- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆಕಾಶದಿಂದ ಪ್ಯಾರಾಚೂಟ್‌ ಸಹಿತ ಅಡಿಕೆ ತೋಟಕ್ಕೆ ಉರುಳಿದ ಯಂತ್ರ

edthoor [1]ಮಂಗಳೂರು: ಆಕಾಶದಿಂದ ಪ್ಯಾರಾಚೂಟ್‌ ಸಹಿತ ಅಡಿಕೆ ತೋಟಕ್ಕೆ ಉರುಳಿದ ಯಂತ್ರವೊಂದು ಸಾರ್ವಜನಿಕರಲ್ಲಿ ಆತಂಕದ ಜತೆಗೆ ಕುತೂಹಲ ಮೂಡಿಸಿದ ಘಟನೆ ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದಲ್ಲಿ ಸಂಭವಿಸಿದೆ.

ಎಡ್ತೂರು ನಿರಂಜನ್‌ ಜೈನ್‌ ಅವರ ತೋಟದಲ್ಲಿ ಈ ಅಪರೂಪದ ವಸ್ತು ಕಾಣಸಿಕ್ಕಿದೆ. ಕಳೆದೆರಡು ದಿನದ ಹಿಂದೆ ಅಡಿಕೆ ತೋಟಕ್ಕೆ ನೀರು ಹಾಯಿಸಲೆಂದು ಹೋಗಿದ್ದ ವೇಳೆ ಅಡಿಕೆ ಮರದ ಬುಡದಲ್ಲಿ ಈ ವಸ್ತು ಕಂಡುಬಂದಿದೆ. ದ್ವಿಚಕ್ರ ವಾಹನದ ಬ್ಯಾಟರಿಯಂತಿರುವ ಈ ಯಂತ್ರಕ್ಕೆ ಪುಟ್ಟ ಪ್ಯಾರಾಚೂಟ್‌ ಅಳವಡಿಸಲಾಗಿದೆ. ತಯಾರಿಕಾ ಸಂಸ್ಥೆಯ ಹೆಸರು ಬರೆಯಲಾಗಿದೆ.