ಮೊದಲ ಹಂತದಲ್ಲಿ ಬಿಡಿಎ ಮೂಲಕ ಐದು ಸಾವಿರ ಸೈಟ್ ಹಂಚಿಕೆ: ಹೆಚ್.ಡಿ.ಕುಮಾರಸ್ವಾಮಿ

5:28 PM, Tuesday, September 25th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamyಬೆಂಗಳೂರು: ಮೊದಲ ಹಂತದಲ್ಲಿ ಬಿಡಿಎ ಮೂಲಕ ಐದು ಸಾವಿರ ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಪರಮೇಶ್ವರ್ ಅವರೊಂದಿಗೆ ಸೇರಿ ಆನ್ಲೈನ್ ಮೂಲಕ ಸೈಟ್ ಹಂಚಿಕೆ ಮಾಡಿ ಸಿಎಂ ಕುಮಾರಸ್ವಾಮಿ ಮಾತನಾಡಿದರು. ಈಗಾಗಲೇ 18,920 ಒಟ್ಟಾರೆ ಸೈಟ್ಗಳನ್ನ ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ. ಭೂಮಾಲೀಕರಿಗೆ 2,165 ಸೈಟ್ ನೀಡಲಾಗಿದೆ. 869 ಸೈಟ್ಗಳನ್ನ ಅರ್ಕಾವತಿ ಲೇಔಟ್ ನಿವೇಶನದಾರರಿಗೆ ಹಂಚಿಕೆ ಮಾಡಲಾಗಿದ್ದು, ಹಂಚಿಕೆದಾರರ ಹೆಸರುಗಳನ್ನ ಬಿಡುಗಡೆ ಮಾಡಲಾಗಿದೆ ಎಂದು ವಿವರಿಸಿದರು.

ಮೂಲಭೂತ ಸೌಕರ್ಯಗಳ ಕೆಲಸ ನಡೀತಿದೆ. ನಿವೇಶನ ಪಡೆದವರು ಮನೆ ಕಟ್ಟಲು ಸಮಸ್ಯೆ ಇಲ್ಲ. ರಸ್ತೆ, ಚರಂಡಿ ಕೆಲಸ ನಡೀತಿದೆ. ಎಲ್ಲ ಸೌಕರ್ಯಗಳನ್ನ ಸಂಪೂರ್ಣವಾಗಿ ಒದಗಿಸಿಕೊಡ್ತೀವಿ. ಮೂರು ಸಾವಿರ ಕೋಟಿ ವೆಚ್ಚದಲ್ಲಿ ಕೆಲಸ ನಡೀತಿದೆ. ಎರಡನೇ ಹಂತದಲ್ಲಿ ಐದು ಸಾವಿರ ಸೈಟ್ ಹಂಚಿಕೆ ಮಾಡಲಾಗುವುದು. 20*30, 30*40, 40*60*, 60*80 ಅಳತೆಯ ಸೈಟ್ ಹಂಚಿಕೆ ಆಗಲಿದೆ ಎಂದು ಸಿಎಂ ಭರವಸೆ ನೀಡಿದರು.

ಬಿಬಿಎಂಪಿ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇವೆ. ಮೂರ್ನಾಲ್ಕು ದಿನ ಮಳೆ ಹೆಚ್ಚಾಗುತ್ತೆ ಅಂತ ಹವಾಮಾನ ಇಲಾಖೆ ಹೇಳಿಕೆ ನೀಡಿದೆ, ಈ ಹಿನ್ನೆಲೆಯಲ್ಲಿ ಡಿಸಿಎಂ ಕೂಡ ಸಭೆ ಮಾಡಿದ್ದಾರೆ. ಅಧಿಕಾರಿಗಳನ್ನ ಅಲರ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ. ಬೆಳಗ್ಗೆ ನಾಲ್ಕು ಗಂಟೆ ತನಕ ಅಧಿಕಾರಿಗಳು ಫೀಲ್ಡ್ ನಲ್ಲಿದ್ರು. ಮನೆಗಳಿಗೆ ನುಗ್ಗಿದ ನೀರನ್ನ ಹೊರ ಹಾಕುವಂತೆ ಸೂಚನೆ ನೀಡಿದ್ದೇನೆ. ಮರಗಳು ಬಿದ್ದಿದ್ದರಿಂದ ಸಂಚಾರಕ್ಕೆ ತೊಂದ್ರೆಯಾಯ್ತು. ಸಿಎಸ್ ಬಳಿಯೂ ಕೂಡ ಚರ್ಚೆ ಮಾಡಿದ್ದೇವೆ. ಮಾಧ್ಯಮಗಳ ಸಲಹೆಗಳನ್ನೂ ಸ್ವೀಕರಿಸುತ್ತೇವೆ. ಹಳ್ಳ ಪ್ರದೇಶಗಳಲ್ಲಿ ಕ್ರಮ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ತೆಗೆದುಕೊಳ್ಳುವಂತೆ ಸಿಎಸ್ಗೆ ಸೂಚನೆ ನೀಡಿದ್ದೇನೆ. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ರೆ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಸಿಎಂ ವಿವರಿಸಿದರು.

