ಸಾಮಸಂಗ್‌ ಪ್ರಸ್ತುತ ಪಡಿಸಿದೆ ಎಲ್ಲಕ್ಕಿಂತ ದುಬಾರಿ ಟ್ಯಾಬ್ಲೆಟ್‌

5:13 PM, Friday, March 7th, 2014
Share
1 Star2 Stars3 Stars4 Stars5 Stars
(5 rating, 6 votes)
Loading...

ನವದೆಹಲಿ: ಮೊಬೈಲ್ ಕಂಪೆನಿ ಸಾಮಸಂಗ್‌‌ ದೇಶದಲ್ಲಿ ಅತಿ ದುಬಾರಿ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದೆ .
ಇದರ ಬೆಲೆ ಕೇವಲ 65,575 ರೂಪಾಯಿಗಳು ಮಾತ್ರ. ಇದರ ಜೊತೆಗೆ 3,799 ರೂಪಾಯಿಯ ಕವರ್‌ ಉಚಿತವಾಗಿ ನೀಡಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಗ್ಯಾಲಾಕ್ಸಿ ನೋಟ್‌ ಫ್ರೋನಲ್ಲಿ 2560X1600 ರಿಜೊಲ್ಯೂಶನ್‌ನ 12.2 ಇಂಚಿನ ಸೂಪರ್ ಎಲ್‌ಸಿಡಿ ಸ್ಕ್ರೀನ್‌ ಇದೆ. ಈ ದುಬಾರಿ ಟ್ಯಾಬ್ಲೆಟ್‌‌ ಆಂಡ್ರೈಡ್‌ 4.4 ಅಪರೆಟಿಂಗ್‌ ಸಿಸ್ಟಮ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಈ ಹೊಸ ಟ್ಯಾಬ್ಲೆಟ್‌‌ನಲ್ಲಿ 1.9 ಗಿಗಾಹರ್ಡ್ಸ್‌‌ ಕಾಒಕ್ಟ್‌ ಕೊರ ಪ್ರೋಸೆಸರ್‌ ಜೊತೆಗೆ 3 ಜಿಬಿ ರ್ಯಾಮ ಇದೆ. ಇದರ ಇಂಟರ್‌‌ನಲ್ ಸ್ಟೋರೇಜ್ 32 ಜಿಬಿ ಇದ್ದರೆ , ಇದರಲ್ಲಿ 64 ಜಿಬಿವರೆಗೂ ಮೆಮೊರಿ ಕಾರ್ಡ್‌ ಅಳವಡಿಸಬುದಾಗಿದೆ. ಎದುರುಗಡೆ 2 ಮೆಗಾ ಪೆಕ್ಸಲ್‌ ಕ್ಯಾಮೆರಾ ಇದ್ದರೆ
ಹಿಂಬದಿಯಲ್ಲಿ 8 ಮೆಗಾಪೆಕ್ಸಲ್ ರಿಯರ್ ಕ್ಯಾಮೆರಾ ಇದೆ.

ಈ ದುಬಾರಿ ಟ್ಯಾಬ್ಲೆಟ್‌‌ನಲ್ಲಿ 2ಜಿ , 3ಜಿ, ವೈಫೈ , ಬ್ಯ್ಲೂಟೂಥ್ 4.0 , ಮೈಕ್ರೊ ಯುಎಸ್‌‌ಬಿ 3.0 ಕನೆಕ್ಟಿವಿಟಿ ಸೌಲಭ್ಯಗಳಿವೆ. ಈ ಟ್ಯಾಬ್ಲೆಟ್‌‌ನಲ್ಲಿ 9500 ಎಮ್‌‌ಎಎಚ್‌‌ ಬ್ಯಾಟರಿ ಇದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English