ಪಂಜಿಮೊಗರುವಿನ ತಾಯಿ-ಮಗಳ ಜೋಡಿ ಕೊಲೆ ಓರ್ವ ಆರೋಪಿಯ ಬಂಧನ

Saturday, October 1st, 2011
Double Murder

ಮಂಗಳೂರು : ಮಂಗಳೂರಿನ ಪಂಜಿಮೊಗರುವಿನಲ್ಲಿ ನಡೆದಿದ್ದ ತಾಯಿ-ಮಗಳ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಕುಂಬಳೆ ಪೊಲೀಸರು ಓರ್ವನನ್ನು ರೈಲ್ವೇ ನಿಲ್ದಾಣದ ಹೊಟೇಲೊಂದರಿಂದ   ಗುರುವಾರ ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದ ಮೊದಲ ಆರೋಪಿ ಮೂರು ತಿಂಗಳ ನಂತರ ಸೆರೆ ಸಿಕ್ಕಂತಾಗಿದೆ. ಸಕಲೇಶ ಪುರದ ಹಮೀದ್ (35)ಎಂಬಾತನನ್ನು ಕುಂಬಳೆ ಪೊಲೀಸರು ಪ್ರಕರಣಕ್ಕೆ ಸಂಬಂದಿಸಿದಂತೆ ವಶಕ್ಕೆ ಪಡೆದು ಕೊಂಡಿದ್ದಾರೆ. ಬಂಧನ ಮಾಹಿತಿ ಲಭಿಸಿದ ತಕ್ಷಣ ಮಂಗಳೂರು ಫೊಲೀಸರು ಕುಂಬಳೆ ಠಾಣೆಗೆ ತೆರಳಿ ಅಲ್ಲಿಂದ ಹಮೀದ್‌ನನ್ನು ಮಂಗಳೂರಿಗೆ ಕರೆತಂದಿದ್ದಾರೆ. ಈತ ಒಂದು ತಿಂಗಳ ಹಿಂದೆ […]

ಪಂಜಿಮೊಗರು ಜೋಡಿ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಡಿವೈಎಫ್‌ಐ ಆಗ್ರಹ

Tuesday, September 20th, 2011
DYFI-protest

ಮಂಗಳೂರು : ಡಿವೈಎಫ್‌ಐ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಪಂಜಿಮೊಗರು ತಾಯಿ- ಮಗು ಜೋಡಿ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸ ಬೇಕು ಎಂದು ಪ್ರತಿಭಟನಾ ಸಭೆ . ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್‌ ಕಾಟಿಪಳ್ಳ ಪಂಜಿಮೊಗರಿನ ಘಟನೆ ಸಂಭವಿಸಿ 3 ತಿಂಗಳಾಗುತ್ತಾ ಬಂದರೂ ಇದನ್ನು ಬೇಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ತನಿಖೆಯ ನೆಪದಲ್ಲಿ ಅಮಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ರಝಿಯಾ ಮತ್ತು ಆಕೆಯ ಪುತ್ರಿ ಫಾತಿಮಾ ಜುವಾ […]

ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಎನ್‌.ಯೋಗೀಶ್‌ ಭಟ್‌ ರಿಗೆ ಸನ್ಮಾನ

Monday, August 29th, 2011
Yogish-Bhat/ ಎನ್‌.ಯೋಗೀಶ್‌ ಭಟ್‌ ರಿಗೆ ಸನ್ಮಾನ

ಮಂಗಳೂರು : ವಿಧಾನ ಸಭಾ ಉಪ ಸಭಾಧ್ಯಕ್ಷ ಎನ್‌.ಯೋಗೀಶ್‌ ಭಟ್‌ ಅವರನ್ನು ನಗರದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇವಾಂಜಲಿ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಸೇವಾಂಜಲಿ ವರ್ಷದ ವ್ಯಕ್ತಿ -2011 ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ಮಂಗಳೂರು ನಗರದ ಅಭಿವೃದ್ದಿಗೆ 150ಕೋ.ರೂ.ಅನುದಾನವನ್ನು ಒದಗಿಸು ವಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ಒಂದೂವರೆ ವರ್ಷದ ಕಾಲದಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ನೀಡಲಿದೆ.ಈ ಅವಧಿಯಲ್ಲಿ […]

