ಇಂಗ್ಲೆಂಡ್​ ವಿರುದ್ಧದ ಮೊದಲ ಏಕದಿನ ಪಂದ್ಯ..ಭಾರತಕ್ಕೆ 8 ವಿಕೆಟ್​ಗಳ ಭರ್ಜರಿ ಜಯ!

10:47 AM, Friday, July 13th, 2018
Share
1 Star2 Stars3 Stars4 Stars5 Stars
(No Ratings Yet)
Loading...

indiaನ್ಯಾಟಿಂಗ್ಹ್ಯಾಮ್: ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಯನ್ನು ಗೆದ್ದು ಬೀಗಿರುವ ಟೀಂ ಇಂಡಿಯಾ ಈಗ ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಭರ್ಜರಿ ಜಯ ಸಾಧಿಸಿದೆ.

ಇಲ್ಲಿನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಜಯ ಗಳಿಸಿದೆ. ಇಂಗ್ಲೆಂಡ್ ನೀಡಿದ 268 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ ಕೇವಲ 40.1 ಓವರ್ಗಳಲ್ಲಿ 2 ವಿಕೆಟ್ಕಳೆದುಕೊಂಡು 269 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.

ಹಿಟ್ಮ್ಯಾನ್ ರೋಹಿತ್ ಶರ್ಮಾ ಭರ್ಜರಿ ಶತಕ ಗಳಿಸಿದರು. 114 ಬಾಲ್ಗಳಲ್ಲಿ ರೋಹಿತ್ 4 ಭರ್ಜರಿ ಸಿಕ್ಸರ್ ಹಾಗೂ 15 ಬೌಂಡರಿಗಳ ಸಹಾಯದಿಂದ ಒಟ್ಟು 137 ರನ್ ಗಳಿಸಿ ಅಜೇಯರಾಗಿ ಉಳಿದರು. ರೋಹಿತ್ಗೆ ಸಾಥ್ ನೀಡಿದ ಕ್ಯಾಪ್ಟನ್ ವಿರಾಟ್ ಕೊಹ್ಲಿ 82 ಎಸೆತಗಳಿಂದ 75 ರನ್ ಗಳಿಸಿದರು.

ಉಳಿದಂತೆ ಆರಂಭಿಕ ಶಿಖರ್ ಧವನ್ ಭರ್ಜರಿ ಹೊಡೆತಗಳಿಗೆ ಮುಂದಾಗಿ 27 ಎಸೆತಗಳಲ್ಲಿ 40 ರನ್ ಗಳಿಸಿ ಮೊಯೀನ್ ಆಲಿಗೆ ವಿಕೆಟ್ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಕನ್ನಡಿಗ ಕೆ.ಎಲ್.ರಾಹುಲ್ 18 ಎಸೆತಗಳಿಂದ 9 ರನ್ ಗಳಿಸಿ ಅಜೇಯರಾಗಿ ಉಳಿದರು.

india2ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್, ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ನಲುಗಿತು. ಅತಿಥೇಯರಿಗೆ ಕುಲ್ದೀಪ್ ಮಾರಕವಾಗಿ ಪರಿಣಮಿಸಿದರು. ಇಂಗ್ಲೆಂಡ್ ಪರ ಆರಂಭಿಕರಾಗಿ ಕಣಕ್ಕಿಳಿದ ಜೇಸನ್ ರಾಯ್ ಹಾಗೂ ಜಾನಿ ಬೇರ್ಸ್ಟೋವ್ ಉತ್ತಮ ಆರಂಭ ನೀಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 10.2 ಓವರ್‌ಗಳಲ್ಲಿ 73 ರನ್‌ಗಳ ಜತೆಯಾಟ ನೀಡಿತು. 35 ಎಸೆತಗಳಿಂದ 38 ರನ್ ಗಳಿಸಿದ್ದ ಜೇಸನ್ ರಾಯ್ ಹಾಗೂ ಜಾನಿ ಬೇರ್ಸ್ಟೋವ್ ಅವರಿಗೆ ಕುಲ್ದೀಪ್ ಪೆವಿಲಿಯನ್‌ ಹಾದಿ ತೋರಿಸಿದರು.

ಇದಾದ ಬಳಿಕ ಜೋ ರೂಟ್ (3), ಜಾನಿ ಬೈರ್‌ಸ್ಟೋವ್ (38) ಅವರನ್ನು ಹೊರದಬ್ಬುವ ಮೂಲಕ ಕುಲ್ದೀಪ್ ತಂಡಕ್ಕೆ ಮೇಲುಗೈ ತಂದುಕೊಟ್ಟರು. ನಾಯಕ ಇಯಾನ್ ಮಾರ್ಗನ್ 19 ರನ್ ಗಳಿಸಿ ಯಜುವೇಂದ್ರ ಚಹಾಲ್ಗೆ ವಿಕೆಟ್ಒಪ್ಪಿಸಿದರು. 19.2 ಓವರ್‌ಗಳಲ್ಲೇ 105 ರನ್‌ಗಳಿಗೆ ಪ್ರಮುಖ ನಾಲ್ಕು ವಿಕೆಟುಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಒಂದು ಹಂತದಲ್ಲಿ ಬೆನ್ ಸ್ಟ್ರೋಕ್ಸ್ ಮತ್ತು ಜೋಸ್ ಬಟ್ಲರ್ ಆಸರೆಯಾದರು.

103 ಎಸೆತಗಳಿಂದ 50 ರನ್ ಗಳಿಸಿದ್ದ ಸ್ಟ್ರೋಕ್ಸ್ ಹಾಗೂ 51 ಎಸೆತಗಳಿಂದ 53 ರನ್ ಗಳಿಸಿದ್ದ ಜೋಸ್ ಬಟ್ಲರ್ಗೆ ಕುಲ್ದೀಪ್ ಮತ್ತೆ ಮಾರಕವಾದರು. ಆ ಬಳಿಕ ಇಂಗ್ಲೆಂಡ್ನ ಯಾವೊಬ್ಬ ಬ್ಯಾಟ್ಸ್ಮನ್ನಿಂದ ಕೂಡಾ ಉತ್ತಮ ರನ್ ಹರಿದು ಬರಲಿಲ್ಲ. ಅಂತಿಮವಾಗಿ ಇಂಗ್ಲೆಂಡ್ 49.5 ಓವರ್ಗಳಲ್ಲಿ 268 ರನ್ ಗಳಿಸಿ ಆಲೌಟ್ ಆಯ್ತು.

ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಜಯದ ಮೂಲಕ ಶುಭಾರಂಭ ಮಾಡಿ ಮುನ್ನಡೆ ಸಾಧಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English