ಕೇರಳ – ಕರ್ನಾಟಕ ಗಡಿಯಲ್ಲಿ ಬೃಹತ್ ಗಾಂಜಾ ಜಾಲ ಪತ್ತೆ

1:28 PM, Thursday, January 18th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ganjaaಮಂಗಳೂರು: ಕರ್ನಾಟಕ – ಕೇರಳ ಗಡಿ ಪ್ರದೇಶ ನೆತ್ತಿಲಪದವು ಎಂಬಲ್ಲಿ ಗಾಂಜಾ ಮಾರಾಟ ಜಾಲವನ್ನು ಪತ್ತೆ ಹಚ್ಚುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿಗಳಾದ ಬಂಟ್ವಾಳ ತೌಡುಗೋಳಿ ನರಿಂಗಾನದ ಮಹಮ್ಮದ್ ಅಜೀಜ್ ಯಾನೆ ಅಬ್ದುಲ್ ಅಜೀಜ್ (34), ತಲಪಾಡಿ ಮುಳ್ಳುಗುಡ್ಡೆಯ ಮಹ್ಮಮದ್ ಇಮ್ತಿಯಾಜ್ (26) ಪರಾರಿಯಾಗಿದ್ದಾರೆ.

ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ನೆತ್ತಿಲಪದವು ಎಂಬಲ್ಲಿ ಮಹಮ್ಮದ್ ಅಜೀಜ್ ಮತ್ತು ಇಮ್ತಿಯಾಜ್ ಆ್ಯಕ್ಟೀವಾ ಸ್ಕೂಟರ್‌ನಲ್ಲಿ ತಿರುಗಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ರೌಡಿನಿಗ್ರಹದಳದ ಸಿಬ್ಬಂದಿಗಳು ಮತ್ತು ಕೊಣಾಜೆ ಠಾಣೆಯ ಪೊಲೀಸ್ ನಿರೀಕ್ಷಕರೊಂದಿಗೆ ಕಾರ್ಯಾಚರಣೆ ನಡೆಸಿದ್ದಾರೆ.

ನೆತ್ತಿಲಪದವು ಕಲ್ಲರಕೋಡಿ ಎಂಬಲ್ಲಿ ಸುಮಾರು 10.250 ಕೆ.ಜಿ. ಗಾಂಜಾ ಮತ್ತು ಕೆ.ಎ.19-ಕ್ಯೂ -1625 ನಂಬರ್‌ನ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಮಾರಾಟ ಮಾಡಲು ಗಾಂಜಾ ಪೊಟ್ಟಣಗಳೊಂದಿಗೆ ಗ್ರಾಹಕರಿಗಾಗಿ ಕಾಯುತ್ತಿದ್ದಾಗ ದಾಳಿ ಮಾಡಿದ ಪೊಲೀಸರನ್ನು ಕಂಡು ಗುಡ್ಡದ ಇಳಿಜಾರಿನಲ್ಲಿ ಓಡಿ ಪರಾರಿಯಾಗಿದ್ದಾರೆ. ಸ್ವಾಧೀನಪಡಿಕೊಂಡ ಗಾಂಜಾದ ಬೆಲೆ ಸುಮಾರು ರೂ. 1,60,000 ಎಂದು ಅಂದಾಜಿಸಲಾಗಿದೆ.

ಮಹಮ್ಮದ್ ಅಜೀಜ್ ಎಂಬಾತ ಗಾಂಜಾ ಮಾರಾಟಗಾರನಾಗಿದ್ದು, ಉಳ್ಳಾಲ ಮತ್ತು ಕೊಣಾಜೆ ಠಾಣೆ ಸೇರಿದಂತೆ ಹಲವಾರು ಗಾಂಜಾ ಮಾರಾಟ ಪ್ರಕರಣಗಳ ಆರೋಪಿಯಾಗಿದ್ದಾನೆ. ಎರಡನೇ ಆರೋಪಿ ಇಮ್ತಿಯಾಜ್ ಉಳ್ಳಾಲ ಠಾಣೆಯ ಹಳೆ ಅಪರಾಧಿಯಾಗಿದ್ದು, ಈತನ ವಿರುದ್ಧ ಕೂಡಾ ಹಲವಾರು ಪ್ರಕರಣ ದಾಖಲಾಗಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English