ವಕ್ಫ್ ಬೋರ್ಡ್‌ನ ‘ಲ್ಯಾಂಡ್ ಜಿಹಾದ್’ ಇದು ‘ಲವ್ ಜಿಹಾದ್’ಗಿಂತಲೂ ಭಯಾನಕ : ನ್ಯಾಯವಾದಿ ಹರಿ ಶಂಕರ ಜೈನ್

12:02 AM, Monday, August 10th, 2020
Share
1 Star2 Stars3 Stars4 Stars5 Stars
(No Ratings Yet)
Loading...

Hari_Shankar_Jainಮಂಗಳೂರು  :  2013 ರಲ್ಲಿ ಅಂದಿನ ಕಾಂಗ್ರೇಸ್ ಸರಕಾರವು ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿ ಮುಸಲ್ಮಾನರಿಗೆ ಅಪಾರ ಅಧಿಕಾರವನ್ನು ನೀಡಿತು. ಇದರಿಂದ ಇಂದು ಭಾರತದಲ್ಲಿ ರಕ್ಷಣಾದಳ ಹಾಗೂ ರೇಲ್ವೆ ಇಲಾಖೆಯ ನಂತರ ಎಲ್ಲಕ್ಕಿಂತ ಹೆಚ್ಚು (6 ಲಕ್ಷ ಎಕರೆ) ಭೂಮಿಯ ಒಡೆತನ ವಕ್ಫ್ ಬೋರ್ಡ್ ಬಳಿ ಇದೆ. ಹಿಂದೂಗಳಿಗೆ ಈ ಕಾನೂನಿನ ಬಗ್ಗೆ ಇರುವ ಅಜ್ಞಾನ ಹಾಗೂ ಉದಾಸೀನತೆಯಿಂದಾಗಿ ವಕ್ಫ್ ಬೋರ್ಡ್ ದೇಶದಾದ್ಯಂತ ಲಕ್ಷಗಟ್ಟಲೆ ಎಕರೆ ಭೂಮಿಯನ್ನು ಅಕ್ಷರಶಃ ಕಬಳಿಸಲು ಪ್ರಯತ್ನಿಸುತ್ತಿದೆ. ಬೋರ್ಡ್‌ನಿಂದ ನಡೆಯುತ್ತಿರುವ ‘ಲ್ಯಾಂಡ್ ಜಿಹಾದ್’ ಇದು ‘ಲವ್ ಜಿಹಾದ್’ಗಿಂತಲೂ ಭಯಾನಕವಾಗಿದೆ. ಇದರ ವಿರುದ್ಧ ಹಿಂದೂಗಳು ಸಂಘಟಿತರಾಗಿ ಕಾನೂನು ಹೋರಾಟ ಮಾಡಬೇಕಿದೆ, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ‘ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ಅಧ್ಯಕ್ಷ ಹರಿ ಶಂಕರ ಜೈನ್ ಇವರು ಕರೆ ನೀಡಿದ್ದಾರೆ.

ಅವರು ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ‘ಆನ್‌ಲೈನ್’ 9 ನೇ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು.

ಸಮಿತಿಯ ‘ಯೂ-ಟ್ಯೂಬ್’ ಚಾನೆಲ್ ಹಾಗೂ ‘ಫೇಸ್‌ಬುಕ್ ಪೇಜ್’ನ ಮೂಲಕ ಈ ಅಧಿವೇಶನವನ್ನು 42600 ಕ್ಕಿಂತಲೂ ಹೆಚ್ಚು ಜನರು ಪ್ರತ್ಯಕ್ಷವಾಗಿ ನೋಡಿದರೆ, 1 ಲಕ್ಷ 60 ಸಾವಿರಕ್ಕಿಂತಲೂ ಹೆಚ್ಚು ಜನರ ತನಕ ಈ ವಿಷಯವು ತಲುಪಿದೆ.

