು ಆಚರಿಸುತ್ತಾ ಬಂದಿದ್ದು, ಸುಮಾರು 400 ಮಹಿಳೆಯರು ಇದರ ಸದಸ್ಯರಾಗಿದ್ದಾರೆ. ಈ ಸಂಘವು ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇಂದು ವರಮಹಾಲಕ್ಷೀ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಿತು. […]

ಧೂಮಪಾನ, ಮದ್ಯಪಾನದಿಂದ ಆಯಸ್ಸು ಕಡಿಮೆ

Friday, August 20th, 2010
ಧೂಮಪಾನ, ಮದ್ಯಪಾನದಿಂದ ಆಯಸ್ಸು ಕಡಿಮೆ

ಧೂಮಪಾನ, ಮದ್ಯಪಾನ, ದುರ್ಬಲ ಆಹಾರಕ್ರಮ ಮತ್ತು ನಿಷ್ಕ್ರಿಯತೆ – ಈ ನಾಲ್ಕು ದುರಾಭ್ಯಾಸಗಳು ಮನುಷ್ಯ ಜೀವಿತಾವಧಿಯಲ್ಲಿ ಕನಿಷ್ಠ 12 ವರ್ಷಗಳನ್ನು ಕಡಿತ ಮಾಡುತ್ತದೆ ಎನ್ನುತ್ತದೆ ಒಂದು ಸಂಶೋಧನೆ. ಆದರೆ ಜೀವನಕ್ರಮ ಬದಲಾಯಿಸಿಕೊಳ್ಳುವುದರಿಂದ ಇದನ್ನು  ತಡೆಗಟ್ಟ ಬಹುದು. ಈ ದುರಾಭ್ಯಾಸಗಳು ಇಲ್ಲದವರಿಗಿಂತ ಇರುವವರು ಕ್ಯಾನ್ಸರ್ ಮತ್ತು ಹೃದ್ರೋಗದಿಂದ ಬಲಿಯಾಗುವ ಸಾಧ್ಯತೆಗಳು ಮೂರು ಪಟ್ಟು ಹಾಗೂ ಇತರ ರೋಗಗಳಿಂದ ಸಾವಿಗೀಡಾಗುವ ಸಾಧ್ಯತೆಗಳು ನಾಲ್ಕು ಪಟ್ಟು ಹೆಚ್ಚು ಎಂದು ಆರ್ಕೈವ್ಸ್ ಆಫ್ ಇಂಟರ್ನಲ್ ಮೆಡಿಸಿನ್ ಎಂಬ ಆರೋಗ್ಯ ಸಂಬಂಧಿತ ಸಂಚಿಕೆಯಲ್ಲಿ ಪ್ರಕಟವಾಗಿರುವ […]