- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಜಗದೀಶ್ ಶೆಟ್ಟರ್ ಮುಂದುವರಿಯಲಿದ್ದಾರೆ : ಸುಷ್ಮಾ ಸ್ವರಾಜ್

Sushma Swaraj [1]ಮಂಗಳೂರು : ಕಾಂಗ್ರೆಸ್ ಪಕ್ಷ ಒಳಜಗಳದಿಂದಾಗಿ ಒಡೆದು ಚೂರು ಚೂರಾಗಿದೆ. ಆದರೆ ರಾಜ್ಯ ಬಿಜೆಪಿಯಲ್ಲಿ ಇದೀಗ ಬಿನ್ನಾಭಿಪ್ರಾಯಗಳು ಶಮನಗೊಂಡಿದೆ, ರಾಜ್ಯದಲ್ಲಿ ಕೆಜೆಪಿ, ಜೆಡಿಎಸ್ ಪಕ್ಷಗಳು ಬೆರಳೆಣಿಕೆಯಷ್ಟು ಸ್ಥಾನಗಳಿವೆಯೇ ಹೊರತು ಅವು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಹೇಳಿದರು.

ಚುನಾವಣಾ ಕಾರ್ಯದ ನಿಮಿತ್ತ ಶುಕ್ರವಾರ ನಗರಕ್ಕಾಗಮಿಸಿದ ಅವರು, ಇಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. ಪ್ರಾರಂಭದಲ್ಲಿ ರಾಜ್ಯ ಬಿಜೆಪಿ ಯಲ್ಲಿ ಅನೇಕ ಗೊಂದಲಗಳಿದ್ದು ಇಂದು ಅವೆಲ್ಲವೂ ಶಮನಗೊಂಡಿದ್ದು. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದರು. ಕೇಂದ್ರದ ಪ್ರಮುಖ ಹಗರಣಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು ಭಾಗಿಯಾಗಿದ್ದು ೨ ಜಿ ಹಗರಣದಲ್ಲಿ ಕೆಲವೇ ಮಂದಿ ಬಿಜೆಪಿಗರಿದ್ದು ಇನ್ನುಳಿದಂತೆ ಕಾಂಗ್ರೆಸ್ ನವರು ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಅವರು ಹೇಳಿದರು.

ತಮ್ಮ ಮಾತಿನುದ್ದಕ್ಕೂ ಕೇಂದ್ರ ಸರ್ಕಾರವನ್ನು ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ದ ಮಾತನಾಡಿದ  ಅವರು ಕರ್ನಾಟಕ್ಕೆ ಎರಡನೇ ಬಾರಿಗೆ ಪ್ರಚಾರ ಕಾರ್ಯಕ್ಕೆ ಆಗಮಿಸಿದ್ದು,  ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕರ್ನಾಟಕದ ಜನತೆಗೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಚುನಾವಣೆ  ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ನಡೆಯುವ ಹೋರಾಟವಾಗಿದ್ದು, ರಾಜ್ಯ ಸರ್ಕಾರ ಮಾಡಿರುವ ಅಭಿವೃದ್ದಿ ಕಾರ್ಯಗಳಿಂದ ಜನರು ಬಿಜೆಪಿಗೆ ಮತ ಚಲಾಯಿಸಲಿರುವುದಾಗಿ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ, ಜಿಲ್ಲಾ ಸಮಿತಿ ಮಾದ್ಯಮ ವಕ್ತಾರ ರಾಜಗೋಪಾಲ ರೈ ಉಪಸ್ಥಿತರಿದ್ದರು.