“ಸುಲ್ತಾನ” ಅಲ್ಲ “ಕ್ರೂರಿ” ಆಗಿದ್ದ ಟಿಪ್ಪು ಜಯಂತಿಯನ್ನು ರದ್ದುಗೊಳಿಸಿ !, ಹಿಂದೂಗಳ ಒಮ್ಮತ ಬೇಡಿಕೆ

5:13 PM, Thursday, November 2nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

hindu jagarana vedikeಮಂಗಳೂರು : ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ನಂತರ ಕರ್ನಾಟಕದ ರಾಜ್ಯಪಾಲರಿಗೆ ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಹಿಂದೂ ಜನಜಾಗೃತಿ ಸಮಿತಿಯ ಉಡುಪಿ ಜಿಲ್ಲಾ ಸಮನ್ವಯಕರಾದ ಶ್ರೀ ವಿಜಯ್ ಕುಮಾರ್, ಹಿಂದೂ ಮಹಾಸಭಾದ ಶ್ರೀ ಧರ್ಮೇಂದ್ರ, ಹಿಂದೂ ಯುವಸೇನೆಯ ಜಿಲ್ಲಾಧ್ಯಕ್ಷರಾದ ಶ್ರೀ ವೀರಪ್ಪ ಮೂಡುಶೆಡ್ಡೆ ಮಾತನಾಡಿದರು.

ಹಿಂದೂಗಳ ಹತ್ಯೆ ಮತ್ತು ಮತ್ತು ಮತಾಂತರಿಸುವ ಕ್ರೂರ ಟಿಪ್ಪು ಸುಲ್ತಾನದ ಜಯಂತಿಯನ್ನು ಆಚರಿಸುವುದು, ಹಿಂದೂಗಳ ಗಾಯದ ಮೇಲೆ ಬರೆ ಎಳೆದಂತೆಯೇ ಸರಿ. ಹಿಂದೂಗಳ ಹತ್ಯೆ ಮತ್ತು ಮತ್ತು ಮತಾಂತರಿಸುವ ಕ್ರೂರ ಟಿಪ್ಪು ಸುಲ್ತಾನದ ಜಯಂತಿಯನ್ನು ಆಚರಿಸುವುದು, ಇದು ಹಿಂದೂಗಳ ಗಾಯದ ಮೇಲೆ ಉಪ್ಪು ಸವರಿದಂತೆ.

hindu jagarana vedikeಶ್ರೀ ವಿಜಯ್ ಕುಮಾರ್ ಉಡುಪಿ ಜಿಲ್ಲಾ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ: ಟಿಪ್ಪುವಿಗೆ ಅಧಿಕಾರ ಸಿಕ್ಕಿದ ಕೂಡಲೇ ರಾಜ್ಯದ ಅನೇಕ ಊರುಗಳ ಹಿಂದೂ ಹೆಸರುಗಳನ್ನು ಅಳಿಸಿ, ಇಸ್ಲಾಮಿ ಹೆಸರನ್ನು ಬಲವಂತವಾಗಿ ಮರುನಾಮಕರಣ ಮಾಡಿದನು. ಮೈಸೂರನ್ನು ಇಸ್ಲಾಮೀ ರಾಜ್ಯವೆಂದು ಘೋಷಿಸಿ, ನಾವು ಇಸ್ಲಾಮಿ ಸುಲ್ತಾನರು ಎಂದು ಹೇಳಿದನು. ಅಷ್ಟೇ ಅಲ್ಲದೇ ತನ್ನ ರಾಜ್ಯದಲ್ಲಿನ ಎಲ್ಲಾ ಕಾಫೀರರನ್ನು(ಮುಸಲ್ಮಾನರನ್ನು ಬಿಟ್ಟು ಉಳಿದ ಸಮುದಾಯ ಅಂದರೆ ಹಿಂದೂ) ಮತಾಂತರಿಸಿ ಮುಸಲ್ಮಾನನಾಗಿಸುವೆ ಎಂಬ ಪ್ರತಿಜ್ಞೆಯನ್ನು ತೆಗೆದುಕೊಂಡನು ಮತ್ತು ತಮ್ಮ ಪ್ರತಿಜ್ಞೆಯನ್ನು ಪೂರ್ಣಗೊಳಿಸಲು ತನ್ನ ರಾಜ್ಯದಲ್ಲಿನ ಎಲ್ಲಾ ಹಿಂದೂಗಳನ್ನು ಮುಸಲ್ಮಾನವನ್ನಾಗಲು ಆದೇಶವನ್ನು ಕೊಟ್ಟನು.

