ಸೆಪ್ಟಂಬರ್ 6 ರಂದು “ಪಾರು ಐ ಲವ್ ಯು” ಚಲನಚಿತ್ರ ತೆರೆಗೆ

1:32 PM, Tuesday, August 20th, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Paru-I Love You film

ಮಂಗಳೂರು : ಜಗತ್ ಜ್ಯೋತಿ ಮೂವಿ ಮೇಕರ್‍ಸ್ ಲಾಂಛನದಲ್ಲಿ ನಿರ್ಮಾಣಗೊಂಡ “ಪಾರು ಐ ಲವ್ ಯು” ಸಿನಿಮಾವು ಇದೇ ಬರುವ ತಿಂಗಳು ಸೆ.6 ರಂದು ತೆರೆ ಕಾಣಲಿದೆ ಎಂದು ಚಿತ್ರದ ನಾಯಕ ನಟ ರಂಜನ್ ರವರು ಸೋಮವಾರ ನಗರದ ಹೊಟೇಲ್ ವುಡ್‌ಲ್ಯಾಂಡ್ಸ್ ನಲ್ಲಿ ಅಯೋಜಿಸಲಾದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಈ ಚಿತ್ರ ತಾನು ನಟಿಸಿರುವ ಮೊದಲ ಸಿನಿಮಾವಾಗಿದೆ. ನಾವೂ ಪ್ರತಿಯೊಂದು ಜಿಲ್ಲೆಗಳಿಗೂ ಹೋಗಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ.  ಸಿನಿಮಾದ ಮಾಹಿತಿಯು ಇನ್ನೂ ಮಂಗಳೂರಿನ ಜನತೆಗೆ ತಲುಪಿಲ್ಲ  ಈ ಹಿನ್ನೆಲೆಯಲ್ಲಿ ಪ್ರಚಾರ  ಕಾರ್ಯ ಆರಂಭಿಸಿದ್ದೇವೆ .

Paru-I Love You film ಸಿನಿಮಾದಲ್ಲಿ ಒಟ್ಟು ಎಂಟು ಹಾಡುಗಳಿವೆ. ಚಿಕ್ಕಮಂಗಳೂರು, ಮೂಡುಬಿದಿರೆ, ಸಕಲೇಶ್‌ಪುರ, ಮಡಿಕೇರಿ, ಬೆಂಗಳೂರು ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಕುನಾಲ್ ಗಾಂಜವಾಲ್, ಟಿಪ್ಪು, ರಾಜೇಶ್ ಕೃಷ್ಣನ್, ನಂದಿತ, ಲಕ್ಷ್ಮಿ, ಅನುರಾಧ ಭಟ್, ಚಿತ್ರ ಸಂಗೀತ ನೀಡಿದ್ದಾರೆ. ಇದು ಇಡೀ ಕುಟುಂಬಸ್ಥರು ಒಟ್ಟಿಗೆ ಹೋಗಿ ನೋಡುವಂತಹ ಸಿನಿಮಾವಾಗಿದೆ ಎಂದು ತಿಳಿಸಿದರು.

ಚಿತ್ರದ ನಾಯಕಿ ನಟಿ ನೀತು ಶೆಟ್ಟಿ ಮಾತನಾಡಿ,  ಈ ಸಿನಿಮಾದಲ್ಲಿ ನನ್ನದು ಈವರೆಗೆ ನಟಿಸಿದ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನವಾದ ಪಾತ್ರ. ಇಲ್ಲಿ ನಾನು ಟೀಚರ್ ಟ್ರೈನಿಂಗ್ ಮಾಡುತ್ತಿರುವ ಒಂದು ನಟಿಯ ಪಾತ್ರವನ್ನು ನಿರ್ವಹಿಸಿದ್ದು, ಈ ಸಿನಿಮಾವೂ ತುಂಬಾ ಭಾವಾನಾತ್ಮಕವಾದ ಸಿನಿಮಾವಾಗಿದೆ ಎಂದು ತಿಳಿಸಿದರು.

Paru-I Love You filmಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಸುನಿಲ್ ಹುಬ್ಳಿ, ಸಿನಿಮಾಟೋಗ್ರಾಫಿ ನಾಗೇಶ್ ಆಚಾರ್‍ಯ, ಸಂಗೀತ ನಿರ್ದೇಶಕ ಎಟಿ.ರವೀಶ್, ಹಾಗೂ ಇನ್ನಿತ್ತರರು ಉಪಸ್ಥಿತರಿದ್ದರು.

Paru-I Love You film

Paru-I Love You film

Paru-I Love You film

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English