ಶಿರೂರು ಶ್ರೀಗಳಿಗೆ ತನ್ನದೇ ಎರಡು ಮಕ್ಕಳಿದ್ದಾರೆ, ಅವರು ಮಧ್ವ ಪರಂಪರೆಯನ್ನು ಧಿಕ್ಕರಿಸಿ ಮೆರೆದ ಸ್ವಾಮೀಜಿ

11:14 PM, Sunday, July 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Shiroor seerಉಡುಪಿ : ಶಿರೂರು ಲಕ್ಷ್ಮೀವರ ಶ್ರೀಗಳ ಮೂಲ ಹೆಸರು ಹರೀಶ್ ಆಚಾರ್ಯ. ಹೆಬ್ರಿ ಬಳಿಯ ಮಡಾಮಕ್ಕಿ ಅವರ ಹುಟ್ಟೂರು. ಮಠ ಸಂಸ್ಕೃತಿ, ಮಧ್ವ ಪರಂಪರೆಯನ್ನು ಮೀರಿ ಬೆಳೆದ ಯತಿಯೆಂದರೆ ಅದು ಶಿರೂರು ಲಕ್ಷ್ಮೀವರ ಶ್ರೀಗಳು.

ಕಳೆದ ಮೇ ತಿಂಗಳಲ್ಲಿ ಶಿರೂರು ಮೂಲ ಮಠದಿಂದ ನಾಲ್ಕು ದನಗಳ ಕಳವು ಆಗುತ್ತದೆ. ಆ ಬಗ್ಗೆ ಪೊಲೀಸರಿಗೂ ದೂರು ಹೋಗುತ್ತದೆ. ಅದರೆ ಶಿರೂರು ಲಕ್ಷ್ಮೀವರ ಶ್ರೀಗಳು ಅಮೇಲೆ ಇಟ್ಟ ದಿಟ್ಟ ಹೆಜ್ಜೆ ಎಂದರೆ ತಾವೇ ಸ್ಚತ: ಕಾನೂನು ಪಾಲಕರಂತೆ ರಾತ್ರಿ ವೇಳೆ ಗನ್ ಹಿಡಿದು ವಾಹನಗಳನ್ನು ತಪಾಷಣೆ ಮಾಡುತ್ತಿದ್ದರು. ರಾತ್ರಿ 9 ರಿಂದ 11 ರ ವರೆಗೆ ಶಿರೂರು ರಸ್ತೆಯಲ್ಲಿ ಹೋಗಿ ಬರೋ ವಾಹನಗಳನ್ನು ಪೊಲೀಸರಂತೆ ತಾವೇ ತಪಾಷಣೆ ಮಾಡಿ ವಾಹನ ಸವಾರರಿಗೆ ತಲೆ ನೋವಾಗಿದ್ದರು. ತನ್ನ ಮಠದಿಂದಲೇ ಡ್ರೋನ್ ಮೂಲಕ ಸುಮಾರು ಒಂದೂವರೆ ಕಿಲೋ ಮೀಟರ್ ಅಂತರದಲ್ಲಿ ಯಾರು ಬರುತ್ತಿದ್ದಾರೆ ಎಂದು ಗಮನಿಸುತ್ತಿದ್ದರು.

