- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆ್ಯಕ್ಸಿಸ್‌ ಬ್ಯಾಂಕ್‌ಗೆ ಸೇರಿದ 7.5 ಕೋಟಿ ಅಪಹರಣ, ಮೂವರ ಬಂಧನ

axis-moneyಮಂಗಳೂರು: ಮೇ. 12ರಂದು ಬೆಂಗಳೂರಿನ ಆ್ಯಕ್ಸಿಸ್‌ ಬ್ಯಾಂಕ್‌ಗೆ ಸೇರಿದ ಕೋಟ್ಯಾಂತರ ರೂ. ಹಣದೊಂದಿಗೆ ಪರಾರಿಯಾದ ನಾಲ್ವರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ  ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ವಾಹನ ಚಾಲಕ ಕರಿಬಸಪ್ಪ(24), ಗನ್ ಮ್ಯಾನ್ ಪೂವಣ್ಣ(38) ಮತ್ತು ಕಾರ್ಯಪ್ಪ(46) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ 6.50ಕೋಟಿ ಹಣ ವಶಕ್ಕೆ ಪಡೆಯಲಾಗಿದೆ. ನಾಪತ್ತೆಯಾಗಿದ್ದ ಹಣ ಸಾಗಿಸುತ್ತಿದ್ದ ವಾಹನ ಮೈಸೂರಿನಲ್ಲಿ ಪತ್ತೆ… ಹಣದೊಂದಿಗೆ ಸಿಬ್ಬಂದಿ ಪರಾರಿ

ಉಳಿದ ಒಂದು ಕೋಟಿ ಸಹಿತ ಇನ್ನೊಬ್ಬ ಆರೋಪಿಯ ಪತ್ತೆಗೆ ಶೋಧ ಕಾರ್ಯ ಮುಂದುವರೆದಿದೆ. ಕೊಡಗು ಪೊಲೀಸರ ಸಹಕಾರದಿಂದ ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಮಡಿಕೇರಿ ತಾಲೂಕಿನ ಸೋಮವಾರಪೇಟೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು.

ಮೇ. 12ರಂದು ಈ ಘಟನೆ ನಡೆದಿತ್ತು. ಮಂಗಳೂರಿನಿಂದ ಬೆಂಗಳೂರಿನ ಆ್ಯಕ್ಸಿಸ್‌ ಬ್ಯಾಂಕ್‌ಗೆ ಹಣ ಸಾಗಿಸುತ್ತಿದ್ದ ವಾಹನ ಇದ್ದಕ್ಕಿದಂತೆ ನಾಪತ್ತೆಯಾಗಿತ್ತು. ನಂತರ ಮೈಸೂರು ಸಮೀಪ ಹುಣಸೂರು ತಾಲೂಕಿನ ಕಲ್ಲಹಳ್ಳಿ ಬಳಿ ಖಾಲಿ ವಾಹನ ಪತ್ತೆಯಾಗಿತ್ತು. ಹಣ ಸಾಗಿಸುತ್ತಿದ್ದವರೇ ಹಣದ ಸಮೇತ ಪರಾರಿಯಾಗಿದ್ದರು.

7.50ಕೋಟಿ ಹಣದೊಂದಿಗೆ ಮಂಗಳೂರಿನ SIS PROSEGURE HOLDINGS ಸಂಸ್ಥೆ ಸಿಬ್ಬಂದಿ ನಾಪತ್ತೆಯಾಗಿದ್ದರು. ಮಂಗಳೂರಿನ ಯೆಯ್ಯಾಡಿಯ ಆ್ಯಕ್ಸಿಸ್‌ ಬ್ಯಾಂಕಿನಿಂದ ಕೋರಮಂಗಲದ ಶಾಖೆಗೆ ತಲುಪಿಸಬೇಕಾಗಿದ್ದ ಹಣ ಇದಾಗಿತ್ತು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಂಪೆನಿ ಇನ್‌‌ಚಾರ್ಜ್ ಸಚಿನ್ ಎಂಬುವರು ಪೊಲೀಸ್ ದೂರು ನೀಡಿದ್ದರು.