ಶ್ರೀ ಧರ್ಮೇಂದ್ರ, ಹಿಂದೂ ಮಹಾಸಭಾ: ಟಿಪ್ಪು ಹಿಂದೂವಿರೋಧಿ, ಯಾಕೆಂದರೆ ಸುಮಾರು 27 ಸಾವಿರಕ್ಕಿಂತಲೂ ಹೆಚ್ಚು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿ ದೇವಾಲಯದ ವಿಗ್ರಹಗಳನ್ನು ಮಸೀದಿಗಳ ಮೆಟ್ಟಿಲುಗಳನ್ನಾಗಿಸಿದ ವಿಧ್ವಂಸಕ. ಕರ್ನಾಟಕದಲ್ಲಿ ಕನ್ನಡದ ಬದಲಾಗಿ ಪರ್ಷಿಯನ್ ಭಾಷೆಯನ್ನು ಹೇರಿಸಲು ಪ್ರಯತ್ನ ಮಾಡಿದನು. ಯಾವುದೇ ಅರ್ಥ ಇಲ್ಲದೇ ಸರಕಾರವು ಅವನ ಜಯಂತಿಯನ್ನು ಆಚರಿಸಲು ಹೊರಟಿದ್ದು ಹಿಂದೂಗಳ ಧಾರ್ಮಿಕ ಭಾವನೆಗಳ ಮೇಲೆ ಮಾಡಿದ ಅನ್ಯಾಯವೇ ಆಗಿದೆ.

hindu jagarana vedikeಶ್ರೀ ವೀರಪ್ಪ ಮೂಡುಶೆಡ್ಡೆ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷರು:ಮುಸಲ್ಮಾನರ ಆಚರಣೆಯಲ್ಲಿ ಯಾವುದೇ ವ್ಯಕ್ತಿಯ ಜಯಂತಿ ಆಚರಿಸಲು ನಿರ್ಬಂಧ ಇರುವಾಗ ಸರಕಾರ ಮುಸಲ್ಮಾನರ ಒಪ್ಪಿಗೆ ಇಲ್ಲದೇ ಟಿಪ್ಪು ಜಯತಿ ಆಚರಿಸಲು ಹೊರಟಿರುವುದು ರಾಜಕೀಯ ಲಾಭ ಪಡೆದು ರಾಜ್ಯದಲ್ಲಿ ಅರಾಜಕತೆಯನ್ನು ನಿರ್ಮಾಣ ಮಾಡುವುದಾಗಿದೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ತಕ್ಷಣವೇ ಟಿಪ್ಪು ಜಯಂತಿ ಆಚರಿಸುವುದನ್ನು ನಿಲ್ಲಿಸಬೇಕು.

ಸನಾತನ ಸಂಸ್ಥೆಯ ವಕ್ತಾರರಾದ ಸೌ ಸಂಗೀತಾ ಪ್ರಭು ಮಾತನಾಡಿ, ಲಕ್ಷಾಂತರ ಹಿಂದೂಸ್ತ್ರೀಯರನ್ನು ಅತ್ಯಾಚಾರ ಮಾಡಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಿದ ಟಿಪ್ಪು ಕ್ರೂರಿ ರಾಜನಾಗಿದ್ದನು ಎಂದರು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ, ಶ್ರೀ ಪ್ರಭಾಕರ್ ನಾಯ್ಕ್, ಲೋಕೇಶ್ ಕುತ್ತಾರ್, ರಣರಾಗಿಣಿಯ ಸೌ.ಲಕ್ಷ್ಮೀ ಪೈ, ಸನಾತನ ಸಂಸ್ಥೆಯ ಸೌ ಸಂಗೀತಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English