ಏಷ್ಯಾ ಕಪ್: ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ..!

12:35 PM, Thursday, September 20th, 2018
Share
1 Star2 Stars3 Stars4 Stars5 Stars
(No Ratings Yet)
Loading...

indiaನವದೆಹಲಿ: ಏಷ್ಯಾ ಕಪ್ ಟೂರ್ನಿಯ ಕ್ರಿಕೆಟ್ ಪಂದ್ಯದಲ್ಲಿ ಮ್ಯಾಜಿಕಲ್ ಬೌಲಿಂಗ್ನಿಂದ ಬದ್ಧ ಎದುರಾಳಿ ಪಾಕ್ ತಂಡವನ್ನು ಮಣಿಸಿ ಭಾರತ ದಿಗ್ವಿಜಯ ಸಾಧಿಸಿದ ಹಿನ್ನೆಲೆಯಲ್ಲಿ ದೇಶದ ಕ್ರೀಡಾಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

ಭಾರತ-ಪಾಕ್ ಕ್ರಿಕೆಟ್ ಪಂದ್ಯ ಅಂದ್ರೇನೇ ಹಾಗೆ. ವಿಶ್ವ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸುವಂತದ್ದು. ಹೀಗಿರುವಾಗ ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್ ಟೂರ್ನಿಯಲ್ಲಿ ಈ ಎರಡೂ ದೇಶಗಳ ಮಧ್ಯದ ಕ್ರಿಕೆಟ್ ಫೈಟ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.

ಈ ಪಂದ್ಯದಲ್ಲಿ ಪಾಕ್ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿದೆ. ಕೇವಲ 162 ರನ್ಗೆ ಪಾಕ್ ತಂಡವನ್ನು ಟೀಂ ಇಂಡಿಯಾ ಬೌಲರ್ಗಳು ಕಟ್ಟಿಹಾಕಿದ್ದರಿಂದ ಟೀಂ ಇಂಡಿಯಾಗೆ ಜಯ ಸುಲಭವಾಯಿತು. ಈ ವಿಜಯವನ್ನು ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

ಅಲಹಾಬಾದ್ ಸೇರಿದಂತೆ ದೇಶದ ಹಲವೆಡೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ.

india-2

india-3

india-4

india-5

india-6

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English