2019ರ ವಿಶ್ವಕಪ್​ ಟೂರ್ನಿ..ಕೊಹ್ಲಿ ಪಡೆಯಲ್ಲಿ ಇವರೆಲ್ಲ ಸ್ಥಾನ ಪಡೆಯೋ ಸಾಧ್ಯತೆ!

6:25 PM, Wednesday, July 25th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

team-indiaಮುಂಬೈ: ಇಂಗ್ಲೆಂಡ್ನಲ್ಲಿ ನಡೆಯಲಿರುವ ಬಹುನೀರಿಕ್ಷಿತ 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಈಗಾಗಲೇ ಎಲ್ಲ ತಂಡಗಳು ಭರದ ತಯಾರಿ ನಡೆಸಿದ್ದು, ಟೀಂ ಇಂಡಿಯಾ ಕೂಡ ಅದರಿಂದ ಹೊರತಾಗಿಲ್ಲ. ಅದಕ್ಕಾಗಿ ಕೆಲವೊಂದು ಪರೀಕ್ಷೆಗೆ ತಂಡ ಒಳಗಾಗಿದೆ.

ಈ ಹಿಂದಿನ ಸರಣಿಗಳಲ್ಲಿ ಆಟಗಾರರು ನೀಡಿರುವ ಪ್ರದರ್ಶನದ ಆಧಾರದ ಮೇಲೆ ಈ ಎಲ್ಲ ಆಟಗಾರರು ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿ ಕಾಣುತ್ತಿವೆ.

ಈಗಾಗಲೇ ಈ ಹಿಂದಿನ ಅನೇಕ ಸರಣಿಗಳಲ್ಲಿ ಉತ್ತಮ ಜೊತೆಯಾಟ ನೀಡಿರುವ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ 2019ರ ವಿಶ್ವಕಪ್ನಲ್ಲೂ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ಇದೆ. ಏಕದಿನ ಪಂದ್ಯದಲ್ಲಿ ಮೂರು ದ್ವಿಶತಕ ಸಿಡಿಸಿರುವ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಐಸಿಸಿ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಅವರಿಗೆ ಮತ್ತೊಂದು ಚಾನ್ಸ್ ನೀಡುವ ಸಾಧ್ಯತೆ ಇದೆ. ಇನ್ನು ಆರಂಭಿಕ ಸ್ಥಾನಕ್ಕಾಗಿ ಕನ್ನಡಿಗ ಕೆಎಲ್ ರಾಹುಲ್ ಕೂಡ ಫೈಪೋಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ.

team-india-2ಮಧ್ಯಮ ಕ್ರಮಾಂಕದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ,ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿ, ಹಾಗೂ ದಿನೇಶ್ ಕಾರ್ತಿಕ್ ಅವಕಾಶ ಪಡೆದುಕೊಳ್ಳುವುದು ಬಹುತೇಕ ಖಚಿತ. ಏಕದಿನ ಪಂದ್ಯಗಳಲ್ಲಿ 35 ಶತಕ ಸಿಡಿಸಿರುವ ಕೊಹ್ಲಿ, ಚಾಣಾಕ್ಷ್ಯ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಹಾಗೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಬಲ್ಲ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಹುದು.

ಏಕದಿನದಲ್ಲಿ ಅತಿ ಹೆಚ್ಚು ಅವಕಾಶ ಪಡೆದುಕೊಳ್ಳದಿದ್ದರೂ ದಿನೇಶ್ ಕಾರ್ತಿಕ್ ಕೆಲವೊಮ್ಮೆ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿರುವ ಕಾರಣ ಅವರಿಗೆ ಚಾನ್ಸ್ ನೀಡಬಹುದು.

