- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಲೆ ಮತ್ತು ಸಾಹಿತ್ಯಗಳೆರಡರ ಕೌಶಲ ಪ್ರಕಾಶಕ್ಕೆ ಗಮಕ ಕಲೆ ಅವಕಾಶ ನೀಡುತ್ತದೆ

kumbale [1]ಕುಂಬಳೆ: ನಾಡಿನ ಸಾಂಪ್ರದಾಯಿಕ ಕಲೆಯಾದ ಗಮಕ ಪ್ರಕಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಸಮೂಹ ಸ್ವ ಆಸಕ್ತಿಯಿಂದ ಮಾಡಬೇಕು. ಕಲೆ ಮತ್ತು ಸಾಹಿತ್ಯಗಳೆರಡರ ಕೌಶಲ ಪ್ರಕಾಶಕ್ಕೆ ಗಮಕ ಕಲೆ ಅವಕಾಶ ನೀಡುತ್ತದೆಯೆಂದು ಖ್ಯಾತ ಕಲಾವಿದ ಎಸ್ ಎನ್ ಪಂಜಾಜೆ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಗಡಿನಾಡ ಘಟಕದ ಆಶ್ರಯದಲ್ಲಿ ಕಾಸರಗೋಡಿನ ಹವ್ಯಕ ಭವನದಲ್ಲಿ ಇತ್ತೀಚೆಗೆ ನಡೆದ ೩ ದಿನಗಳ ಗಮಕ ಕಲಾ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಗಮಕ ಕಲಾ ಪರಿ ಷತ್ತಿನ ಕೇರಳ ಗಡಿನಾಡ ಘಟಕಾಧ್ಯಕ್ಷ ಟಿ.ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಗಮಕ ಕಲಾ ಪರಿಷತ್ತಿನ ಕರ್ನಾಟಕ ರಾಜ್ಯಾಧ್ಯಕ್ಷ ಕಲಾಶ್ರೀ ಎಂ.ಆರ್ ಸತ್ಯನಾರಾಯಣ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿದ್ದರು.ಜಯಲಕ್ಷ್ಮೀ ಕಾರಂತ್,ಯು.ಎಸ್ ವಿಶ್ವೇಶ್ವರ ಭಟ್,ಯಜ್ಞೇಶ್,ವಿ.ಬಿ.ಕುಳಮರ್ವ ಇತರ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿದ ಸಾಹಿತ್ಯ ಪ್ರಕಾರಗಳ ಕುರಿತು ತರಬೇತಿ ನೀಡಿದರು.ಖ್ಯಾತ ವೈದ್ಯ ಡಾ.ವೆಂಕಟಗಿರಿ ಹಾಗೂ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಶುಭಾಶಂಸನೆಗೈದರು.ಡಾ.ಯು.ಮಹೇಶ್ವರಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.ಹಿರಿಯ ಗಮಕಿ ಬೆಳ್ಳಿಗೆ ನಾರಾಯಣ ಮಣಿಯಾನಿ,ಉಡುಪಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಸತೀಶ್ ಕುಮಾರ್ ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಾದ ಪ್ರಣಮ್ಯ,ಪ್ರಣೀತ,ಭೂಮಿಕಾ,ಮೇಘಶ್ರೀ,ಸುಶ್ಮಿತ್,ವೃಂದಾ ಸುಜಿತ್ ಕುಮಾರ್,ಅನುರಾಧಾ ಮೊದಲಾದವರು ಷಟ್ಪಧಿ,ತ್ರಿಪದಿ,ರಗಳೆ ಛಂದಸ್ಸುಗಳಲ್ಲಿ ಕೃತಿಗಳನ್ನು ರಚಿಸಿ ಮಂಡಿಸಿದರು.ಇವರಿಗೆ ಪ್ರಧಾನ ಕಾರ್ಯದರ್ಶಿ ವಿ.ಬಿ.ಕುಳಮರ್ವ ಪುಸ್ತಕ ಬಹುಮಾನಗಳನ್ನಿತ್ತರು.ಶ್ರೀಧರ ಭಟ್,ಸರಸ್ವತಿ,ಪ್ರದೀಪ್,ಶ್ರದ್ದಾ ಎನ್ ಮೊದಲಾದವರು ಶಿಬಿರದ ಕುರಿತು ಅಭಿಪ್ರಾಯ,ಅನಿಸಿಕೆಗಳನ್ನು ತಿಳಿಸಿದರು.

ಕು.ಸುಶ್ಮಿತಾ ಸ್ವಾಗತಿಸಿ,ಸುಜಿತ್ ವಂದಿಸಿದರು.ವಿ.ಬಿ.ಕುಳಮರ್ವ ಕಾರ್ಯಕ್ರಮ ನಿರೂಪಿಸಿದರು.