Amrutesh NPಬೆಂಗಳೂರು ಉಚ್ಚ ನ್ಯಾಯಾಲಯದ ನ್ಯಾಯವಾದಿ ಹಾಗೂ ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ಅಮೃತೇಶ ಎನ್.ಪಿ. ಇವರು ತಮ್ಮ ಅನುಭವವನ್ನು ಹೇಳಿದರು. ಅವರು. “ಕೊರೋನಾ ಮಹಾಮಾರಿಯ ಕಾಲದಲ್ಲಿ ಲಾಕ್‌ಡೌನ್‌ಅನ್ನು ಜಾರಿಗೆ ತಂದಾಗ ಕರ್ನಾಟಕ ಪೊಲೀಸರು ಜನರ ಮೇಲೆ ಅಮಾನವೀಯವಾಗಿ ದೌರ್ಜನ್ಯ ಮಾಡಿದ್ದಾರೆ. ಇದರ ವಿರುದ್ಧ ನ್ಯಾಯಾಲಯದಲ್ಲಿ ಪ್ರಪ್ರಥಮ ಬಾರಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದೆವು. ನ್ಯಾಯಾಲಯವು ನಮ್ಮ ಪರವಾಗಿ ತೀರ್ಪನ್ನು ನೀಡುತ್ತಾ ಪೊಲೀಸರು ಜನರ ಮೇಲೆ ಲಾಠಿ ಪ್ರಹಾರ ಮಾಡುವುದನ್ನು ನಿಲ್ಲಿಸಲು ಹೇಳಿತು. ಈ ಕಾಲಾವಧಿಯಲ್ಲಿ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚುವರಿ ಹಣವನ್ನು ಕೀಳುವುದು, ರೋಗಿಗಳಿಗೆ ಮಂಚವನ್ನು ನೀಡದಿರುವುದು, ಮೃತಪಟ್ಟವರ ಶವವನ್ನು ಕುಟುಂಬದವರಿಗೆ ನೀಡದಿರುವುದು ಇತ್ಯಾದಿ ತಪ್ಪುಕೃತ್ಯಗಳ ವಿರದ್ಧ ನಾವು ಸಾರ್ವಜನಿಕ ಹಿತಾಸಕ್ತಿಗಾಗಿ ಅರ್ಜಿಯನ್ನು ಸಲ್ಲಿಸಿದೆವು. ಇವೆಲ್ಲ ತೀರ್ಪು ಜನರ ಪರವಾಗಿ ಬಂದಿತು. ಇವೆಲ್ಲವು ಗುರುಕೃಪೆಯಿಂದ ಸಾಧ್ಯವಾಯಿತು” ಎಂದು ಹೇಳಿದರು.

ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಮಾತನಾಡುತ್ತಾ, ‘ಪ್ರಾಚೀನ ಭಾರತೀಯ ಶಿಕ್ಷಣವ್ಯವಸ್ಥೆ ಹಾಗೂ ಸಂಸ್ಕೃತಿಯು ಜಗತ್ತಿನಲ್ಲಿ ಸರ್ವೋತ್ಕೃಷ್ಟವಾಗಿತ್ತು. ಲಾರ್ಡ್ ಮೆಕಾಲೆಯ ನಂತರ ಕಮ್ಯುನಿಸ್ಟ್ ವಿಚಾರದಿಂದ ಕೂಡಿದ ಪಂಡಿತ ನೆಹರುರವರು ಶೈಕ್ಷಣಿಕ ನಿಲುವನ್ನು ನಿರ್ಧರಿಸುವ ಅಧಿಕಾರವನ್ನು ಕಮ್ಯುನಿಸ್ಟರಿಗೆ ನೀಡಿದರು; ಅದರ ಪರಿಣಾಮದಿಂದ ಕಳೆದ ಒಂದು ಸಾವಿರ ವರ್ಷಗಳಲ್ಲಿ ಮೊಗಲರು ಹಾಗೂ ಆಂಗ್ಲರು ಭಾರತದ ಎಷ್ಟು ಹಾನಿ ಮಾಡಲಿಲ್ಲವೋ, ಅಷ್ಟು ಹಾನಿಯನ್ನು ಎಡಪಂಥೀಯ ವಿಚಾರದ ಜನರು ಕಳೆದ 70 ವರ್ಷಗಳಲ್ಲಿ ಮಾಡಿದ್ದಾರೆ. ಈಗ ಹಿಂದೂಗಳು ಸತ್ಯ ಇತಿಹಾಸವನ್ನು ಹಾಗೂ ಸಂಸ್ಕೃತಿಯನ್ನು ಅರಿತುಕೊಂಡು ಹೋರಾಡಲು ಸಿದ್ಧರಾಗಬೇಕು’ ಎಂದು ಹೇಳಿದರು. ಈ ಸಮಯದಲ್ಲಿ ‘ಆರೋಗ್ಯ ಸಹಾಯ ಸಮಿತಿ’ಯ ಸಮನ್ವಯಕಿಯಾದ ಅಶ್ವಿನಿ ಕುಲಕರ್ಣಿಯವರು ಮಾತನಾಡುತ್ತಾ ‘ಆಹಾರ ಧಾನ್ಯ, ಪೆಟ್ರೋಲ್- ಡಿಸೆಲ್ ಇತ್ಯಾದಿಗಳಲ್ಲಿನ ಕಲಬೆರಕೆ; ಸರಕಾರದ ಭ್ರಷ್ಟಾಚಾರ; ಗ್ರಾಹಕರ ಲೂಟಿ ಇತ್ಯಾದಿಗಳಿಗೆ ಕಾರಣರಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಬೇಕಿದೆ. ಇವುಗಳ ವಿರುದ್ಧ ಸುರಾಜ್ಯ ಅಭಿಯಾನದ ಅಂತರ್ಗತ ದೂರು ದಾಖಲಿಸುವುದು, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ಅರ್ಜಿ ಸಲ್ಲಿಸುವುದು ಇತ್ಯಾದಿಗಳ ಮಾಧ್ಯಮದಿಂದ ‘ಆರೋಗ್ಯ ಸಹಾಯ ಸಮಿತಿ’ಯು ಕಾರ್ಯನಿರತವಾಗಿದ್ದು ಇದರಲ್ಲಿ ರಾಷ್ಟ್ರಪ್ರೇಮಿ ಜನರು ಸಹ ಸಹಭಾಗಿಯಾಗಬೇಕು’, ಎಂದು ಕರೆ ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English