ಈ ಹಿಂದೆ ಟೀಂ ಇಂಡಿಯಾದ ಬೆಸ್ಟ್ ಫಿನಿಶರ್ ಎಂಬ ಪಟ್ಟ ಪಡೆದುಕೊಂಡಿದ್ದ ಸುರೇಶ್ ರೈನಾ ಕೆಲ ತಿಂಗಳ ಕಾಲ ತಂಡದಿಂದ ಹೊರಗುಳಿದಿದ್ದರು. ಆದರೆ, ಮತ್ತೆ ತಂಡಕ್ಕೆ ಸೇರ್ಪಡೆಗೊಂಡಿರುವ ಅವರು ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಳ್ಳಬಹುದು. ಆದರೆ ಈಗಾಗಲೇ ಬೆಸ್ಟ್ ಆಲ್ರೌಂಡರ್ ಆಗಿ ಗುರುತಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ತಮ್ಮ ಸ್ಥಾನ ಉಳಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ.

ಕಳೆದ ಕೆಲ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಸ್ಪಿನ್ನದ್ವಯರಾದ ಯಜುವೇಂದ್ರ ಹಾಗೂ ಕುಲ್ದೀಪ್ ತಂಡದಲ್ಲಿ ಸ್ಥಾನ ಪಡೆದುಕೊಳ್ಳುವುದು ಬಹುತೇಕ ಖಚಿತ. ಚಹಾಲ್ ಈಗಾಗಲೇ 25 ಏಕದಿನ ಪಂದ್ಯಗಳಿಂದ 45 ವಿಕೆಟ್, ಯಾದವ್ 23 ಪಂದ್ಯಗಳಿಂದ 48ವಿಕೆಟ್ ಪಡೆದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

team-india-3ಕಳೆದ ಕೆಲ ವರ್ಷಗಳಿಂದ ಡೆತ್ ಬೌಲರ್ಗಳಾಗಿ ಗುರುತಿಸಿಕೊಂಡಿರುವ ಜಸ್ಪ್ರೀತ್ ಬೂಮ್ರಾ ಹಾಗೂ ಭುವನೇಶ್ವರ್ ಕುಮಾರ್ ವಿಶ್ವಕಪ್ನಲ್ಲಿ ಸ್ಥಾನ ಪಡೆದುಕೊಳ್ಳಬಹುದು. ಏಕದಿನದಲ್ಲಿ ನಂಬರ್ 1ಸ್ಥಾನದಲ್ಲಿರುವ ಬೂಮ್ರಾ 37 ಪಂದ್ಯಗಳಿಂದ 64ವಿಕೆಟ್ ಪಡೆದುಕೊಂಡಿದ್ದಾರೆ. ಇವರಿಗೆ ಭುವಿ ಉತ್ತಮ ಸಾಥ್ ನೀಡಲಿದ್ದಾರೆ.

ಕೆಎಲ್ ರಾಹಲ್: ಒಂದು ವೇಳೆ ಆರಂಭಿಕರಾಗಿ ಶಿಖರ್-ರೋಹಿತ್ ಕಣಕ್ಕಿಳಿದರೆ ಕನ್ನಡಿಗ ಕೆಎಲ್ ರಾಹುಲ್ ಬೆಂಚ್ ಕಾಯಬೇಕಾಗುತ್ತದೆ. ಉಳಿದಂತೆ ವೇಗಿ ಉಮೇಶ್ ಯಾದವ್, ಸಿದ್ದಾರ್ಥ್ ಕೌಲ್, ಶಾರ್ದೂಲ್ ಠಾಕೂರ್ ಸ್ಥಾನ ಪಡೆದುಕೊಳ್ಳುವ ಚಾನ್ಸ್ ಇದೆ.

ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಅಂಬಟಿ ರಾಯುಡು, ಮನೀಷ್ ಪಾಂಡೆ, ರಿಷಬ್ ಪಂತ್ ಕೃನಾಲ್ಪಾಂಡ್ಯ ಸ್ಥಾನ ಪಡೆದುಕೊಳ್ಳಲು ಹರಸಾಹಸ ಪಡೆಬೇಕಾಗಿದೆ. ಇದರ ಜತೆಗೆ ಅನುಭವಿ ಸ್ವಿನ್ನರ್ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜಾ ತಮ್ಮ ಸ್ಥಾನಕ್ಕಾಗಿ ಪೈಪೋಟಿ ನೀಡಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English