ಅತ್ತಾವರ ಮಣಿಪಾಲ್ ಡೆಂಟಲ್ ಕಾಲೇಜಿಗೆ ಮೂರು ವರ್ಷದಿಂದ ಆಕ್ರಮ್ ವಿದ್ಯುತ್ ಸಂಪರ್ಕ

1:23 PM, Tuesday, December 10th, 2013
Share
1 Star2 Stars3 Stars4 Stars5 Stars
(No Ratings Yet)
Loading...

Mescom

ಮಂಗಳೂರು : ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂಭಾಗದಲ್ಲಿರುವ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂಬ ದೂರಿನಂತೆ ಮೆಸ್ಕಾಂ ಅಪರಾಧ ಪತ್ತೆ ದಳದ ಅಧಿಕಾರಿಗಳು ಸೋಮವಾರ ದಾಳಿ ನಡೆಸಿದರು.

ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂಭಾಗದಲ್ಲಿ ಕಾರ್ಯಾಚರಿಸುತ್ತಿರುವ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸಾಯನ್ಸಸ್ ಗೆ ಅಕ್ರಮ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಟಿ.ಎಸ್.ಹನೀಫ್ ಅವರು ದೂರು ನೀಡಿದ್ದರು. ಮೆಸ್ಕಾ ಅಪರಾಧ ಪತ್ತೇದಳದ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ ಡೆಂಟಲ್ ಕಾಲೇಜಿಗೆ ಪಕ್ಕದ ಕೆಎಂಸಿ ಆಸ್ಪತ್ರೆಯಿಂದಲೇ ವಿದ್ಯುತ್ ಸಂಪರ್ಕವನ್ನು ಪಡೆದಿರುವುದು ಕಂಡು ಬಂತು.

ಮಂಗಳೂರು ಮಹಾನಗರಪಾಲಿಕೆಯಿಂದ ಅಥವ ಮೆಸ್ಕಾಂನಿಂದ ಯಾವುದೇ ಅನುಮತಿ ಇಲ್ಲದೆ ಕಳೆದ 2 ರಿಂದ 3 ವರ್ಷಗಳಿಂದಲೂ ಅಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ. ಈ ಬಗ್ಗೆ ಕಾಲೇಜಿನ ಸಿಬ್ಬಂದಿಗಳನ್ನು ವಿಚಾರಿಸಿದಾಗ ಸಿಬ್ಬಂದಿಗಳು ಸೂಕ್ತವಾದ ಪುರಾವೆಯನ್ನು ನೀಡಲು ವಿಫಲರಾಗಿದ್ದು, ಮೆಸ್ಕಾಂ ಅಧಿಕಾರಿಗಳ ಪ್ರಕಾರ ಕಾಲೇಜಿಗೆ ಸುಮಾರು ಎಂಟು ಕೋಟಿ ರೂಪಾಯಿಗಳಷ್ಟು ದಂಡವನ್ನು ಕಾನೂನಿನಡಿಯಲ್ಲಿ ಹಾಕಬಹುದಾಗಿದೆ ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English