ಶಿರೂರು ಮಠದ ಮೂವತ್ತನೇ ಯತಿಯಾಗಿದ್ದ ಶಿರೂರು ಲಕ್ಷ್ಮೀವರ ಶ್ರೀಗಳು ಕಳೆದ ಐದು ದಶಕಗಳಿಂದ ಶಿರೂರು ಮಠವನ್ನು ಆಳಿದವರು. ಕಳೆದ ಇಪ್ಪತ್ತು ವರ್ಷಗಳ ಹಿಂದೆ ಜಗ್ಗು ಎನ್ನುವ ಆಟೋ ಡ್ರೈವರ್‌ನ್ನು ಪರಿಚಯಿಸಿ ಕೊಂಡ ಶಿರೂರು ಲಕ್ಷ್ಮೀವರ ಶ್ರೀಗಳು ಅತನ ಸಖ್ಯದಿಂದ ಮದ್ಯ ಸೇವನೆ ಆರಂಬಿಸುತ್ತಾರೆ. ಸ್ತ್ರೀ ಸಖ್ಯಕ್ಕೂ ಇಳಿಯುತ್ತಾರೆ. ಸನ್ಯಾಸ ಸ್ವೀಕರಿಸಿದ ಸ್ವಾಮಿಗಳು ಸಂಸಾರ ಮಾಡಬಹುದು ಎಂಬುದನ್ನು ಬಹಿರಂಗವಾಗಿ ತೋರಿಸಿ ಕೊಟ್ಟವರು. ಅದರಿಂದಾಗಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ ಎಂದು ಹೇಳಲಾಗಿದೆ.

Shiroor seerಉಡುಪಿ ರಥಬೀದಿಯ ಶಿರೂರು ಮಠದಲ್ಲಿ ಇವರ ಸೇವೆ ಮಾಡುತ್ತಿದ್ದ ಬ್ರಾಹ್ಮಣ ಮಹಿಳೆಗೆ ಅ ಮಕ್ಕಳು ಹುಟ್ಟಿದ್ದಾರೆ ಎಂದು ಮಠದ ಎಲ್ಲರಿಗೂ ತಿಳಿದಿದೆ. ಆ ಮಕ್ಕಳಲ್ಲಿ ಒಬ್ಬ ಪದವಿ ವ್ಯಾಸಾಂಗ ಮಾಡುತ್ತಿದ್ದರೆ ಹೆಣ್ಣು ಮಗಳಿಗೆ ಈಗ ಏಳು ವರ್ಷ. ಪರ್ಯಾಯ ಸಂದರ್ಭದಲ್ಲಿ ಅವರ ಮಗ ಚರುಮುರಿ ತಿನ್ನಲು ರಥ ಬೀದಿಯ ಬೀದಿ ವ್ಯಾಪಾರಿಯೊಬ್ಬರ ಬಳಿ ಬಂದಿದ್ದ. ಆಗ ಚರುಮುರಿ ವ್ಯಾಪಾರಿ ಈ ಬಾಲಕನ ಬಳಿ ಈಗ ನಿನ್ನ ಅಪ್ಪ ಪರ್ಯಾಯದಲ್ಲಿದ್ದಾರೆ. ನಿನಗೆ ಅಧಿಕಾರ ಚಲಾಯಿಸಬಹುದು ಎಂದು ಹೇಳಿದ್ದರು. ಅದನ್ನು ಬಾಲಕ ಶಿರೂರು ಲಕ್ಷ್ಮೀವರ ಶ್ರೀಗಳ ಬಳಿ ಹೇಳಿದಾಗ. ಕೋಪಗೊಂಡ ಅವರು ಚರುಮುರಿ ವ್ಯಾಪರಿಯನ್ನು ಮಠಕ್ಕೆ ಕರೆಯಿಸಿ ಕಪಾಳಕ್ಕೆ ಬಾರಿಸಿ ರಥಬೀದಿಯಲ್ಲಿ ವ್ಯಾಪಾರ ಮಾಡದಂತೆ ಮಾಡಿದ್ದರು. ಆ 80 ವರ್ಷದ ದಲಿತ ಅಜ್ಜ ಈಗಲೂ ಸರ್ವೀಸ್ ಬಸ್ಸ್ ನಿಲ್ದಾಣದಲ್ಲಿ ಚರುಮುರಿ ಮಾರುತ್ತಿದ್ದಾರೆ.

