ಫಿಫಾ ವಿಶ್ವಕಪ್…ಬ್ರೆಜಿಲ್​ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್​ಗೆ ಲಗ್ಗೆ!

10:32 AM, Saturday, July 7th, 2018
Share
1 Star2 Stars3 Stars4 Stars5 Stars
(No Ratings Yet)
Loading...

belgiumಮಾಸ್ಕೋ: ಫಿಫಾ ವಿಶ್ವಕಪ್ ಫುಟ್ಬಾಲ್ 2018 ರ ಎರಡನೇ ಕ್ವಾರ್ಟರ್ ಫೈನಲ್ ಪಂದ್ಯ ರೋಚಕವಾಗಿ ಅಂತ್ಯವಾಗಿದೆ. ಬ್ರೆಜಿಲ್ ತಂಡವನ್ನು 2-1ರ ಅಂತರದಲ್ಲಿ ಸೋಲಿಸಿದ ಬೆಲ್ಜಿಯಂ ಸೆಮೀಸ್ಗೆ ಲಗ್ಗೆ ಇಟ್ಟಿದೆ.

ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಎರಡನೇ ಕ್ವರ್ಟರ್ ಫೈನಲ್ ಪಂದ್ಯದಲ್ಲಿ ಆರಂಭದಿಂದಲೇ ಬೆಲ್ಜಿಯಂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಬೆಲ್ಜಿಯಂ ಪರ ಫೆರ್ನಾಂಡಿನ್ಹೋ 13ನೇ ನಿಮಿಷದಲ್ಲಿ ಗೋಲ್ ಗಳಿಸುವುದರ ಮೂಲಕ ಪಂದ್ಯದಲ್ಲಿ ತಂಡ ಮೇಲುಗೈ ಸಾಧಿಸುವಂತೆ ಮಾಡಿದರು.

ಅನಂತರದಲ್ಲಿ ಅಂದರೆ 31 ನೇ ನಿಮಿಷದಲ್ಲಿ ಬೆಲ್ಜಿಯಂನ ಮತ್ತೊಬ್ಬ ಆಟಗಾರ ಕೆವಿನ್ ಡಿ ಬ್ರೂನೆಯ ಕಾಲಿನಿಂದ ಚಿಮ್ಮಿದ ಚೆಂಡು ಗೋಲ್ ಕೀಪರನ್ನು ವಂಚಿಸಿ ನೇರವಾಗಿ ಗೋಲ್ಪೋಸ್ಟ್ನ್ನು ಸೇರಿತ್ತು. ಇದರೊಂದಿಗೆ ಪ್ರಥಮಾರ್ಧ ಮುಗಿಯುವುದಕ್ಕೂ ಮೊದಲೇ 2-0 ಅಂತರದಲ್ಲಿ ಬ್ರೆಜಿಲ್ ವಿರುದ್ಧ ಮೇಲುಗೈ ಸಾಧಿಸಿತ್ತು.

ದ್ವಿತಿಯಾರ್ಧದಲ್ಲಿ ಹೆಚ್ಚು ರಕ್ಷಣಾತ್ಮಕವಾದ ಆಟಕ್ಕೆ ಮೊರೆ ಹೋದ ಬೆಲ್ಜಿಯಂ ಎದುರಾಳಿ ತಂಡ ಗೋಲ್ ಗಳಿಸದೇ ಇರುವಂತೆ ಎಚ್ಚರ ವಹಿಸಿತು. ಆದರೆ ಪಂದ್ಯದ 76 ನೇ ನಿಮಿಷದಲ್ಲಿ ಬ್ರೆಜಿಲ್ನ ರೆನಾಟೋ ಆಗುಸ್ಟೋ ಗೋಲ್ ಗಳಿಸುವುದರ ಮೂಲಕ ಗೋಲ್ನ ಅಂತರವನ್ನು 2-1 ಕ್ಕೆ ಕುಗ್ಗಿಸಿದರು.

ಆದರೆ, ಇದರಿಂದ ಎಚ್ಚೆತ್ತಕೊಂಡ ಬೆಲ್ಜಿಯಂ ತನ್ನ ಕೋಟೆಯನ್ನು ಮತ್ತಷ್ಟು ಭದ್ರವಾಗಿಸಿತು. ಅದಾದ ಮೇಲೆ ಬ್ರೆಜಿಲ್ ಯಾವುದೇ ಕಾರಣಕ್ಕೂ ಗೋಲ್ ಗಳಿಸದಂತೆ ಬೆಲ್ಜಿಯಂ ಎಚ್ಚರ ವಹಿಸಿತು. ಈ ಮೂಲಕ ಪೂರ್ಣಾವಧಿ ಮುಗಿಯುವ ವೇಳೆ ಬೆಲ್ಜಿಯಂ, ಬ್ರೆಜಿಲ್ ವಿರುದ್ಧ 2-1 ಅಂತರದಲ್ಲಿ ಗೆದ್ದು ಬೀಗುತ್ತಿತ್ತು. ಈ ಮೂಲಕ ಬೆಲ್ಜಿಯಂ ತಂಡ 2018ರ ಫಿಫಾ ವಿಶ್ವಕಪ್ ಫುಟ್ಬಾಲ್ನ ಸೆಮಿಫೈನಲ್ಗೆ ಲಗ್ಗೆಇಟ್ಟಿದೆ.

ಇನ್ನು, ಆರನೇ ಬಾರಿಗೆ ಪ್ರಶಸ್ತಿ ಪಡೆಯವ ಕನಸಿನಲ್ಲಿದ್ದ ಬ್ರೆಜಿಲ್, ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದು, ಮುಖಭಂಗ ಅನುಭವಿಸಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English