- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹತ್ವದ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು1-0 ಅಂತರದಿಂದ ಬಗ್ಗುಬಡಿದ ಫ್ರಾನ್ಸ್..ಫೈನಲ್​ಗೆ ಲಗ್ಗೆ!

france-football [1]ರಷ್ಯಾ: ಮಹತ್ವದ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಬಗ್ಗುಬಡಿದ ಫ್ರಾನ್ಸ್ ತಂಡ ಫಿಫಾ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದೆ.

ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಸ್ಟೇಡಿಯಂನಲ್ಲಿ ನಡೆದ ಫಿಫಾ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂ 1-0 ಅಂತರದಿಂದ ಸೋತು ನಿರಾಶೆ ಅನುಭವಿಸಿತು. ಫ್ರಾನ್ಸ್ ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು.

ಫ್ರಾನ್ಸ್ನ ಸ್ಯಾಮ್ಯುಯೆಲ್ ಉಮ್ಟಿಟಿ ಪಂದ್ಯದ 51ನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಹೊಡೆದು ತಂಡಕ್ಕೆ ಮುನ್ನಡೆ ನೀಡಿದರು. ಆದರೆ ಗೋಲು ಗಳಿಸುವ ಬೆಲ್ಜಿಯಂನ ಎಲ್ಲ ತಂತ್ರಗಳನ್ನು ಫ್ರಾನ್ಸ್ ವಿಫಲಗೊಳಿಸಿತು.

ಪಂದ್ಯದ ಮೊದಲಾರ್ಧದಲ್ಲಿ ಹೆಚ್ಚುವರಿ 1 ನಿಮಿಷ ಮತ್ತು ದ್ವಿತೀಯಾರ್ಧದಲ್ಲಿ ಹೆಚ್ಚುವರಿವಾಗಿ 6 ನಿಮಿಷ ಸೇರಿಸಲಾಗಿತ್ತು. ಆದರೂ ಫ್ರಾನ್ಸ್ ಎದುರು ಬೆಲ್ಜಿಯಂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಕೊನೆಗೆ 1-0 ಅಂತರದಿಂದ ಸೋಲೊಪ್ಪಿಕೊಂಡು ಪ್ರಶಸ್ತಿ ಆಸೆ ಕೈ ಬಿಟ್ಟಿತು. ಸೆಮಿಫೈನಲ್ ಗೆಲುವಿನ ಮೂಲಕ ಕಳೆದ 12 ವರ್ಷಗಳ ಬಳಿಕ ಫ್ರಾನ್ಸ್ ಇದೇ ಮೊದಲ ಬಾರಿಗೆ ಫಿಫಾ ಫೈನಲ್ ಹಂತಕ್ಕೆ ತಲುಪಿದಂತಾಗಿದೆ.

ಇದಕ್ಕೂ ಮುನ್ನ ಸೆಮಿಫೈನಲ್ನಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂಗೆ ಗೆಲುವು ಸಿಗಲಿದೆ ಎಂದು ಅಚಿಲ್ಸ್ ಬೆಕ್ಕು ಭವಿಷ್ಯ ನುಡಿದಿತ್ತು. ಅದ್ರೆ ಬೆಕ್ಕಿನ ಭವಿಷ್ಯವನ್ನು ಫ್ರಾನ್ಸ್ ಸುಳ್ಳಾಗಿಸಿದೆ.