ಅಣ್ಣಾ ಹಜಾರೆ ಬೆಂಬಲಿಗರಿಂದ ಮೈಕಿಗಾಗಿ ಕಿತ್ತಾಟ

Wednesday, August 17th, 2011
Anna Hazare followers / ಅಣ್ಣಾ ಹಜಾರೆ ಬೆಂಬಲಿಗರು

ಮಂಗಳೂರು : ದೆಹಲಿಯಲ್ಲಿ ಅಣ್ಣಾ ಹಜಾರೆ ಕೇಂದ್ರ ಸರ್ಕಾರದ ವಿರುದ್ದ ಸಮರ ಸಾರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೆ, ಮಂಗಳೂರಲ್ಲಿ ಅಣ್ಣಾ ಹಜಾರೆ ಬೆಂಬಲಕ್ಕೆ ಬಂದಿದ್ದ ಎರಡು ಬಣಗಳು ಮೈಕಿಗಾಗಿ ಸೆಣಸಾಟ ನಡೆಸಿ ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡ ಘಟನೆ ನಿನ್ನೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯಿತು. ಭ್ರಷ್ಟಾಚಾರ ವಿರೋಧಿ ವೇದಿಕೆ ಮತ್ತು ಲೋಕಪಾಲ ಮಸೂದೆ ಪರ ಗುಂಪುಗಳು ಅಣ್ಣಾ ಹಜಾರೆ ಅವರಿಗೆ ಪ್ರತೇಕವಾಗಿ ಬೆಂಬಲ ನೀಡಲು ಮುಂದಾದವು. ಸಾರ್ವಜನಿಕ ಭಾಷಣ ಮಾಡಲು ಎರಡೂ ಬಣಗಳು ತುದಿಗಾಲಲ್ಲಿ ನಿಂತಿದ್ದವು. […]

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್‌ಸಿ/ಎಸ್‌ಟಿ ಸಭೆ

Monday, July 25th, 2011
Sc St meeting/ಮಾಸಿಕ ಎಸ್‌ಸಿ/ಎಸ್‌ಟಿ ಸಭೆ

 ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಮಾಸಿಕ ಎಸ್‌ಸಿ/ಎಸ್‌ಟಿ ಸಭೆಯು, ಪೊಲೀಸ್ ಕಮಿಷನರೇಟ್ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಅಧೀಕ್ಷಕ ಸರ್ವೋತ್ತಮ ಪೈ ಅವರು ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಾದ ದೂರುದಾರರು ಮತ್ತು ಸಾಕ್ಷಿದಾರರಿಗೆ ಮೀಸಲಿಟ್ಟ ಹಣ ಬಳಕೆಯಾಗದೆ ವ್ಯರ್ಥವಾಗಿದೆ, ದಲಿತ ದೌರ್ಜನ್ಯ ಕಾಯ್ದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿ ಸಿದಂತೆ ನ್ಯಾಯಾಲಯಕ್ಕೆ ಹಾಜರಾಗುವ ಎಲ್ಲ ದೂರುದಾರರು ಮತ್ತು ಸಾಕ್ಷಿದಾರರಿಗೆ ಹಣವನ್ನು ಮೀಸಲಿಡಲಾಗಿದೆ. ತಹಶೀಲ್ದಾರರ್‌ಗೆ ಸೂಕ್ತ ದಾಖಲೆ ಪತ್ರ […]

