ಖಾತೆ ಹಂಚಿಕೆಯಲ್ಲಿ ಯಾವುದೇ ಅಸಮಾಧಾನ ಆಗದಂತೆ ಮೈತ್ರಿ ಸರ್ಕಾರ ನಡೆಸ್ತೀವಿ: ಡಾ. ಜಿ. ಪರಮೇಶ್ವರ್

6:23 PM, Monday, June 4th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

parameshwarಬೆಂಗಳೂರು: ಖಾತೆ ಹಂಚಿಕೆ ವಿಚಾರ, ಜಿಲ್ಲಾ ಉಸ್ತುವಾರಿ ಸಚಿವರ ನೇಮಕದಲ್ಲಿ ಯಾವುದೇ ಅಸಮಾಧಾನ ಇಲ್ಲ. ಯಾವುದೇ ಅಸಮಾಧಾನ ಆಗದಂತೆ ಮೈತ್ರಿ ಸರ್ಕಾರ ನಡೆಸ್ತೀವಿ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು ವಿದೇಶದಿಂದ ರಾಹುಲ್ ಗಾಂಧಿ ‌ಇಂದು ದೆಹಲಿಗೆ ಬಂದು ನಮ್ಮನ್ನು ಕರೆದ ನಂತರ ದೆಹಲಿಗೆ ಹೋಗುತ್ತೇವೆ. ಇಂದು ಸಂಜೆ ಅಥವಾ ನಾಳೆ ದೆಹಲಿಗೆ ತೆರಳುತ್ತೇವೆ. ಬುಧವಾರ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ವಿವರಿಸಿದರು.

ಸಚಿವ ಸಂಪುಟದಲ್ಲಿ ಹಿರಿಯರಿಗೆ ಸ್ಥಾನ ನೀಡದೇ ಇರೋ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ರೀತಿ ಚರ್ಚೆ ನಡೆದಿಲ್ಲ. ಕೆಲವರು ತಮ್ಮ ತಮ್ಮ ಅಭಿಪ್ರಾಯ ಹೇಳಿದ್ದಾರೆ ಅಷ್ಟೇ. ಕೆಲವರು ಹಿರಿಯರಿಗೆ ನೀಡದೇ ಕಿರಿಯರನ್ನು ಪರಿಗಣಿಸಿ ಎಂದು ಅಭಿಪ್ರಾಯ ತಿಳಿಸಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಎಸ್.ಆರ್.ಪಾಟೀಲ್ ರಾಜೀನಾಮೆ ವಿಚಾರದ ಬಗ್ಗೆ ಮಾತನಾಡಿ, ಎಐಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದಿದೆ. ಯಾವ ಕಾರಣಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಬಾಗಲಕೋಟೆಯ ಅವರ ನಿವಾಸದಲ್ಲಿ ಬಳಿ ಪ್ರತಿಭಟನೆ ಮಾಡಿದ್ರು. ಇದ್ರಿಂದ ಅವರಿಗೆ ಅಸಮಾಧಾನ ಆಗಿರಬಹುದು. ಈ ಬಗ್ಗೆ ಅವರ ಬಳಿ ಮಾತನಾಡುತ್ತೇನೆ. ಅವರಿಗೆ ಬೇಜಾರಾಗಿದ್ರೆ ಸಮಾಧಾನ ಪಡಿಸುವ ಕಾರ್ಯ ಮಾಡುತ್ತೇವೆ. ನಾನು ಅವರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.

ಡಾ. ಜಿ. ಪರಮೇಶ್ವರ್, ಶಾಸಕ ಎಸ್.ಟಿ. ಸೋಮಶೇಖರ್, ಮೇಯರ್ ಸಂಪತ್ ರಾಜ್, ಜಿಲ್ಲಾಧ್ಯಕ್ಷ ಎಂ. ರಾಜ್ ಕುಮಾರ್, ಎಂಎಲ್‌‌ಸಿ ನಾರಾಯಣಸ್ವಾಮಿ, ರಾಮೋಜಿಗೌಡ, ಪ್ರೊ. ಚಂದ್ರಶೇಖರ್, ವೀರಣ್ಣ ಮತ್ತಿಕಟ್ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English