ಚಾರ್ಮಾಡಿ ಘಾಟ್​ನಲ್ಲಿ ಟ್ರಾಫಿಕ್ ಜಾಮ್..!

2:58 PM, Saturday, August 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

charmadi-ghatಚಿಕ್ಕಮಗಳೂರು: ಲಾರಿಯೊಂದು ಕೆಟ್ಟು ನಿಂತ ಪರಿಣಾಮ ಮೂಡಿಗೆರೆ ತಾಲೂಕಿನಲ್ಲಿರುವ ಚಾರ್ಮಾಡಿ ಘಾಟ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ಸುಮಾರು 5 ಕಿಮೀ‌ ವರೆಗೂ ವಾಹನಗಳು ಸಾಲು ಗಟ್ಟಿ ನಿಂತಿವೆ.

ವಾಹನಗಳು ಕೊಟ್ಟಿಗೆಹಾರದ ಬಳಿ ವಾಪಸ್ ‌ತೆರಳುತ್ತಿವೆ. ದಟ್ಟ ಮಂಜು ಹಾಗೂ ತುಂತುರು ಮಳೆಯಿಂದಾಗಿ ಪ್ರಯಾಣಿಕರು ಕಂಗಾಲಾಗಿದ್ದು, ಮಂಗಳೂರು-ಧರ್ಮಸ್ಥಳ ಕಡೆ ತೆರಳುವ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ.

ಶಿರಾಡಿ‌ ಘಾಟ್ ರಸ್ತೆ ಬಂದ್ ಹಿನ್ನೆಲೆಯಲ್ಲಿ ಪರ್ಯಾಯವಾಗಿ ಚಾರ್ಮಾಡಿಯಲ್ಲಿ ಭಾರೀ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ವಾಹನದಟ್ಟಣೆಯೂ ಹೆಚ್ಚಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English