ಮಳೆ ಹಾನಿಯೂ ಸಾಕಷ್ಟು ಆಗಿದೆ..ಇದಕ್ಕೆ ಸೂಕ್ತ ಪರಿಹಾರ ಕೈಗೊಳುತ್ತೆವೆ: ಕುಮಾರಸ್ವಾಮಿ

10:10 AM, Tuesday, August 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamy-2ಮಂಗಳೂರು: ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. 15 ವರ್ಷದ ಬಳಿಕ ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಮಳೆ ಹಾನಿಯೂ ಸಾಕಷ್ಟು ಆಗಿದೆ. ಈಗಾಗಲೇ ಪರಿಹಾರವನ್ನೂ ನೀಡಿದ್ದೇವೆ ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದರು.

ಶ್ರಾವಣದ ಮೊದಲ ಸೋಮವಾರದಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಅವರು ಮಾಧ್ಯಮದವರ ಜತೆ ಮಾತನಾಡಿ, ಜಿಲ್ಲಾವಾರು ಮಳೆ ಹಾನಿ ಸಭೆ ನಡೆಸಲು ನೀತಿ ಸಂಹಿತೆ ಸಮಸ್ಯೆ ಇದೆ. ಹಾಗಾಗಿ ಜಿಲ್ಲೆಯ ಅಧಿಕಾರಿಗಳಿಂದ ವರದಿ ತರಿಸಿಕೊಂಡು ಸೂಕ್ತ ಪರಿಹಾರ ನೀಡುವ ಭರವಸೆ ನೀಡುತ್ತೇನೆ ಎಂದರು.

75%ಕ್ಕಿಂತ ಅಧಿಕ ಹಾನಿಯಾದ ಮನೆಗಳನ್ನು ಸರ್ಕಾರ ಕಟ್ಟಿ ಕೊಡುತ್ತದೆ. ಸರ್ಕಾರದಲ್ಲಿ ಹಣದ ಸಮಸ್ಯೆ ಇಲ್ಲ, 1309 ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹ ಆಗಿದೆ. 32.7% ತೆರಿಗೆ ಹೆಚ್ಚಳವಾಗಿದೆ. ಚುನಾವಣೆ ಬಳಿಕ ಜಿಲ್ಲಾವಾರು ಸಭೆ ನಡೆಸಿ ವಿವರವಾದ ವರದಿ ಸಂಗ್ರಹಿಸುತ್ತೇನೆ. ಕೊಡಗು ಜಿಲ್ಲೆಯಲ್ಲಿ ಸಭೆ ನಡೆದಿದೆ.100 ಕೋಟಿ ಅನುದಾನ ಘೋಷಣೆ ಮಾಡಿದ್ದೇನೆ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿಯನ್ನು ಯಾರಿಗೂ ತೊಂದರೆ ಆಗದಂತೆ ಜಾರಿ ಮಾಡಲು ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ಕರೆಯುತ್ತೇನೆ. ಮರಳು ದಂಧೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ರೈತರ ಸಾಲ ಮನ್ನಾ ಬಗ್ಗೆ ಹೆಚ್ಚಿನ ಗಮನ ನೀಡಿದ್ದೇನೆ. ಇನ್ನು ಇತರ ವಿಚಾರದತ್ತ ಗಮನ ಹರಿಸುತ್ತೇನೆ. ರಾಜ್ಯದ ಕೆಲವು ನ್ಯೂನತೆಗಳ ಬಗ್ಗೆ ಸರಿಪಡಿಸಲು ಕಠಿಣ ಕ್ರಮ ಕೈಗೊಳ್ಳಬೇಕು. ಏರ್ ಶೋ ಸ್ಥಳಾಂತರ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಮಾತನಾಡಬೇಕು. ಈ ಬಗ್ಗೆ ಪ್ರಧಾನಿ, ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.

ಶ್ರಾವಣ ಮಾಸದ ಸೋಮವಾರ ಸಂದರ್ಭದಲ್ಲಿ ನಾಡಿನ ಸಮಸ್ಯೆ ಬಗೆಹರಿಯಲಿ ಎಂದು ಬೇಡಿಕೊಂಡಿದ್ದೇನೆ. ಕೆಟ್ಟ ದೃಷ್ಟಿ ಬೀಳದಿರಲಿ ಸರ್ಕಾರದ ಮೇಲೆ ಎಂದೂ ಕೂಡ ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English