- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರಾವಳಿ ಹುಡುಗಿ ನೇಹಾ ಕನ್ನಡ ಚಿತ್ರ ‘ಮುಂಗಾರು ಮಳೆ 2′ ರಲ್ಲಿ ನಾಯಕಿ

Neha Shetty [1]

ಮಂಗಳೂರು : ಶಶಾಂಕ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಮುಂಗಾರು ಮಳೆ 2’ ಚಿತ್ರಕ್ಕೆ ಕರಾವಳಿ ಬೆಡಗಿ 2014ರ ‘ಮಿಸ್ ಮಂಗಳೂರು ಚೆಲುವೆ’ ನೇಹಾ ಶೆಟ್ಟಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರದ ನಾಯಕ ನಟನಾಗಿ ಆಭಿನಯಿಸಲಿದ್ದಾರೆ.

ನಿರ್ದೇಶಕ ಶಶಾಂಕ್ ತಮ್ಮ ಚಿತ್ರಕ್ಕೆ ಗ್ಲಾಮರಸ್ ಲುಕ್, ಜೊತೆಗೆ ಸ್ಟೈಲೀಷ್ ಆಗಿರುವ ಹೊಸ ಹುಡುಗಿಯ ಹುಡುಕಾಟದಲ್ಲಿದ್ದರು. ಅಡೀಷನ್ ಸಂದರ್ಭದಲ್ಲಿ ಕೊನೆಯದಾಗಿ ನೇಹಾ ಶೆಟ್ಟಿ ಆಯ್ಕೆಯಾದರು. ಇದೀಗ ‘ಮುಂಗಾರು ಮಳೆ 2’ ಚಿತ್ರಕ್ಕೆ ನಾಯಕಿ ಪಕ್ಕಾ ಆಗಿರುವುದರಿಂದ ಇದೇ ಜುಲೈ 28 ರಿಂದ ಚಿತ್ರದ ಶೂಟಿಂಗ್ ಶುರು ಮಾಡಲು ಶಶಾಂಕ್ ಪ್ಲಾನ್ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಬೇಗ ಮುಗಿದರೆ ‘ಮುಂಗಾರು ಮಳೆ’ ಡಿಸೆಂಬರ್ 26 ರಂದು ರಿಲೀಸ್ ಆಗಲಿದೆ.