ಮಾನವೀಯತೆಯನ್ನ ನೋಡಬೇಕು. ಒತ್ತುವರಿದಾರರನ್ನ ಏಕಾಏಕಿ ಆಚೆ ಹಾಕಿದ್ರೆ ತೊಂದ್ರೆಯಾಗುತ್ತೆ. ಕೆಲವು ತಪ್ಪುಗಳು ಆಗಿರೋದು ನಿಜ. ಪ್ರತಿಯೊಬ್ಬರಿಗೂ ಉತ್ತಮ ಬದುಕು ಕೊಡುವ ಜವಾಬ್ದಾರಿ ನಮ್ಮ ಮೇಲಿದೆ. ತಕ್ಷಣ ಸಭೆ ಮಾಡುವಂತೆ ಸಿಎಸ್ಗೆ ಸೂಚನೆ ಕೊಟ್ಟಿದ್ದೇವೆ. 28 ರಂದು ಸಭೆ ಕರೆದಿದ್ದೇನೆ. ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಶಾಶ್ವತವಾಗಿ ಪರಿಹಾರ ನೀಡೋದಕ್ಕೆ ಯೋಜನೆ ಜಾರಿ ಮಾಡ್ತೀವಿ. ಸರ್ವೇ ರಿಪೋರ್ಟ್ ಬಂದ ನಂತರ ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುವುದು. ಸದ್ಯಕ್ಕೆ ತೆರವು ಕಾರ್ಯಾಚರಣೆ ನಿಲ್ಲಿಸಿದ್ದೇವೆ ಎಂದು ಹೇಳಿದರು.

ಅಭ್ಯರ್ಥಿ ಹಾಕದಿದ್ದಕ್ಕೆ ಬಿಜೆಪಿ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಣ್ಣ ಮಾತುಗಳನ್ನ ಹೇಳೋಕೆ ಹೋಗಲ್ಲ. ರಮೇಶ್ ಗೌಡ ಆಯ್ಕೆ ಬಗ್ಗೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ ವಿಚಾರ ಗೊತ್ತಿಲ್ಲ. ಅದನ್ನ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡ್ತೀವಿ. ಇಲ್ಲಿ ಆ ಬಗ್ಗೆ ಯಾಕೆ ಮಾತು ಅಂತ ಸಿಎಂ ಗರಂ ಆದರು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಮಾತನಾಡಿ, ಇನ್ನೂ 2,383 ಎಕರೆ ಲಭ್ಯವಾಗಿದೆ. 4971 ಸೈಟ್ಗಳನ್ನ ಹಂಚಿಕೆ ಮಾಡಲಾಗ್ತಿದೆ. ಸೈಟ್ ಸಿಗದೇ ಇರುವವರಿಗೆ ಒಂದು ತಿಂಗಳಲ್ಲಿ ಹಣ ವಾಪಸ್ ಮಾಡಲಾಗಿದೆ. 15,220 ಅರ್ಜಿಗಳು ಬಂದಿದ್ದವು. 1,400 ಕೋಟಿ ಆದಾಯ ಬರಲಿದೆ. ಸಾಮಾನ್ಯ ವರ್ಗದವರು ಎರಡು ತಿಂಗಳೊಳಗೆ ಹಣ ಪಾವತಿ ಮಾಡಬೇಕು. ಪಾವತಿ ಮಾಡದಿದ್ರೆ ನಂತರ ಬಡ್ಡಿ ಹಾಕಲಾಗುತ್ತೆ. ಎಸ್ಸಿ, ಎಸ್ಟಿ ಹಂಚಿಕೆದಾರರಿಗೆ ಮೂರು ವರ್ಷಗಳ ತನಕ ಕಾಲಾವಕಾಶ ಇದೆ. ನಿವೇಶನದಾರರ ಅನುಕೂಲಕ್ಕಾಗಿ ಸಾಲ ಮೇಳ ಭರವಸೆ ನೀಡಿದರು.

ನಿವೇಶನದಾರರು ಸಿಎಂ ಬಳಿ ಅಳಲು ತೋಡಿಕೊಂಡ ಪ್ರಸಂಗ ಗೋಚರಿಸಿತು. ಆರು ತಿಂಗಳು ಕಾಲಾವಕಾಶ ನೀಡಬೇಕು. ಮನವಿ ಪತ್ರ ಕೊಡಿ ಪರಿಶೀಲನೆ ಮಾಡ್ತೀವಿ ಎಂದು ಸಿಎಂ ಭರವಸೆ ನೀಡಿದರು. ಸಚಿವ ಜಮೀರ್ ಅಹಮದ್, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English