- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನೇತ್ರಾವತಿ ಸೇತುವೆ ಹಳಿ ದ್ವಿಗುಣ ರೈಲು ಸಂಚಾರ ಸಮಯ ಬದಲಾವಣೆ

Netravati Railway Bridge [1]

ಮಂಗಳೂರು : ರೈಲು ಹಳಿ ದ್ವಿಗುಣ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ನೇತ್ರಾವತಿ ಸೇತುವೆ ಮತ್ತು ಮಂಗಳೂರು ಜಂಕ್ಷನ್‌ (ಕಂಕನಾಡಿ) ನಡುವಿನ ರೈಲು ಸಂಚಾರ ವ್ಯವಸ್ಥೆಯನ್ನು ಕೆಲವು ನಿರ್ದಿಷ್ಟ ದಿನಗಳಿಗೆ ವ್ಯತ್ಯಯ ಮಾಡಲಾಗಿದೆ ಎಂದು ರೈಲ್ವೇ ಇಲಾಖೆಯ ಪ್ರಕಟನೆ ತಿಳಿಸಿದೆ.

ಕೆಲವು ರೈಲುಗಳ ಪ್ರಯಾಣ ರದ್ದು, ಇನ್ನು ಕೆಲವು ರೈಲುಗಳ ಸಮಯ ಬದಲಾವಣೆ ಹಾಗೂ ಇನ್ನು ಕೆಲವು ರೈಲುಗಳ ಪ್ರಯಾಣವನ್ನು ನಿರ್ಬಂಧಿಸಲಾಗಿದೆ.

ಮಂಗಳೂರು ಸೆಂಟ್ರಲ್‌- ಕಬಕ ಪುತ್ತೂರು ಪ್ಯಾಸೆಂಜರ್‌ (ಟ್ರೈನ್‌ ನಂ. 56645) ಮತ್ತು ಸುಬ್ರಹ್ಮಣ್ಯ ರೋಡ್‌- ಮಂಗಳೂರು ಸೆಂಟ್ರಲ್‌ ಪ್ಯಾಸೆಂಜರ್‌ (ಟ್ರೈನ್‌ ನಂ. 56646) ರೈಲುಗಳು ಎ. 28, 29, 30, ಮೇ 2, 3 ಮತ್ತು 4ರಂದು ಮಂಗಳೂರು ಸೆಂಟ್ರಲ್‌ ಮತ್ತು ಮಂಗಳೂರು ಜಂಕ್ಷನ್‌ ನಡುವೆ ಸಂಚರಿಸುವುದಿಲ್ಲ.

ನಿಜಾಮುದ್ದೀನ್‌ – ತಿರುವನಂತಪುರ ರಾಜಧಾನಿ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 12432) ರೈಲು ಪ್ರಯಾಣವನ್ನು ಎ. 30ರಂದು ಮಂಗಳೂರು ಜಂಕ್ಷನ್‌ ನಿಲ್ದಾಣದಲ್ಲಿ ಸುಮಾರು 45 ನಿಮಿಷ ತಡೆಹಿಡಿಯಲಾಗುವುದು.

ಮಂಗಳೂರು ಸೆಂಟ್ರಲ್‌- ಕಣ್ಣೂರು ಪ್ಯಾಸೆಂಜರ್‌ (56656) ರೈಲು ಮೇ 8, 9 ಮತ್ತು 10ರಂದು ಮಂಗಳೂರು ಸೆಂಟ್ರಲ್‌ ಮತ್ತು ಉಳ್ಳಾಲ ನಡುವೆ ಪ್ರಯಾಣಿಸುವುದಿಲ್ಲ. ಈ ರೈಲು ನಿಗದಿತ ಸಮಯಕ್ಕೆ ಉಳ್ಳಾಲ ನಿಲ್ದಾಣದಿಂದ ಹೊರಡುವುದು.