ಮನಪಾ ದಿನಕೂಲಿ ನೌಕರರ ಅರೆಬೆತ್ತಲೆ ಮೆರವಣಿಗೆ

Thursday, July 21st, 2011
Daily wages/ಪೌರಕಾರ್ಮಿಕ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯ ಇಲಾಖೆಯಲ್ಲಿ ದಿನಕೂಲಿ ನೌಕರರಾಗಿ ದುಡಿಯುತ್ತಿರುವ ಪೌರ ಕಾರ್ಮಿಕರು ತಮ್ಮನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಬುಧವಾರ ಅರೆಬೆತ್ತಲೆ ಮೆರವಣಿಗೆಯ ಜಿಲ್ಲಾಧಿಕಾರಿ ಕಚೇರಿ ಬಳಿ ವಿನೂತನ ಪ್ರತಿಭಟನೆ ನಡೆಸಿದರು. ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವಾರು ದಲಿತ ಸಂಘಟನೆಗಳ ಬೆಂಬಲದೊಂದಿಗೆ ದ.ಕ. ಜಿಲ್ಲಾ ಪೌರ ಕಾರ್ಮಿಕರು ಹಾಗೂ ನಾಲ್ಕನೆ ದರ್ಜೆ ನೌಕರರ ಸಂಘದ ನೇತೃತ್ವದಲ್ಲಿ ನಗರದ ಜ್ಯೋತಿ ವೃತ್ತದಿಂದ ಅರೆಬೆತ್ತಲೆ ಮೆರವಣಿಗೆಯಲ್ಲಿ  ಪೌರ ಕಾರ್ಮಿಕರು ಘೋಷಣೆಗಳನ್ನು ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿದರು. ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ […]

ದ.ಕ ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣ ಪತ್ತೆ

Friday, July 15th, 2011
DHO-Rangappa/ಡಾ.ಶ್ರೀರಂಗಪ್ಪ

ಮಂಗಳೂರು ಜುಲೈ: ಇತ್ತೀಚಿನ ದಿನಗಳಲ್ಲಿ ಮಲೇರಿಯಾ ಜೊತೆಗೆ ಡೆಂಗ್ಯೂ ಕಾಯಿಲೆಯೂ ಸೇರ್ಪಡೆಗೊಂಡಿದ್ದು, 2011ರ ಜೂನ್ ಅಂತ್ಯದ ವರೆಗೆ    ಜಿಲ್ಲೆಯಲ್ಲಿ 36 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ  ಡಾ.ಓ.ಶ್ರೀರಂಗಪ್ಪ ಅವರು ತಿಳಿಸಿದ್ದಾರೆ. ಈ ವರ್ಷ 36 ಪ್ರಕರಣಗಳು ಪತ್ತೆಯಾದುದರಲ್ಲಿ.  ಮಂಗಳೂರು ನಗರದ ಬಿಜಾಪುರ ಕಾಲೊನಿ (ಲಿಂಗಪ್ಪಯ್ಯಕಾಡು) ನಲ್ಲಿ 3 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಇದನ್ನು ಹೊರತುಪಡಿಸಿ ಮತ್ಯಾವುದೇ ಸಾವುಗಳು ಡೆಂಗ್ಯು ಜ್ವರದಿಂದ ಜೂನ್ ಅಂತ್ಯದ ತನಕ ದಾಖಲಾಗಿಲ್ಲ ಎಂದು ಡಾ.ಶ್ರೀರಂಗಪ್ಪ ತಿಳಿಸಿದ್ದಾರೆ. ಕಳೆದ […]

ಗೋ ಶಾಲೆ ಸಹಾಯಾರ್ಥ ಯಕ್ಷಗಾನ

Monday, July 4th, 2011
havyaka go shale

ವೇಣೂರು: ಜಗದ್ಗುರುಶಂಕರಾಚಾರ್ಯ ಮಹಾ ಸಂಸ್ಥಾನಮ್ ,ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ವೇಣೂರು ಸಮೀಪದ ಗುಂಡೂರಿಯಲ್ಲಿರುವ ಕಾವೇರಮ್ಮ ಅಮೃತಧಾರಾ ಗೋಶಾಲೆಯ ಸಹಾಯಾರ್ಥ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಜುಲೈ 21ರಂದು ಸಂಜೆ 6ಗಂಟೆಗೆ ಗುರುವಾಯನಕೆರೆ “ನಮ್ಮ ಮನೆ” ಹವ್ಯಕ ಭವನದಲ್ಲಿ  ಶ್ರೀ ಧರ್ಮಸ್ಥಳ ಮತ್ತು ಶ್ರೀ ಕಟೀಲು ಮೇಳದ ಸುಪ್ರಸಿದ್ಧ ಕಲಾವಿದರ ಸಮ್ಮಿಲನದಲ್ಲಿ “ವಿಷಮರ್ಧನ – ಕುಶಲವ” ಎಂಬ ಪುರಾಣ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ರೂಪದಲ್ಲಿ ಆಡಿತೋರಿಸಲಿದ್ದಾರೆ. ಯಸ್.ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಪೆರುವೋಡಿ […]

ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ಜೂಟ್ ಉತ್ಪನ್ನಗಳನ್ನು ಬಳಸಿ-ರಜನಿದುಗ್ಗಣ್ಣ

Wednesday, January 5th, 2011
ಮೇಯರ್ ರಜನಿ ದುಗ್ಗಣ್ಣ

ಮಂಗಳೂರು ಜ 5 :-ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿರ್ಮೂಲನೆಗೆ ಪರಿಸರ ಸ್ನೇಹಿ ದೇಶಿಯ ಉತ್ಪನ್ನ ಸೆಣಬಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಸುವಂತೆ ಮಂಗಳೂರು ಮಹಾನಗರಪಾಲಿಕೆ ಮೇಯರ್ ರವರಾದ ಶ್ರೀಮತಿ ರಜನಿ ದುಗ್ಗಣ್ಣ ಅವರು ಜನತೆಗೆ ಕರೆ ನೀಡಿದ್ದಾರೆ. ಅವರು ಇಂದು ಮಂಗಳೂರಿನಲ್ಲಿ ರಾಷ್ಟ್ರೀಯ ಸೆಣಬು ಮಂಡಳಿ ದಕ್ಷಿಣ ಚೆನ್ನೈ ಇವರ ವತಿಯಿಂದ ಜನವರಿ 5ರಿಂದ 9 ರ ವರೆಗೆ ಐದು ದಿನಗಳ ಕಾಲ ನಡೆಯಲಿರುವ ಸೆಣಬು ಉತ್ಪನ್ನಗಳ ಮಾರಾಟ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ಈ ಮಾರಾಟ ಪ್ರದರ್ಶನದಲ್ಲಿ ಪಶ್ಚಿಮ […]

ಸಶಕ್ತ ಕಾರ್ಯನಿರ್ವಹಣೆಗೆ ಸಂಪನ್ಮೂಲ ಕ್ರೋಢೀಕರಣ ಅಗತ್ಯ: ಎ ಜೆ ಕೂಡ್ಗಿ

Friday, December 3rd, 2010
ಎ ಜೆ ಕೂಡ್ಗಿ

ಮಂಗಳೂರು  : ಅಧಿಕಾರ ವಿಕೇಂದ್ರೀಕರಣ ಪರಿಣಾಮಕಾರಿ ಅನುಷ್ಠಾನಕ್ಕೆ ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳು ಸ್ವತಂತ್ರವಾಗಿ ಸಂಪನ್ಮೂಲ ಕ್ರೋಢೀಕರಿಸಲು ಅವಕಾಶ ಕಲ್ಪಿಸಬೇಕೆಂದು 3ನೇ ರಾಜ್ಯ ಹಣಕಾಸು ಆಯೋಗ ಶಿಫಾರಸ್ಸುಗಳ ಅನುಷ್ಠಾನ ಕಾರ್ಯಪಡೆ ಅಧ್ಯಕ್ಷರಾದ ಶ್ರೀ ಎ.ಜೆ. ಕೂಡ್ಗಿ ಅವರು ತಿಳಿಸಿದ್ದಾರೆ. ಅವರಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಾ, 3ನೇ ಹಣಕಾಸು ಆಯೋಗ ಸ್ಥಳೀಯ ಸಂಸ್ಥೆಗಳ ಸಬಲೀಕರಣಕ್ಕೆ ಶಿಫಾರಸ್ಸು ಮಾಡಿರುವುದಾಗಿ ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಯಥೇಚ್ಛವಾಗಿ ಹಣದ ನೆರವು […]