ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ನ ಚಮಕ್ ಸಿನಿಮಾ ಇಂದು (ಡಿ.29) ರಾಜ್ಯಾದ್ಯಂತ ರಿಲೀಸ್ ಆಗಿದೆ. ಮನರಂಜನೆಯ ಜತೆಗೆ ಕೌಟುಂಬಿಕ ಹಿನ್ನೆಲೆಯ ಕತೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರಂತೆ ನಿರ್ದೇಶಕ ಸುನಿ.
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಅಡಿಯಲ್ಲಿ ಟಿ.ಆರ್ ಚಂದ್ರಶೇಖರ್ ಚಿತ್ರವನ್ನು ನಿರ್ಮಾಣ ಮಾಡಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಸಂತೋಷ್ ರಾಯ್ ಪತಾಜೆ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ಸಾಧು ಕೋಕಿಲ, ಹನುಮಂತೆ ಗೌಡ್ರು, ವಿಜಯಲಕ್ಷ್ಮಿ ಉಪಾಧ್ಯ, ಸುಮಿತ್ರಮ್ಮ ಸೇರಿದಂತೆ ಹೆಸರಾಂತ ತಾರಾಗಣವೇ ಸಿನಿಮಾದಲ್ಲಿದೆ.
Click this button or press Ctrl+G to toggle between Kannada and English