- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಚೆಲುವಿಯ ಮನ ಕದ್ದರೆ 800 ಕೋಟಿ ವರದಕ್ಷಿಣೆ

Gigi [1]

ಹಾಂಕಾಂಗ್: ನೋಡಲು ರಾಜಕುಮಾರಿಯಂತಿರುವ ಹಾಂಕಾಂಗ್‌ನ ಹುಡುಗಿಗೆ ವರ ಬೇಕಾಗಿದೆ. ಈಕೆಯ ಪಾಣಿಗ್ರಹಣ ಮಾಡಿದ ಅದೃಷ್ಟವಂತ ನಿಜಕ್ಕೂ ದಿನಬೆಳಗಾಗುವುದರೊಳಗೆ ಕುಬೇರನಾಗುತ್ತಾನೆ. ಹೆಣ್ಣು ಮತ್ತು ಹೊನ್ನು ಇನ್ನೇನು ಬೇಕು? ಸ್ವರ್ಗಕ್ಕೆ ಕಿಚ್ಚು ಹಚ್ಚುವ ಹುರುಪು ಈಗಲೇ ಬಂದರೆ ಕೊಂಚ ತಾಳಿ ಮಾವ, ಮಗಳು ಹೇಳುವ ಕಂಡೀಷನ್‌ಗಳನ್ನು ಕೇಳಿ.

ಹಾಂಕಾಂಗ್ ಉದ್ಯಮಿ ಸೆಸಿಲ್ ಚಾವೊ, ತನ್ನ ಮಗಳ ಹೃದಯ ಗೆಲ್ಲುವ ಹುಡುಗನಿಗೆ 130 ಮಿಲಿಯನ್ ಡಾಲರ್ (815 ಕೋಟಿ ರೂ) ವರದಕ್ಷಿಣೆ ನೀಡುವುದಾಗಿ ಘೋಷಿಸಿದ್ದಾರೆ. ವಿವಾಹಿತರಿಗೂ ಚಾನ್ಸ್ ಇದೆ ಎಂದು ಅವರೇ ಹೇಳಿದ್ದಾರೆ.

2012ರಲ್ಲಿ 60 ಮಿಲಿಯನ್ ಡಾಲರ್ ಕೊಡುವುದಾಗಿ ಪ್ರಕಟಿಸಿದ್ದರು. ಜಗತ್ತಿನಾದ್ಯಂತ ಇಪ್ಪತ್ತು ಸಾವಿರ ಯುವಕರು ನಾ ಮುಂದು ತಾ ಮುಂದು ಎಂದು ಹಸೆಮಣೆ ಏರಲು ಸಜ್ಜಾಗಿದ್ದರು. ಉಹೂಂ ಸೆಸಿಲ್ ಸುಪುತ್ರಿ ಗಿಗಿ ಎಲ್ಲರನ್ನೂ ಒಲ್ಲೆಂದಳು.

ಏಕೆಂದರೆ ಆಕೆ ಸಲಿಂಗಕಾಮಿ. 2 ವರ್ಷಗಳ ಹಿಂದೆ 9 ವರ್ಷದ ಗೆಳತಿ ಇವಾ ಜತೆಯಲ್ಲಿ ಮದುವೆ ಆಗಿಬಿಟ್ಟಿದ್ದಾಳೆ. ಇದಕ್ಕೆ ಹಾಂಕಾಂಗ್‌ನಲ್ಲಿ ಅವಕಾಶವಿಲ್ಲ ಎಂಬ ಕಾರಣಕ್ಕೆ ಫ್ರಾನ್ಸ್‌ಗೆ ಹೋಗಿ ಲಗ್ನ ಮಾಡಿಕೊಂಡಿದ್ದಳು. ಆದರೆ ಎಲ್ಲ ಸಹೃದಯಿ ಅಪ್ಪಂದಿರಂತೆ, ತನ್ನ ಮಗಳು ಎಲ್ಲರಂತೆ ಸಂಸಾರವಂದಿಗಳಾಗಬೇಕು. ಮಕ್ಕಳನ್ನು ಹೆರಬೇಕು. ತಾನು ಅಜ್ಜನಾಗಬೇಕು ಎಂಬ ಆಸೆಯಿಂದ ಸೆಸಿಲ್ ಈ ಪ್ರಕಟಣೆ ಹೊರಡಿಸಿದ್ದಾರೆ.