ತನ್ನ ಮಗನಿಗೆ ಶಿಷ್ಯತ್ವ ನೀಡಬೇಕು ಎಂದು ಅವರು ಹೇಳುತ್ತಿದ್ದರು. ಅದಕ್ಕೆ ಒಪ್ಪದ ಸಪ್ತ ಮಠಗಳ ವಿರುದ್ದ ಅವರು ಕಾನೂನು ಸಮರ ಸಾರಿದ್ದರು. ತನ್ನ ಆರಾಧ್ಯ ದೈವ ವಿಠಲನ್ನು ಹಿಂತಿರುಗಿಸುವಂತೆ ಕೇಳಿಕೊಂಡಿದ್ದರು.

Shiroor seerಅವರ ಪರ್ಯಾಯದಲ್ಲಿ ಪರಿಚಯವಾದ ಬಾಳೆಹಣ್ಣು ವ್ಯಾಪಾರಿ ಕೈಲು ಸುಧಾಕರನ ಜೊತೆ ಸೇರಿ ಹಲವಾರ ಎಡವಟ್ಟುಗಳನ್ನು ಮಾಡಿದ್ದರು. ಆತ ಒಬ್ಬ ಹುಡುಗಿಯರ ಬ್ರೋಕರ್ ಆಗಿದ್ದ. ಇವರಿಗೆ ಚಂದದ ಸ್ತ್ರೀಯರನ್ನು ತೋರಿಸಿ ಹಣ ಪೀಕಿಸುತ್ತಿದ್ದ ಎಂದು ಮಠದ ಜನ ಹೇಳುತ್ತಿದ್ದರು.

ಸ್ವಾಮಿಗಳು ಪರ್ಯಾಯ ಸಂದರ್ಭದಲ್ಲಿಯೇ ಹೆಂಡದ ದಾಸರಾಗಿದ್ದರು xxxರಮ್ ಮತ್ತು ವಿಸ್ಕಿ ಅವರ ಇಷ್ಟದ ಪೇಯ. ಪರ್ಯಾಯದ ವೇಳೆಯೇ ಮದ್ಯ ಸೇವನೆ ಮಾಡುತ್ತಿದ್ದರು. ಪರ್ಯಾದ ಮಹಾ ಪೂಜೆ ಆಗಿ ಅಸ್ತೋದಕ ನೀಡುವ ಮೊದಲು ಶಿರೂರು ಮಠಕ್ಕೆ ಹೋಗಿ ಮದ್ಯ ಸೇವಿಸಿ ಬರುತ್ತಿದ್ದರು ಎಂದು ಅವರ ಆಪ್ತರು ಹೇಳುತ್ತಾರೆ.

ಬೆಕ್ಕು ಪ್ರಿಯರಾದ ಶ್ರೀಗಳು  ಮೂಲ ಮಠದಲ್ಲಿ ಹತ್ತಿಪ್ಪತ್ತು ಬೆಕ್ಕುಗಳನ್ನ ಸಾಕಿಕೊಂಡಿದ್ದರು,  ಪ್ರತೀ ದಿನ ಸಂಜೆ ಅವುಗಳಿಗೆ ಸ್ವತಃ ಮಠದ ಬಾಗಿಲಿನಲ್ಲಿ ಕುಳಿತು ಮೀನೂಟ ಬಡಿಸುತ್ತಿದ್ದ ರಂತೆ.

ಭಾಸ್ಕರ ಶೆಟ್ಟಿ ಕೊಲೆ ಆರೋಪಿ ನಿರಂಜನ ಭಟ್ಟನಿಗೆ ಆಶ್ರಯದಾತನಾಗಿದ್ದ ಸ್ವಾಮಿಗಳು ಅಂದು ಕೊಲೆ ಮಾಡಿ ಬಂದಿದ್ದ ಅರೋಪಿಯನ್ನು ತನ್ನ ಬಳಿ ಇರಿಸಿಕೊಂಡಿದ್ದರು. ಎಸೈ ಶಿರೂರು ಮಠಕ್ಕೆ ಬಂದು ತಪಾಷಣೆ ಮಾಡಿದಾಗ. ಮೂಲ್ಕಿ ಜ್ಯೋತಿಷಿ ಚಂದ್ರಶೇಖರ ಭಟ್ಟರಿಗೆ ಫೋನ್ ಮಾಡಿ ಮಠ ತಪಾಷಣೆ ಮಾಡದಂತೆ ತಡೆ ತಂದಿದ್ದರು.

