ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆಭರಣ ಪೆಟ್ಟಿಗೆ ಸನ್ನಿಧಾನಕ್ಕೆ ತರುವುದಿಲ್ಲ: ಅರಮನೆ ಘೋಷಣೆ

3:43 PM, Friday, October 5th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

tiruvabharanamಕಾಸರಗೋಡು: ಶಬರಿ ಮಲೆ ದೇವಸ್ಥಾನದ ಹದಿನೆಂಟು ಮೆಟ್ಟಿಲುಗಳನ್ನು ದಾಟಿ ಒಂದೇ ಒಂದು ಹೆಣ್ಣು ಒಳನಡೆದರೂ ಪಂದಳ ರಾಜರ ಅರಮನೆಯಲ್ಲಿರುವ ಆಭರಣದ ಪೆಟ್ಟಿಗೆ ಮುಂದೆಂದೂ ಶಬರಿ ಮಲೆಯ ಸನ್ನಿಧಾನಕ್ಕೆ ಬರುವುದಿಲ್ಲ ತರವುದಿಲ್ಲ ಎಂದು ಅರಮನೆ ಮೂಲಗಳು ಸುತ್ತೋಲೆ ಹೊರಡಿಸಿದೆ.

ದೇವಸ್ಥಾನವು ಸರಕಾರದ ಸೊತ್ತಾಗಿರಬಹುದು. ಆದರೆ ಅಯ್ಯಪ್ಪನಿಗೆ ಸಂಬಂಧಪಟ್ಟ ಆಭರಣಗಳು ನಮ್ಮ ಕುಟುಂಬದ ಸ್ವತ್ತಾಗಿರುತ್ತದೆ. ಅದನ್ನ ಬಲವಂತವಾಗಿ ಯಾರೂ ತರಿಸಿಕೊಳ್ಳಲಾಗುವುದಿಲ್ಲ. ಹೆಂಗಸರು ಪ್ರವೇಶಿಸುವ ಶಬರಿಮಲೆಗೆ ಇನ್ನು ಮುಂದೆ ಪಂದಳ ರಾಜಮನೆತನದವರು ಕಾಲಿಡುವುದಿಲ್ಲ ಎಂಬ ಪ್ರಕಟಣೆಯ ಮೂಲಕ ಕರಾರಾಗಿ ಪ್ರಕಟಿಸುತ್ತೇವೆ ಎಂದು ಸರ್ಕಾರಕ್ಕೂ ದೇವಸ್ಥಾನದ ಆಡಳಿತ ಮಂಡಳಿಗೂ ಸುತ್ತೋಲೆಯನ್ನು ಕಳಿಸಿದ್ದಾರೆ.

ಇಷ್ಟಾಗಿಯೂ ತೀರ್ಪನ್ನು ಕಡ್ಡಾಯಗೊಳಿಸಿದರೆ ಶಬರಿಮಲೆಯ ತಂತ್ರಿಗಳೂ ಸಾಮೂಹಿಕವಾಗಿ ಪದತ್ಯಾಗ ಮಾಡುವುದರೊಂದಿಗೆ ಇನ್ನುಮುಂದೆ ಶಬರಿಮಲೆಗೂ ಬರುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.

1 ಪ್ರತಿಕ್ರಿಯೆ - ಶೀರ್ಷಿಕೆ - ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆಭರಣ ಪೆಟ್ಟಿಗೆ ಸನ್ನಿಧಾನಕ್ಕೆ ತರುವುದಿಲ್ಲ: ಅರಮನೆ ಘೋಷಣೆ

  1. ಸರಿಯಾದ ನಿರ್ಧಾರ, Kundapura

    ಹಳೆಯ ಅಯ್ಯಪ ನಿಯಮಗಳೇ ಬೇಕು

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English