Cecil-Chao [2]
”ನನ್ನ ಮಗಳ ವೈಯಕ್ತಿಕ ಬದುಕಿನ ಆಯ್ಕೆಗಳಿಗೆ ನಾನು ಅಡ್ಡಿ ಪಡಿಸಲು ಇಚ್ಛಿಸುವುದಿಲ್ಲ. ನಮ್ಮ ವಂಶ ಉದ್ಧಾರವಾಗಿ ಮೊಮ್ಮಕ್ಕಳೊಂದಿಗೆ ನಾನು ಆಡಬೇಕು. ಜತೆಗೆ ಅಳಿಯ, ನನ್ನ ಉದ್ಯಮವನ್ನೂ ಸುಸೂತ್ರವಾಗಿ ನಡೆಸಬೇಕು,” ಇದೇ ನನ್ನ ಕನಸು ಎನ್ನುತ್ತಾರೆ ಅವರು. ಭಾವಿ ಅಳಿಯನಿಗೆ ವರದಕ್ಷಿಣೆ ಮೊತ್ತ ಏರಿಕೆ ಮಾಡಿದ ಅಪ್ಪನ ಬಗ್ಗೆ ಮಗಳು ಮುನಿಸಿಗೊಂಡಿದ್ದಾಳೆ. ಪುರುಷ ಪ್ರತಿಸ್ಪರ್ಧಿ ಬರುವುದನ್ನು ಇವಾ ಕೂಡ ಅಸಂತೋಷಗೊಂಡಿದ್ದಾಳೆ.

”ಒಬ್ಬ ಹುಡುಗನನ್ನು ಸಂಗಾತಿಯಾಗಿ ಸ್ವೀಕರಿಸಿ ಜೀವನ ಸವೆಸಲು ತಯಾರಿದ್ದೇನೆ. ನನ್ನ ಮೇಲಿರುವ ಪ್ರೀತಿಯಿಂದ ಅಪ್ಪ ಮಾಡುತ್ತಿರುವ ವಿಭಿನ್ನ ಪ್ರಯತ್ನಕ್ಕೆ ನನ್ನ ವಿರೋಧವಿಲ್ಲ. ಆದರೆ, ಹಣದಾಸೆಗೆ ನನ್ನನ್ನು ಇಷ್ಟ ಪಡುವ ವ್ಯಕ್ತಿಯನ್ನು ನಾನೊಲ್ಲೆ. ಡ್ಯಾಡಿ ಐಲವ್‌ಯೂ. ಆದರೆ ಪದೇ ಪದೇ ವರದಕ್ಷಿಣೆ ಘೋಷಣೆ ಮಾಡುವುದನ್ನು ನಿಲ್ಲಿಸಿ,” ಎಂದು ಗಿಗಿ ತಿಳಿಸಿದ್ದಾಳೆ.

ಸಿನಿಮಾ ಆಗಲಿದ್ದಾಳೆ ಗಿಗಿ
ಉದ್ಯಮಿ ಸೆಸಿಲ್ ಮತ್ತು ಆತನ ಮಗಳು ಗಿಗಿ ಬದುಕಿನ ಬಗ್ಗೆ ಸಿನಿಮಾವೊಂದು ತೆರೆಗೇರಲು ಸಿದ್ಧವಾಗುತ್ತಿದೆ. ಬ್ರಿಟನ್‌ನ ಖ್ಯಾತ ನಿರ್ದೇಶಕ ಸಚ ಬಾರೊನ್ ಕೊಹೆನ್ ಈ ಕುರಿತು ಸಿನಿಮಾ ತೆಗೆಯಲು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ.

ಗಿಗಿ ಕರಾರು
ತನಗೆ ತಕ್ಕ ವರನನ್ನು ಹುಡುಕಲು ಉದ್ಯಮಿ ಸೆಸಿಲ್ ಮಾಡುತ್ತಿರುವ ಪ್ರಯತ್ನದ ಬಗ್ಗೆ ಬೇಡ ಬೇಡ ಎನ್ನುತ್ತಲೇ ಒಪ್ಪಿಗೆ ಸೂಚಿಸಿರುವ ಆಕೆ, ಹಣದಾಸೆಗೆ ವಿವಾಹವಾಗುವ ಹುಡುಗನನ್ನು ಒಲ್ಲೆ ಎನ್ನುತ್ತಿದ್ದಾಳೆ. ಹಾಗಾಗಿ ಗಿಗಿ ವಿವಾಹವಾಗುವ ಹುಡುಗ ಧರ್ಮಾರ್ಥ ಕಾರ್ಯಗಳಿಗಾಗಿ ಸ್ಥಾಪಿಸಿರುವ ಟ್ರಸ್ಟ್‌ವೊಂದಕ್ಕೆ ತನಗೆ ವರದಕ್ಷಿಣೆಯಾಗಿ ಬಂದ ಹಣವನ್ನು ಕೊಡಬೇಕೆಂಬುದು ಕರಾರು ಹಾಕಿದ್ದಾಳೆ. ನೆನೆಗುದಿಗೆ ಬಿದ್ದಿದ್ದ ರಂಗಮಂದಿರ, ಅಂಬೇಡ್ಕರ್‌ ಭವನ, ಸರ್ವಿಸ್‌ ಬಸ್‌ ನಿಲ್ದಾಣ ಈ ವರ್ಷದಲ್ಲಿ ನಿರ್ಮಾಣ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಅವರು ವಿವರಿಸಿದರು.