ಕೆಳೆದ ಮೂರು ವರ್ಷದ ಹಿಂದೆ ರಮ್ಯಾಶೆಟ್ಟಿ ಎಂಬ ಮಹಿಳೆಯನ್ನು ಅಟೋ ಡ್ರೈವರ್ ಜಗ್ಗ ಎಂಬಾತ ಪರಿಚಯಿಸಿದ ನಂತರ ಸ್ವಾಮೀಜಿ ಜೀವನದಲ್ಲಿ ಬದಲಾವಣೆಗಳಾದವು. ಸ್ವಾಮೀಜಿ ಬಳಿ ಇದ್ದ ಎಂಟು ಬಂಗಾರದ ಕಡಗಗಳು ನಾಪತ್ತೆಯಾಗಿದೆ. ಇದನ್ನು ಭಕ್ತರು ಶ್ರೀಗಳಿಗೆ ನೀಡಿದ್ದರು. ಅದರಲ್ಲಿ ಒಂದು ಕಡಗ ರಮ್ಯಾಶೆಟ್ಟಿ ತೊಟ್ಟುಕೊಂಡು ಮಠಕ್ಕೆ ಬರುತ್ತಾಳೆ ಎಂದು ಮಠದ ಸಿಬ್ಬಂದಿಗಳು ಹೇಳುತ್ತಾರೆ. ಅಲ್ಲದೆ ಚೌತಿ ಸಂದರ್ಭದಲ್ಲಿ ಪೂಜಿಸುತ್ತಿದ್ದ ಒಂದೂವರೆ ಕೆಜಿ ತೂಕದ ಚಿನ್ನದ ವಿಗ್ರಹವೂ ಈಗ ನಾಪತ್ತೆಯಾಗಿದೆ. ಆ ವಿಗ್ರಹ ವನ್ನು ಸ್ವಾಮಿಗಳು ಚೌತಿಯ ಉತ್ಸವಗಳಲ್ಲಿ ಇಟ್ಟು ಪೂಜಿಸುತ್ತಿದ್ದರು.

ಸ್ವಾಮೀಜಿ ಅಷ್ಟ ಮಠಗಳಲ್ಲಿಯೇ ಶ್ರೀಮಂತ ಯತಿಗಳಾಗಿದ್ದಾರೆ. ಸುಮಾರು 500ಕೋಟಿಗಳಷ್ಟು ಆಸ್ತಿ ಇತ್ತು. ಶಿರೂರು ಗ್ರಾಮದಲ್ಲಿ ಇನ್ನೂರು ಎಕರೆಗಳಷ್ಟ ಆಸ್ತಿ ಇವರ ಹೆಸರಲ್ಲಿತ್ತು. ಮುಂಬೈಯ ಜಯಕೃಷ್ಣ ಶೆಟ್ಟಿ ಮತ್ತು ಉಡುಪಿಯ ಬಾಸ್ಕರ ಶೆಟ್ಟಿಯ ಜೊತೆ ಸೇರಿ ರಿಯಲ್ ಎಸ್ಟೇಟ್ ವ್ಯವಹಾರವನ್ನೂ ಮಾಡಿದ್ದರು. ಅದರಲ್ಲಿ ಒಂದು ಕಟ್ಟಡ ಮಣಿಪಾಲದ ಐನೋಕ್ಸ್ ಬಳಿ ಇದೆ ಇನ್ನೊಂದು ಕಟ್ಟಡ ಮಣಿಪಾಲದಲ್ಲೇ ಅಪೂರ್ಣವಾಗಿ ಉಳಿದಿದೆ. ಈ ಸಮಸ್ಯೆಯನ್ನು ಶ್ರೀಗಳು ಇತ್ತೀಚೆಗೆ ದೈವದ ಮುಂದೆ ಹೇಳಿಕೊಂಡಿದ್ದರು.

