ವಿಜಯ್​​​ ಮಲ್ಯ ಸಾಲ ಮರುಪಾವತಿ ಕೇಸ್​​​​​​​​​​​​​​​​​​​: ವಿಚಾರಣೆ ಮುಂದೂಡಿದ ಹೈಕೋರ್ಟ್​

10:14 AM, Tuesday, December 18th, 2018
Share
1 Star2 Stars3 Stars4 Stars5 Stars
(No Ratings Yet)
Loading...

vijay-malyaಬೆಂಗಳೂರು: ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಸಾಲದ ಮರುಪಾವತಿ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 20ಕ್ಕೆ ಮುಂದೂಡಿದೆ.

ಈ ಹಿಂದೆ ಇದೇ ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದಿತ್ತು. ‘ವಿಜಯ್ ಮಲ್ಯಗೂ ಯುಎಸ್ಎಲ್ಗೂ ಸಂಬಂಧವಿಲ್ಲ. ಹೀಗಾಗಿ, ಐಡಿಬಿಐ ಸಾಲದಿಂದ ಯುಎಸ್ಎಲ್ ಮುಕ್ತಗೊಳಿಸಿ, ವಿಜಯ್ ಮಲ್ಯ ಕೇವಲ ಶೇ. 2 ರಷ್ಟು ಷೇರು ಹೊಂದಿದ್ದಾರೆ. ಯುಎಸ್ಎಲ್ ಪ್ರತ್ಯೇಕ ಕಂಪನಿ ಎಂದು ವಕೀಲ/ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ವಾದ ಮಂಡಿಸಿದ್ದರು.

ಪಿ.ಚಿದಂಬರಂ ಅವರ ವಾದ ಒಪ್ಪದ ಐಡಿಬಿಐ ವಕೀಲರು, ಸಾಲ ನೀಡುವಾಗ ವಿಜಯ್ ಮಲ್ಯ ಯುಎಸ್ಎಲ್ ಅಧ್ಯಕ್ಷ ಆಗಿದ್ದರು. ಹೀಗಾಗಿಯೇ ಕಿಂಗ್ ಫಿಶರ್ ಏರ್ಲೈನ್ಸ್ಗೆ ಸಾಲ ನೀಡಲಾಗಿದೆ. ಯುಎಸ್ಎಲ್ ಕಾರ್ಪೋರೇಟ್ ಗ್ಯಾರಂಟಿ ನೀಡಿದೆ ಎಂದು ಪ್ರತಿ ವಾದ ಮಂಡಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English