ಇಂಧನ ಸಚಿವೆ ಶೋಭಾ ಕರಂದ್ಲಾಜೆ ಯವರಿಂದ ಮಂಗಳೂರಿನ ನೂತನ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

6:16 PM, Thursday, November 15th, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Shoba Karanlaje Mescomಮಂಗಳೂರು :ಇಂಧನ ಸಚಿವೆ ಶೋಭಾ ಕರಂದ್ಲಾಜೆ ಇಂದು ನಗರದ ಕಾಪಿಕಾಡ್ ಬಳಿ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಹಾಗೂ ಉತ್ಪಾದನೆಯಾದ ವಿದ್ಯುತ್ ನ್ನು ಗ್ರಾಹಕರಿಗೆ ಸಮರ್ಪಕವಾಗಿ ತಲುಪಿಸುವ ಕುರಿತು ಅನೇಕ ಸಮಸ್ಯೆಗಳಿದ್ದು ವಿದ್ಯುತ್ ಸಚಿವೆಯಾಗಿ ನೇಮಕಗೊಂಡ ಸಂದರ್ಭದಲ್ಲಿ ಇವೆರಡು ಸವಾಲಿನ ವಿಷಯವಾಗಿ ಪರಿಣಮಿಸಿತ್ತು ಆದರೆ ಅಧಿಕಾರಿಗಳ ಸಹಕಾರದಿಂದ ನಂತರ ಈ ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ಪರಿಹರಿಸಲಾಯಿತು ಎಂದರು.

ಪ್ರಾರಂಭದಲ್ಲಿ ಸರಕಾರ ರಾಜ್ಯಕ್ಕೆ 5000 ಮೆಗಾ ವ್ಯಾಟ್ ವಿದ್ಯುತ್ ನ್ನು ಪೂರೈಸುವ ವಾಗ್ದಾನ ಜನತೆಗೆ ನೀಡಿತ್ತು ಅದರಂತೆ 4500 ಮೆಗಾ ವ್ಯಾಟ್ ವಿದ್ಯುತ್ ನ್ನು ಈಗಾಗಲೇ ಪೂರೈಸಿದ್ದೇವೆ
ರೈತರಿಗೆ 2 ಗಂಟೆ ಪೂರೈಸುತ್ತಿದ್ದ ವಿದ್ಯುತ್ ನ್ನು 6 ಗಂಟೆಗೆ ವಿಸ್ತರಿಸುವ ನಿರ್ಧಾರವನ್ನು ಸರಕಾರ ಕೈಗೊಂಡಾಗ ಲೈನ್ ಹಾಗೂ ಸ್ಟೇಷನ್ ಸಮಸ್ಯೆ ತಲೆದೋರಿತು. ಆ ಸಮಸ್ಯೆಯ ಪರಿಹಾರಕ್ಕಾಗಿ ಸರಕಾರ 11000 ಕೋಟಿ ಖರ್ಚು ಮಾಡಿದೆ. ಸ್ಟೇಷನ್ ಗಳು ಕಡಿಮೆ ಇದ್ದಾಗ ಸಾಗಾಣಿಕ ವೆಚ್ಚ ಜಾಸ್ತಿಯಾಗುತ್ತದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸುವುದರಿಂದ ಸ್ಟೇಷನ್ ಹೆಚ್ಚಿಸುವ ಮಹತ್ತರವಾದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. ಕಳೆದ ಜುಲೈ ಹಾಗೂ ಈ ವರ್ಷದ ಜುಲೈ ತಿಂಗಳ ಮಧ್ಯೆ ವಿದ್ಯುತ್ ಬೇಡಿಕೆಯನ್ನು ತುಲನೆ ಮಾಡಿದರೆ 26% ಏರಿಕೆ ಕಂಡುಬರುತ್ತದೆ. ವಿದ್ಯುತ್ ಬೇಡಿಕೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿದ್ದು ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದರು.

ಗುಜರಾತ್ ರಾಜ್ಯ ದೇಶದಲ್ಲೇ ವಿದ್ಯುತ್ ಸ್ವಾವಲಂಬಿ ರಾಜ್ಯವಾಗಿದ್ದು ಸರಕಾರ ಕೈಗೊಂಡಿರುವ ಎಲ್ಲಾ ಯೋಜನೆಗಳು ಪೂರ್ಣಗೊಂಡರೆ 2014 ರ ವೇಳೆಗೆ ಕರ್ನಾಟಕ ಕೂಡ ಸ್ವಾವಲಂಬಿ ರಾಜ್ಯವಾಗುವುದರಲ್ಲಿ ಸಂಶಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಎಂ.ಸಿ.ಸಿ. ಉಪಮೇಯರ್ ಅಮಿತಕಲಾ, ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸುಮಂತ್, ನಿರ್ಧೇಶಕರುಗಳಾದ ರಾಮ ಅಮೀನ್, ಎಚ್.ಮಹಾದೇವ್ ಪಾಲಿಕೆ ಸದಸ್ಯ ಲ್ಯಾನ್ಸ್ ಲಾಟ್ ಪಿಂಟೋ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English