ಟಿಪ್ಪು ಜಯಂತಿಯನ್ನು ವಿರೋಧಿಸಿ ಹಿಂದು ಜನಜಾಗೃತಿ ಸಮಿತಿಯ ಪ್ರತಿಭಟನೆ

3:12 PM, Tuesday, November 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

HJVಮಂಗಳೂರು: ಕರ್ನಾಟಕದ ಕಾಂಗ್ರೆಸ್ ಸರ್ಕಾರ ನ. 10ರಂದು ಟಿಪ್ಪು ಸುಲ್ತಾನ್‌ ಜಯಂತಿಯನ್ನು ಆಚರಿಸಲು ನಿರ್ಧರಿಸಿರುವುದನ್ನು ವಿರೋಧಿಸಿ ಹಿಂದು ಜನಜಾಗೃತಿ ಸಮಿತಿಯ ಆಶ್ರಯದಲ್ಲಿ ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಲಾಯಿತು.

ಮತಾಂಧ, ಅತ್ಯಾಚಾರಿ, ಕ್ರೂರಿ, ಹಾಗೂ ಮಹಿಳಾ ವಿರೋಧಿಯಾಗಿದ್ದ ಟಿಪ್ಪು ಚಿತ್ರದುರ್ಗದ ಕೋಟೆಯನ್ನು ಕಪಟತನದಿಂದ ವಶಪಡಿಸಿಕೊಂಡು ಒನಕೆ ಓಬವ್ವರಂತಹ ನೂರಾರು ಮಹಿಳಾ ಮಣಿಗಳನ್ನು ನೀಚತನದಿಂದ ಕೊಂದಿದ್ದ. ಇಂತವರ ಜಯಂತಿಯನ್ನು ಆಚರಿಸುವುದು ಕನ್ನಡ ನಾಡಿನ ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಮುಂತಾದ ರಣರಾಗಿಣಿಯರಿಗೆ ಮಾಡಿದ ಅವಮಾನವಾಗಿದೆ ಎಂದು ಹಿಂದು ಜನಜಾಗೃತಿ ಸಮಿತಿಯ ರಣರಾಗಿಣಿ ಶಾಖೆಯ ಭವಾನಿ ಪ್ರಭು ಹೇಳಿದರು.

ಟಿಪ್ಪುವಿನ ವಂಶಜರು ಅವನ ಆಡಳಿತವನ್ನು ಮತ್ತೆ ಕರ್ನಾಟಕ, ಕೇರಳದಲ್ಲಿ ಇಸ್ಲಾಮಿಕ್ ಹೆಸರಿನಲ್ಲಿ ರಾಜ್ಯ ತರಲು ಪ್ರಯತ್ನ ಮಾಡುತ್ತಿದ್ದಾರೆಂದು ಇತ್ತೀಚೆಗೆ ಬೆಂಗಳೂರಿನಲ್ಲಿ ರುದ್ರೇಶ ಹತ್ಯೆ ರೂವಾರಿಗಳು ಪೊಲೀಸ್‌‌ ವಿಚಾರಣೆಯ ವೇಳೆ ಹೇಳಿದ್ದಾರೆ. ಅದಕ್ಕಾಗಿ ಕರ್ನಾಟಕ ಮತ್ತು ಕೇರಳ ಸೇರಿದಂತೆ ಸಾವಿರಾರು ಕಾಲೇಜು ಯುವತಿಯರು, ಸಮಾಜದ ಮಹಿಳೆಯರನ್ನು ಲವ್ ಜಿಹಾದ್, ರೋಮಿಯೋ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಅಪಹರಿಸಿ, ಅವರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರ ಮಾಡಿ, ತದನಂತರ ಅವರನ್ನು ಭಯೋತ್ಪದನಾ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ದುಷ್ಕೃತ್ಯಕ್ಕೆ ಕುಮ್ಮಕ್ಕು ನೀಡುವ ಟಿಪ್ಪು ಸುಲ್ತಾನನ ಜಯಂತಿಯನ್ನು ಆಚರಿಸುವುದು ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಎಷ್ಟರ ಮಟ್ಟಿಗೆ ಸರಿ? ನಿರಂತರ ಮಹಿಳೆಯರ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿಯವರ ಮಹಿಳಾ ಸಬಲೀಕರಣದ ಆದರ್ಶ ಇದೇನಾ? ಯಾವ ಮಾನದಂಡದ ಆಧಾರದ ಮೇಲೆ ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಭವಾನಿ ಪ್ರಭು ಆಗ್ರಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English