- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯವರು ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ‌ಪಕ್ಷಕ್ಕೆ ಸೋಲಾಗಿದೆ: ರಮನಾಥ ರೈ

ramanath-rai [1]ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯವರು ಅಪಪ್ರಚಾರ ಮಾಡಿದ್ದರಿಂದ ಕಾಂಗ್ರೆಸ್ ‌ಪಕ್ಷಕ್ಕೆ ಸೋಲಾಗಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮನಾಥ ರೈ ಹೇಳಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ರಮನಾಥ ರೈ ಅವರು ಚುನಾವಣೆ ನಂತರವೂ ಬಿಜೆಪಿ ನನ್ನ ವಿರುದ್ಧ ನಿರಂತರ ಅಪಪ್ರಚಾರ ದಲ್ಲಿ ನಿರತವಾಗಿದೆ.ಕಲ್ಲಡ್ಕ ಶಾಲೆಗೆ ಕೊಲ್ಲೂರು ದೇವಾಲಯದ ಹುಂಡಿಯ ಹಣ ಹೋಗುವುದನ್ನು ‌ನಿಲ್ಲಿಸಿ ಶಿಕ್ಷಣ ಇಲಾಖೆಯ ಬಿಸಿಯೂಟ ವ್ಯವಸ್ಥೆ ಮಾಡುತ್ತೇವೆ ಎಂದೆವು.ಆದರೆ ಅದನ್ನು ತೆಗೆದುಕೊಳ್ಳದೆ ನಮ್ಮ ಮೇಲೆ ಅಪಪ್ರಚಾರ ಮಾಡಲಾಯಿತು; ಇದೀಗ ಶಿಕ್ಷಣ ‌ಇಲಾಖೆಯ ಬಿಸಿಯೂಟ ಪಡೆದಿದ್ದಾರೆ ಎಂದಿದ್ದಾರೆ.

ಶರತ್ ಮಡಿವಾಳ ಹತ್ಯೆಯಲ್ಲಿ ಎಸ್ ಡಿ ಪಿ ಐ ನವರು ಬಂಧನವಾಗಿದ್ದರೂ ನನ್ನ ಮೇಲೆ ಅಪಪ್ರಚಾರ ಮಾಡಲಾಗಿದೆ. ಈ ಬಗ್ಗೆ ಕಾನಾತ್ತೂರು ದೇವಸ್ಥಾನ ದಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಅದಕ್ಕೂ ಅಪಹಾಸ್ಯ ಮಾಡುತ್ತಾರೆ. ಜಿಲ್ಲೆಯಲ್ಲಿ ನಡೆದ ಐದು ಕೋಮುಸಂಘರ್ಷದ ಹತ್ಯೆಯಲ್ಲಿ ಬಿಜೆಪಿ ‌ಮತ್ತು ಎಸ್ ಡಿ ಪಿ ಐ ನವರು ಇದ್ದಾರೆ. ಎಸ್ ಡಿ ಪಿ ಐ ನವರು ಚುನಾವಣೆ ಯಲ್ಲಿ ನಿಲ್ಲದಿರುವುದಕ್ಕೆ ನಾನು ಜವಬ್ದಾರಿಯಲ್ಲ ಎಂದರು.

ಹಿಂದೊಮ್ಮೆ ಭಾರತಿ ಹತ್ಯೆಯಲ್ಲಿಯು ನನ್ನ ಹೆಸರನ್ನು ತಂದಿದ್ದರು. ಹಿಂದೆ ಕಾಂಗ್ರೆಸ್ ನಲ್ಲಿ ದ್ದ ಹರಿಕೃಷ್ಣ ಬಂಟ್ವಾಳ ಭಾವ ಕೊಲೆ ಮಾಡಿದ್ದು ಎಂದು ಹರಿಕೃಷ್ಣ ಬಂಟ್ವಾಳ ಹೆಸರನ್ನು, ನನ್ನ ಹೆಸರನ್ನು ತಂದಿತ್ತು. ಆದರೆ ಇದೀಗ ಬಿಜೆಪಿ ಸೇರಿರುವ ಹರಿಕೃಷ್ಣ ಬಂಟ್ವಾಳ ಅವರೊಂದಿಗೆ ಸೇರಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗೆ ಬಂಟ್ವಾಳ ದಲ್ಲಿ ಸುರೇಂದ್ರ ‌ ಎಂಬಾತ ತಲವಾರು ಹಿಡಿದು ದಾಳಿ ಮಾಡಿದಾಗ ಆತನು ರಮನಾಥ ರೈ ಬೆಂಬಲಿಗ ಎಂದು ಮಾಧ್ಯಮದಲ್ಲಿ ಅಪಪ್ರಚಾರ ನಡೆಯಿತು. ಹಿಂದೆ ಸುರೇಂದ್ರ ಬಿಜೆಪಿಯಲ್ಲಿದ್ದರು. ಇದೀಗ ಬಿಜೆಪಿ ಬಿಟ್ಟಿದ್ದಾರೆ. ಬಿಜೆಪಿ ವಿರುದ್ದ ಕಾಂಗ್ರೆಸ್ ಪರ ಪ್ರಚಾರ ಮಾಡಿರಬಹುದು .ಆದರೆ ಆತ ನನ್ನ ಬೆಂಬಲಿಗನಲ್ಲ .

ಈ ಘಟನೆ ಗೆ ಮೂಲಕಾರಣವಾದದ್ದು ಭುವಿತ್ ಎಂಬಾತ ಸೆಲೂನ್ ಗೆ ನುಗ್ಗಿ ದೀಕ್ಷಿತ ಎಂಬವನಿಗೆ ಹಲ್ಲೆ ಮಾಡಿ ಅಂಗಡಿಯನ್ನು ಹಾನಿ ಮಾಡಿದ್ದು. ಹರೀಶ್ ಪೂಜಾರಿ ಹತ್ಯೆ ಪ್ರಕರಣದ ಆರೋಪಿಯಾಗಿರುವ ಭುವಿತ್ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಆಪ್ತ. ‌ಆದರೆ ಸುರೇಂದ್ರ ನನ್ನ ಆಪ್ತನಲ್ಲ ಎಂದರು.