ಮೇ 8: ಮಂಗಳೂರು ಸೆಂಟ್ರಲ್‌- ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 12686) ಮೇ 8ರಂದು ಸಂಜೆ 4.10 ಗಂಟೆಯ ಬದಲು 110 ನಿಮಿಷ ತಡವಾಗಿ 6 ಗಂಟೆಗೆ ಹೊರಡುವುದು. ಮಂಗಳೂರು ಸೆಂಟ್ರಲ್‌- ತಿರುವನಂತಪುರ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16348) ಅಂದು ಮಧ್ಯಾಹ್ನ 2.30ರ ಬದಲಾಗಿ 225 ನಿಮಿಷ ತಡವಾಗಿ ಸಂಜೆ 6.15ಕ್ಕೆ ಹೊರಡುವುದು.

ಮಂಗಳೂರು ಸೆಂಟ್ರಲ್‌-ತಿರುವನಂತಪುರ ಮಾವೇಲಿ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16303) ಅಂದು ಸಂಜೆ 5.45ರ ಬದಲಾಗಿ 45 ನಿಮಿಷ ತಡವಾಗಿ 6.30ಕ್ಕೆ ಹೊರಡುವುದು. ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಮಲಬಾರ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16330) ಅಂದು ಸಂಜೆ 6.25ರ ಬದಲು 50 ನಿಮಿಷ ತಡವಾಗಿ 7.15ಕ್ಕೆ ಹೊರಡುವುದು. ನಾಗರಕೋವಿಲ್‌ – ಮಂಗಳೂರು ಸೆಂಟ್ರಲ್‌ ಎರ್ನಾಡ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16606) ಸಂಜೆ 4.45ರಿಂದ 6.35ರ ತನಕ (110 ನಿಮಿಷ) ತಡೆಹಿಡಿಯಲಾಗುವುದು

ಮೇ 9: ಮಂಗಳೂರು ಸೆಂಟ್ರಲ್‌ – ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 12686) ಮೇ 9ರಂದು ಸಂಜೆ 4.10ರ ಬದಲಾಗಿ 50 ನಿಮಿಷ ವಿಳಂಬವಾಗಿ 5 ಗಂಟೆಗೆ ಹೊರಡಲಿದೆ. ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16348) ಅಂದು ಮಧ್ಯಾಹ್ನ 2.30ರ ಬದಲಾಗಿ 165 ನಿಮಿಷ ತಡವಾಗಿ ಸಂಜೆ 5.15ಕ್ಕೆ ಹೊರಡಲಿದೆ. ನಾಗರಕೋವಿಲ್‌- ಮಂಗಳೂರು ಸೆಂಟ್ರಲ್‌ ಎರ್ನಾಡು ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16606) ಸಂಜೆ 4.45ರ ಬದಲಾಗಿ 50 ಗಂಟೆ ವಿಳಂಬವಾಗಿ 5.20ಕ್ಕೆ ಪ್ರಯಾಣ ಆರಂಭಿಸಲಿದೆ.

ಮೇ 10: ಮಂಗಳೂರು ಸೆಂಟ್ರಲ್‌ – ಚೆನ್ನೈ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 12686) ಮೇ 10ರಂದು ಸಂಜೆ 4.10ರ ಬದಲಾಗಿ 50 ನಿಮಿಷ ತಡವಾಗಿ 5 ಗಂಟೆಗೆ ಹೊರಡಲಿದೆ. ಮಂಗಳೂರು ಸೆಂಟ್ರಲ್‌ – ತಿರುವನಂತಪುರ ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16348) ಅಂದು ಮಧ್ಯಾಹ್ನ 2.30ರ ಬದಲು 165 ನಿಮಿಷ ತಡವಾಗಿ ಸಂಜೆ 5.15ಕ್ಕೆ ಹೊರಡಲಿದೆ.

ನಾಗರಕೋವಿಲ್‌ – ಮಂಗಳೂರು ಸೆಂಟ್ರಲ್‌ ಎರ್ನಾಡು ಎಕ್ಸ್‌ಪ್ರೆಸ್‌ (ಟ್ರೈನ್‌ ನಂ. 16606) ಉಳ್ಳಾಲ ನಿಲ್ದಾಣದಲ್ಲಿ 35 ನಿಮಿಷಗಳ ಕಾಲ ತಡೆಹಿಡಿಯಲ್ಪಟ್ಟು ಸಂಜೆ 4.45ಕ್ಕೆ ಬದಲಾಗಿ 5. 20ಕ್ಕೆ ಹೊರಡಲಿದೆ.