- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜನಾದೇಶ ಕಾಂಗ್ರೆಸ್‌ಗೆ ವಿರುದ್ಧವಾಗಿದ್ದರೂ ಜೆಡಿಎಸ್ ನೊಂದಿಗೆ ಆತುರವಾಗಿ ಮೈತ್ರಿ : ಅಮಿತ್ ಶಾ

Amith sha [1]ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನಾದೇಶ ಕಾಂಗ್ರೆಸ್‌ಗೆ ವಿರುದ್ಧವಾಗಿತ್ತು. ಅದಕ್ಕಾಗಿಯೇ ಜೆಡಿಎಸ್ ನೊಂದಿಗೆ ಆತುರವಾಗಿ ಮೈತ್ರಿ ಮಾಡುಲು ಒಪ್ಪಿಕೊಂಡಿದೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲನ್ನು ಗೆಲುವೆಂದು ಬಿಂಬಿಸಲು ಕಾಂಗ್ರೆಸ್‌ ಹೊಸ ದಾರಿಯನ್ನು ಈ ರೀತಿಯಾಗಿ ಕಂಡುಕೊಂಡಿದೆ ಎಂದು ಹೇಳಿದರು.

ಹೆಚ್ಚಿನ ಎಲ್ಲ ಸಚಿವರು ಸೋತ ಹೊರತಾಗಿಯೂ ತಾವು ಸಂಭ್ರಮಿಸುತ್ತಿರುವುದು ಯಾಕೆ ಎಂಬುದನ್ನು ಕಾಂಗ್ರೆಸ್‌ನವರು ರಾಜ್ಯದ ಜನತೆಗೆ ವಿವರಿಸಲಿ ಎಂದು ಶಾ ಹೇಳಿದರು.

‘ಕೇವಲ ಕಾಂಗ್ರೆಸ್ ಮತ್ತು ಜೆಡಿ(ಎಸ್‌)ನವರು ಸಂಭ್ರಮಿಸುತ್ತಿದ್ದಾರೆಯೇ ಹೊರತು ಕರ್ನಾಟಕದ ಜನತೆಯಲ್ಲ’ ಎಂದು ಅವರು ಹೇಳಿದರು.

‘ಸರ್ಕಾರ ರಚನೆಗೆ ನಾವು ಹಕ್ಕು ಮಂಡಿಸದೇ ಇರುತ್ತಿದ್ದರೆ, ಕರ್ನಾಟಕದ ಜನಾದೇಶಕ್ಕೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತಿತ್ತು. ಆದರೆ, ಸೋಲನ್ನೇ ಗೆಲುವು ಎಂದು ಬಿಂಬಿಸಲು ಕಾಂಗ್ರೆಸ್ ಹೊಸ ದಾರಿಯನ್ನು ಕಂಡುಕೊಂಡಿತು. ಇದು 2019ರವರೆಗೆ ಮುಂದುವರಿಯಲಿದ್ದು, ಇದರಿಂದ ಬಿಜೆಪಿಗೇ ಲಾಭವಾಗಲಿದೆ’ ಎಂದು ಶಾ ಅಭಿಪ್ರಾಯಪಟ್ಟರು.

‘ಕಾಂಗ್ರೆಸ್‌ಗೆ ಈಗ ಸುಪ್ರೀಂ ಕೋರ್ಟ್‌, ಚುನಾವಣಾ ಆಯೋಗದಂಥ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಂಬಿಕೆ ಬರಲಾರಂಭವಾಗಿದೆ. ಚುನಾವಣೆ ಸೋತಾಗಲೂ ಈ ನಂಬಿಕೆ ಉಳಿಯುವಂತಾಗಲಿ’ ಎಂದು ಶಾ ವ್ಯಂಗ್ಯವಾಡಿದರು.