- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರೋಟರಿಯವರಿಂದ ಅಭಿನಂದನಾರ್ಹ ಸೇವೆ ಶ್ರೀ. ಯೋಗೀಶ್ ಭಟ್

Rotary Bejai [1]

ಮಂಗಳೂರು : ದ.ಕ.ಜಿ.ಪಂ. ಹಿ.ಪ್ರಾ ಶಾಲೆ ಕಾಪಿಕಾಡು ಶಾಲೆಗೆ ಸಂಪೂರ್ಣ ಸುಣ್ಣ ಬಣ್ಣ ಬಳಿದು (ಪೈಂಟಿಂಗ್) ಶಾಲೆಯ ಸುತ್ತಮುತ್ತ ಬೆಳೆದಂತಹ ಹುಲ್ಲು ಮತ್ತು ಗಿಡಗಳನ್ನು ಕಡಿದು ಸ್ವಚ್ಛಗೊಳಿಸಿ ಶಾಲೆಯ ಅಂದವನ್ನು ಹೆಚ್ಚಿಸುವಲ್ಲಿ ಸುಮಾರು ರೂ. 1,50,000.00 ವರೆಗೆ ವೆಚ್ಛ ಮಾಡಿದ ಕುರಿತು ಸೇವೆಯನ್ನು ಗುರುತಿಸಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರಿಂದ ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್‌ನ ಅಧ್ಯಕ್ಷರಾದ ಶ್ರೀ. ಇಲಿಯಾಸ್ ಸಾಂಟಿಸ್ ಇವರನ್ನು ಅಭಿನಂದಿಸಲಾಯಿತು.

ಸಭೆಯ ಮುಖ್ಯ ಅತಿಥಿಯಾಗಿ ಮಾಜಿ ಶಾಸಕರಾದ ಶ್ರೀ. ಎನ್. ಯೋಗೀಶ್ ಭಟ್ ಕ್ಲಬ್‌ನ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡುವ ಮೂಲಕ ಸಮಾಜದಲ್ಲಿ ಹೆಚ್ಚಿನ ಕೆಲಸ ಮಾಡುವಂತಾಗಲಿ ಮತ್ತು ಕನ್ನಡ ಶಾಲೆಗೆ ಮಕ್ಕಳು ಆಕರ್ಷಿತರಾಗಲು ಶಾಲೆಯ ಪರಿಸರ ಸ್ವಚ್ಛತೆಯಿಂದಿರಬೇಕು ಎಂದು ತಿಳಿಸಿದರು. ರೋಟರಿ ಕ್ಲಬ್ ಆಫ್ ಮಂಗಳೂರು ಸೆಂಟ್ರಲ್ ಈಗಾಗಲೇ ೫ ಸರಕಾರಿ ಶಾಲೆಗಳಿಗೆ ಸಂಪೂರ್ಣ ಬರೆಯುವ ಪುಸ್ತಕ ನೀಡಿದ್ದು, ಮತ್ತು ೫ ಶಾಲೆಗಳನ್ನು ದತ್ತು ತೆಗೆದುಕೊಂಡು ಶಾಲೆಯ ಅಭಿವೃದ್ಧಿಗೆ ದುಡಿಯುತ್ತಿದ್ದು, ಈ ಕೆಲಸವನ್ನು ಕಂಡು ಶಾಸಕರಾದ ಶ್ರೀ ಯೋಗೀಶ್ ಭಟ್ ಕ್ಲಬ್‌ನ ಎಲ್ಲಾ ಪದಾಧಿಕಾರಿಗಳನ್ನು ಹಾಗೂ ಎಲ್ಲಾ ಸದಸ್ಯರನ್ನು ಅಭಿನಂದಿಸಿದರು. ಸಭಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶ್ರೀ ಪೀತಾಂಬರ್‌ರವರು ಅಭಿನಂದಿಸುತ್ತಾ ಇನ್ನು ಹೆಚ್ಚಿನ ಸೇವೆಯು ರೋಟರಿ ಕ್ಲಬ್‌ನಿಂದ ದೊರೆಯಲೆಂದು, ಹೆಚ್ಚಿನ ಜನ ಸೇವೆ ಮಾಡುವ ಶಕ್ತಿ ನೀಡಲೆಂದು ದೇವರು ಅನುಗ್ರಹಿಸಲಿ ಎಂದು ಹಾರೈಸಿದರು. ದೇರೆಬೈಲು ವಾರ್ಡಿನ ಕಾರ್ಪೋರೇಟರ್ ಶ್ರೀ ರಜನೀಶ್ ಸಂದರ್ಭೋಚಿತವಾಗಿ ಮಾತನಾಡಿದರು.

ಸಭೆಯಲ್ಲಿ ರೋಟರಿ ಕ್ಲಬ್‌ನ ಮಾಜಿ ಗವರ್ನರ್ ಡಾ| ದೇವದಾಸ್ ರೈ, ವಿಭಾಗೀಯ ಸೇನಾನಿ ಶ್ರೀ ರಾಜಗೋಪಾಲ್ ರೈ, ಜಿಲ್ಲಾ ರೋಟರಿ ನಾಯಕರಾದ ರ್ಶರೀ ಶೇಖರ್ ಶೆಟ್ಟಿ, ಕ್ಲಬ್‌ನ ಮಾಜಿ ಅಧ್ಯಕ್ಷರಾದ ಸಂತೋಷ್ ಎ., ಸದಸ್ಯರಾದ ರವಿ ಜಲಾನ್, ಡಾ| ಜಯಪ್ರಕಾಶ್ ಪೂಂಜಾ, ಸದಾನಂದ ಗಾಂಬೀರ, ರೊನಾಲ್ಡ್, ನವೀನ್ ಹಾಗೂ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪಾವನಾ ಸ್ವಾಗತಿಸಿದರು. ಅಧ್ಯಾಪಕಿ ಶ್ರೀಮತಿ ಅರುಣ ಕಾರ್ಯಕ್ರಮ ನಿರ್ವಹಿಸಿದರು.