ಕಾರಿಗೆ ಕೆಟಿಎಂ ಬೈಕ್ ಡಿಕ್ಕಿ: ಬೈಕ್ ಸವಾರ ಸಾವು

11:05 AM, Wednesday, November 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

nantoorಮಂಗಳೂರು: ನಗರದ ನಂತೂರು-ಕೆಪಿಟಿ ರಸ್ತೆಯಲ್ಲಿ ಕಾರಿಗೆ ಕೆಟಿಎಂ ಬೈಕ್ ಡಿಕ್ಕಿಯಾದ ಪರಿಣಾಮ ಸವಾರ ರಸ್ತೆಗೆ ಬಿದ್ದ ವೇಳೆ ಹಿಂದಿನಿಂದ ಬರುತ್ತಿದ್ದ ಬಸ್ ಸವಾರನ ಮೇಲೆ ಹರಿದ ಪರಿಣಾಮ ಆತ ಮೃತಪಟ್ಟ ಘಟನೆ ನಡೆದಿದೆ.

ಕೋಣಾಜೆ ಇನ್ನೋಳಿ ನಿವಾಸಿ ವಿಲ್ಸನ್ (26) ಮೃತಪಟ್ಟ ಯುವಕ. ಸಹ ಸವಾರ ಮೆಂಡೋನ್ಸಾ (24) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಬೈಕ್‌ನಲ್ಲಿ ಪದುವಾ ಸಮೀಪದಿಂದ ಕೆಪಿಟಿ ಕಡೆ ಹೋಗುತ್ತಿದ್ದಾಗ ಬೈಕ್ ಕಾರಿಗೆ ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಈ ವೇಳೆ ಇಬ್ಬರು ಕೂಡ ರಸ್ತೆಗೆ ಬಿದ್ದಿದ್ದು, ವಿಲ್ಸನ್ ಮೇಲೆ ಹಿಂದಿನಿಂದ ಬರುತ್ತಿದ್ದ ಬಸ್ ಹರಿದಿದೆ.

ಇದರಿಂದ ಗಂಭೀರ ಗಾಯಗೊಂಡ ವಿಲ್ಸನ್ನನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇನ್ನು ಸಹ ಸವಾರ ಮೆಂಡೋನ್ಸಾಗೂ ಗಾಯವಾಗಿದ್ದು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದೇಶದಲ್ಲಿರುವ ವಿಲ್ಸನ್ ವೀಸಾ ನವೀಕರಣಕ್ಕಾಗಿ ಊರಿಗೆ ಬಂದಿದ್ದರು. ಗೆಳೆಯ ಮೆಂಡೋನ್ಸಾ ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಂಗಳೂರು ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English