- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾಂಗ್ರೆಸ್ : ರಾಜ್ಯ ವಿಧಾನ ಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಜೆ.ಆರ್.ಲೋಬೊ ಕಣಕ್ಕೆ

JR Lobo & Ivan D Souza [1]ಮಂಗಳೂರು : ಕಾಂಗ್ರೆಸ್ ಪಕ್ಷದಿಂದ ರಾಜ್ಯ ವಿಧಾನ ಸಭೆಯ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಈಗ ಸಿದ್ಧವಾಗಿರುವ ಪಟ್ಟಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ದಿಂದ ಜೆ.ಆರ್.ಲೋಬೊ ರಿಗೆ ಟಿಕೆಟ್ ನೀಡಲಾಗಿದೆ.

ಕೆಲ ತಿಂಗಳ ಹಿಂದೆ ಸರ್ಕಾರಿ ಹುದ್ದೆಯಿಂದ ಸ್ವಯಂ ನಿವೃತ್ತಿಗೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರಿದ  ಜೆ.ಆರ್.ಲೋಬೊ ಪಕ್ಷಕ್ಕೆ ಸೇರಿ ಸಾಮಾನ್ಯ ಕಾರ್ಯಕರ್ತನಂತೆ ತೆರೆ ಮರೆಯಲ್ಲೇ  ತನ್ನ ಪಾಲಿನ ಕೆಲಸ ಮಾಡಿಕೊಂಡಿದ್ದರು. ಒಂದೆಡೆ ಈ ಬಾರಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸ್ಪರ್ಧಿಸುವ ಅವಕಾಶ ಒದಗಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರು ನೀಡಿದ್ದ ಭರವಸೆಯನ್ನು  ಉಳಿಸಿಕೊಂಡಿದ್ದಾರೆ. ಇನ್ನೊಂದೆಡೆ  ಇದೇ ಕ್ಷೇತ್ರದಿಂದ ಕಣಕ್ಕಿಳಿಯ ಬಯಸಿದ್ದ ಐವನ್ ಡಿಸೋಜಾ ಬಳಗಕ್ಕೆ ಈ ಸುದ್ದಿ ಆಘಾತ ತಂದಿದೆ.

ಪಕ್ಷದ ಕಾರ್ಯಕರ್ತರನ್ನು ಗುರುತಿಸುವ ಹಾಗೂ ಅವರನ್ನು ಪ್ರಚಾರ ಕಾರ್ಯಕ್ಕೆ ಅಣಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದ ಲೋಬೊರವರು ಇನ್ನೊಂದು ಕಡೆ ಹೊಸ ಮತದಾರರನ್ನು ನೋಂದಾಯಿಸುವ ಕಾರ್ಯದಲ್ಲಿ ತೊಡಗಿದ್ದರು. ಇವರು ಕಳೆದ ಐದು ತಿಂಗಳಲ್ಲಿ ಮೂರು ಸಾವಿರ ಕ್ರೈಸ್ತರೂ ಸೇರಿದಂತೆ ಎಂಟು ಸಾವಿರ ಮತದಾರರನ್ನು ನೋಂದಾಯಿಸಿದ್ದಾರೆ. ಲೋಬೊರವರ ತೆರೆಮರೆಯ ಈ ಕಾರ್ಯದಿಂದಾಗಿ ಕಾಂಗ್ರೆಸ್ ಪಕ್ಷ ದಕ್ಷಿಣ ವಿಧಾನಸಭಾ ಕ್ಷೇತ್ರ ಸ್ಪರ್ಧಿಸುವ ಅವಕಾಶ ಇವರಿಗೆ ನೀಡಲಾಗಿದೆ ್ಎಂದು ಹೇಳಲಾಗುತ್ತಿದೆ.