Shiroor seerಮಧ್ವ ಪರಂಪರೆಯನ್ನು ಆಚರಿಸುವುದರಲ್ಲಿ ಅಷ್ಟಮಠಗಳೊಳಗೆ ಸಮಾನತೆಯಿಲ್ಲ ಯತಿಗಳು ತಮಗೆ ಬೇಕಾದಂತೆ ನಿಯಮಗಳನ್ನು ಮಾಡಿ ಆಳ್ವಿಕೆ ನಡೆಸುತ್ತಿದ್ದಾರೆ. ಭಕ್ತರನ್ನಾಗಲೀ ಊರಿನ ಜನರನ್ನಾಗಲೀ ವಿಶ್ವಾಸಕ್ಕೆ ತೆಗೆದುಕೊಂಡು ಸಮಿತಿಯನ್ನು ಮಾಡಿಲ್ಲ. ಯತಿಗಳು ತಪ್ಪು ಮಾಡಿದರೆ ತಿದ್ದು ಪಡಿ ಮಾಡಲು ಇಲ್ಲಿ ಯಾರಿಗೂ ಅಧಿಕಾರವಿಲ್ಲ ಅವರೇ ಸ್ವೇಚ್ಚೆಯಿಂದ ತಮಗೆ ಬೇಕಾದಂತೆ ನಡೆಯುತ್ತಿರುವುದರಿಂದ ಉಡುಪಿ ಕೃಷ್ಣ ಮಠದ ಹೆಸರು ಕೆಡುತ್ತಿದೆ. ಅದಕ್ಕೆ ಸಾಕ್ಷಿಯಾಗಿ  ಶಿರೂರು ಶ್ರೀಗಳ ಕರ್ಮಕಾಂಡಗಳು ಹೊರಬಿದ್ದಿರುವುದು. ಮಠಗಳಿಗೆ ಬರುವ ಆದಾಯ ಕೇವಲ ಅನ್ನ ಸಂತರ್ಪಣೆಗೆ ಸೀಮಿತವಾಗಿದೆಯೇ ಹೊರತು ಬ್ರಾಹ್ಮಣ ಸುಮುದಾಯಕ್ಕಾಗಲೀ ಸಮಾಜದ ಇತರರಿಗಾಗಲೀ ಇದುವರೆಗೂ ಪ್ರಯೋಜಕ್ಕೆ ಬಂದಿಲ್ಲ ಎನ್ನುವುದು ಭಕ್ತರ ಆಳಲು.

ಅದಮಾರು ಮಠದ ಅದೀನದಲ್ಲಿರುವ ಪಿಪಿಸಿ ವಿದ್ಯಾಸಂಸ್ಥೆಯಾಗಲಿ, ಪೆಜಾವರ ಶ್ರೀಗಳ ಅಧೀನದಲ್ಲಿರುವ ವಿದ್ಯೋದಯ ವಿದ್ಯಾಸಂಸ್ಥೆಯಾಗಲೀ ಬಡ ವಿದ್ಯಾರ್ಥಿಗಳಿಗೆ ಶುಲ್ಕದ ವಿಷಯದಲ್ಲಿ ಇದುವರೆಗೂ ರಿಯಾಯತಿ ನೀಡಿಲ್ಲ, ಅನ್ನವೊಂದೇ ಉಚಿತ ಸಿಗುವುದಲ್ಲದೆ ಬೇರೆ ಎನೂ ಇಲ್ಲ ಎಂದು ಪಾಲಕರೂ ಹೇಳುತ್ತಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English