‘ಏರಾಉಲ್ಲೆರ್‌ಗೆ’ ಕರಾವಳಿಯಾದ್ಯಂತ ತೆರೆಗೆ

12:27 PM, Friday, September 21st, 2018
Share
1 Star2 Stars3 Stars4 Stars5 Stars
(5 rating, 1 votes)
Loading...

er-ullergeಮಂಗಳೂರು : ಬೊಳ್ಳಿ ಮೂವಿಸ್ ಲಾಂಛನದಲ್ಲಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ’ಏರಾಉಲ್ಲೆರ್‌ಗೆ’ ತುಳು ಚಲನ ಚಿತ್ರದ ಬಿಡುಗಡೆ ಸಮಾರಂಭವು ರಾಮಕಾಂತಿ ಚಿತ್ರಮಂದಿರದಲ್ಲಿ ಶುಕ್ರವಾರ  ಬೆಳಗ್ಗೆ ಜರಗಿತು.

ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಡಾ.ಬಿ.ಎ ವಿವೇಕ್ ರೈ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ತುಳು ಭಾಷಾ ಬೆಳವಣಿಗೆಗೆ ಪೂರಕವಾಗಿರುವ ತುಳುಚಿತ್ರರಂಗದಲ್ಲಿ ಉತ್ತಮ ಚಿತ್ರಗಳು ಬರುತ್ತಿದ್ದು ಸಂತೋಷದ ವಿಚಾರ, ತುಳು ಸಿನಿಮಾಗಳನ್ನು ಎಲ್ಲಾ ತುಳುವರು ನೋಡಿ ಪ್ರೋತ್ಸಾಹಿಸುವಂತಾಗಲಿ ಎಂದರು.

ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಟಿ.ಎ ಶ್ರೀನಿವಾಸ್, ವಿಜಯಕುಮಾರ್ ಕೊಡಿಯಾಲ್ ಬೈಲ್, ದೇವದಾಸ್ ಪಾಂಡೇಶ್ವರ್, ರಾಜೇಶ್ ಬ್ರಹ್ಮಾವರ, ರತೀಂದ್ರನಾಥ, ಅಶೋಕ್ ಶೇಟ್, ಭಾಸ್ಕರ ಚಂದ್ರ ಶೆಟ್ಟಿ. ಮುಖೇಶ್ ಹೆಗ್ಡೆ , ಚಂದ್ರಹಾಸ ಶೆಟ್ಟಿ ರಂಗೋಲಿ, ಜಗನ್ನಾಥ ಶೆಟ್ಟಿ ಬಾಳ, ಗಿರೀಶ್ ಎಂ. ಶೆಟ್ಟಿ ಕಟೀಲು, ಪಮ್ಮಿ ಕೊಡಿಯಾಲ್‌ಬೈಲ್, ಪ್ರೇಮ್ ಶೆಟ್ಟಿ ಸುರತ್ಕಲ್ , ವಿನ್ಸೆಂಟ್ ಡಿ’ಕುನ್ಹ, ಉದಯ ಪೂಜಾರಿ, ಡಾ ಶಿವಶರಣ್ ಶೆಟ್ಟಿ, ಇಂದಿರಾ, ನಿರ್ಮಾಪಕರಾದ ಟಿ. ಹರೀಂದ್ರ ಪೈ, ಕಿಶೋರ್ ಕೊಟ್ಟಾರಿ, ದಿನೇಶ್ ಶೆಟ್ಟಿ, ಶರ್ಮಿಳಾ ಕಾಪಿಕಾಡ್ , ರಶ್ಮಿಕಾ ಚೆಂಗಪ್ಪ, ಅರ್ಜುನ್ ಕಾಪಿಕಾಡ್, ಅನೂಪ್ ಸಾಗರ್, ಆರಾಧ್ಯ ಶೆಟ್ಟಿ, ಅನುರಾಗ್ , ಪ್ರಕಾಶ್ ಧರ್ಮನಗರ, ಆರ್ ವಸಂತ ರಾವ್, ಅವಿನಾಶ್ ಶೆಟ್ಟಿ, ರತ್ನಾಕರ ಪೈ, ಕಾವ್ಯ ಅರ್ಜುನ್, ಸಚಿನ್ ಎ,ಎಸ್ ಉಪ್ಪಿನಂಗಡಿ, ರಾಜೇಶ್ ಕುಡ್ಲ , ಸಾಯಿಕೃಷ್ಣ, ಸುಜೀತ್ ನಾಯಕ್, ಶೋಭsರಾಜ್, ಅರ್ಜುನ್ ಕಜೆ ಮೊದಲಾದವರು ಉಪಸ್ಥಿತರಿದ್ದರು.

ನಿರ್ದೇಶಕ ದೇವದಾಸ್ ಕಾಪಿಕಾಡ್ ಸ್ವಾಗತಿಸಿದರು. ವಿಟ್ಲ ಮಂಗೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.

’ಏರಾ ಉಲ್ಲೆರ್‌ಗೆ’ ತುಳು ಸಿನಿಮಾವು ಮಂಗಳೂರಿನಲ್ಲಿ ರಾಮಕಾಂತಿ, ಬಿಗ್‌ಸಿನಿಮಾಸ್, ಪಿ.ವಿ.ಆರ್, ಸಿನಿಪೊಲೀಸ್, ಉಡುಪಿಯಲ್ಲಿ ಕಲ್ಪನಾ, ಮಣಿಪಾಲದಲ್ಲಿ ಐನಾಕ್ಸ್, ಬಿಗ್‌ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಮೂಡಬಿದ್ರೆಯಲ್ಲಿ ಅಮರಶ್ರೀ ಚಿತ್ರಮಂದಿರದಲ್ಲಿ ತೆರೆ ಕಂಡಿದೆ.

ಸಂಪೂರ್ಣ ಕರ್ನಾಟಕಕ್ಕೆ ಮಂಗಳೂರು ಗುರು ಫಿಲಂಸ್ ನ ಸಚಿನ್ ಎ.ಎಸ್, ಉಪ್ಪಿನಂಗಡಿ, ರಾಜೇಶ್ ಕುಡ್ಲ ನಿರ್ವಹಿಸಿದ್ದಾರೆ.

2 ಪ್ರತಿಕ್ರಿಯ - ಶೀರ್ಷಿಕೆ - ‘ಏರಾಉಲ್ಲೆರ್‌ಗೆ’ ಕರಾವಳಿಯಾದ್ಯಂತ ತೆರೆಗೆ

  1. Arun, Manglore

    tulu movie yera ullerge yedde undu and aravind bolar ithnda nanala yedde aathu this my comment naneen d padil over acting aar borchinda no problem

  2. Bhavitha, Uppinangady

    Yan thuthuji but tariler thuye but masth sup undu…..yank thuvodu pandh Ashe apundu…..all the best

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English