ತೆಲುಗಿನ ಖ್ಯಾತ ನಟರೊಬ್ಬರು, ‘ಸಮಂತಾ ಥರದ ಹುಡುಗಿ ಸಿಕ್ಕರೆ ಮದುವೆ ಆಗೋಕೆ ಸಿದ್ಧ’

4:27 PM, Friday, February 7th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

sumantha
ನಟಿ ಸಮಂತಾ ಚಿತ್ರರಂಗದಲ್ಲಿ ಸಾಕಷ್ಟು ಯಶಸ್ಸು ನೋಡಿ, ನಂತರ ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಿ ಈಗ ಸುಂದರ ಸಂಸಾರಕ್ಕೆ ಸಾಕ್ಷಿಯಾಗಿದ್ದಾರೆ. ನಾಗಚೈತನ್ಯ ಅವರನ್ನು ವರಿಸಿದ ನಂತರವೂ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಸಖತ್ ಬೇಡಿಕೆ ಇದೆ. ಹೀಗಿರುವಾಗ ತೆಲುಗಿನ ಖ್ಯಾತ ನಟರೊಬ್ಬರು, ‘ಸಮಂತಾ ಥರದ ಹುಡುಗಿ ಸಿಕ್ಕರೆ ಮದುವೆ ಆಗೋಕೆ ಸಿದ್ಧ’ ಎಂದಿದ್ದಾರೆ!

ಈ ರೀತಿ ಹೇಳಿಕೆ ನೀಡಿರುವುದು ನಟ ಶರ್ವಾನಂದ್. ಅಷ್ಟಕ್ಕೂ ಸಮಂತಾ ಥರದ ಹುಡುಗಿಯೇ ಯಾಕೆ ಬೇಕು? ಅದಕ್ಕೂ ಕಾರಣ ಇದೆ. ಅಂದಹಾಗೆ, ಅವರು ಹೇಳಿದ್ದೇನೆಂದರೆ, ‘ಮಜಿಲಿ ಚಿತ್ರದಲ್ಲಿ ಸಮಂತಾ ನಿಭಾಯಿಸಿರುವ ಪಾತ್ರದಂತೆಯೇ ಇರುವ ಹುಡುಗಿ ಸಿಕ್ಕರೆ ನಾನು ಮದುವೆಯಾಗಲು ಸಿದ್ಧ’ ಎಂದಿದ್ದಾರಂತೆ ಶರ್ವಾನಂದ್. ಕಳೆದ ವರ್ಷ ತೆರೆಕಂಡ ‘ಮಜಿಲಿ’ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು.

sumantha

ನಾಗಚೈತನ್ಯ ಮತ್ತು ಸಮಂತಾ ಒಟ್ಟಿಗೆ ನಟಿಸಿದ್ದ ‘ಮಜಿಲಿ’ ಸಿನಿಮಾವು ಪ್ರೇಮಕಥೆಯನ್ನು ಒಳಗೊಂಡಿತ್ತು. ಶ್ರಾವಣಿ ಅನ್ನೋ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಬ್ರೇಕ್‌ಅಪ್‌ ಆದ ಹುಡುಗನೊಬ್ಬನ್ನು ಮದುವೆಯಾಗಿ, ಅವನಿಗೆ ಹೊಂದಿಕೊಂಡು ಸಂಸಾರ ಮಾಡುವ ಪತ್ನಿಯಾಗಿ ಕಾಣಿಸಿಕೊಂಡಿದ್ದರು ಸಮಂತಾ. ಅದೇ ಥರ ಹೊಂದಿಕೊಂಡು ಹೋಗುವಂತಹ ಹುಡುಗಿ ಸಿಕ್ಕಿದರೆ ಮದುವೆ ಆಗುವ ಬಯಕೆ ಹೊಂದಿದ್ದಾರೆ ಶರ್ವಾನಂದ.

ಶರ್ವಾನಂದ್‌-ಸಮಂತಾ ಒಟ್ಟಿಗೆ ‘ಜಾನು’ ಚಿತ್ರದಲ್ಲಿ ನಟಿಸಿದ್ದಾರೆ. ತಮಿಳಿನ ’96’ ಚಿತ್ರದ ರಿಮೇಕ್ ಇದಾಗಿದ್ದು, ಈಗಾಗಲೇ ಟ್ರೇಲರ್ ಎಲ್ಲರ ಗಮನಸೆಳೆದಿದೆ. ಶುಕ್ರವಾರ ಸಿನಿಮಾ ತೆರೆಕಂಡಿದ್ದು, ಪ್ರೇಕ್ಷಕರು ಯಾವ ರೀತಿ ಸ್ವೀಕರಿಸಲಿದ್ದಾರೆ ಎಂಬ ಕಾದುನೋಡಬೇಕು.

sumantha

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English