- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡ್ರಗ್ಸ್ ಸ್ಮಗ್ಲಿಂಗ್, ಬಾಕ್ಸರ್ ವಿಜೇಂದರ್‌ ಸಿಂಗ್‌ ಮೇಲೆ ಆರೋಪ

Vijendar Sing [1]ಮೊಹಾಲಿ : ಡ್ರಗ್ಸ್ ಸ್ಮಗ್ಲಿಂಗ್ ಗೆ ಸಂಬಂಧಪಟ್ಟಂತೆ ಬಾಕ್ಸಿಂಗ್ ಚಾಂಪಿಯನ್, ಒಲಿಂಪಿಕ್ಸ್ ನ ಪದಕ ವಿಜೇತ  ಬಾಕ್ಸರ್‌ ವಿಜೇಂದರ್‌ ಸಿಂಗ್‌ ರವರ ಮೇಲೆ ಆರೋಪ ಕೇಳಿ ಬಂದಿದೆ.

ಮೊಹಾಲಿಯ ಫ್ಲಾಟ್‌ ಒಂದರಲ್ಲಿ 130 ಕೋಟಿ ರೂಪಾಯಿ ಮೌಲ್ಯದ 26 ಕಿಲೋ ಹೆರಾಯಿನ್‌ ನನ್ನು ವಶಪಡಿಸಿಕೊಂಡ ಪಂಜಾಬ್ ಪೊಲೀಸರು ಈ ವೇಳೆ ಅನೂಪ್‌ ಖಲೋನ್‌ ಎಂಬಾತನನ್ನು ಸೆರೆಹಿಡಿದಿದ್ದಾರೆ. ವಿಚಾರಣೆಯ ವೇಳೆ ಈತ ತನಗೆ ಬಾಕ್ಸರ್‌ ವಿಜೇಂದರ್‌ ಸಿಂಗ್‌ ಜತೆ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ ತಾನು ವಿಜೇಂದರ್‌ ಕುಮಾರ್‌ಗೆ ಸಣ್ಣ ಪ್ರಮಾಣದ ಹೆರಾಯಿನ್‌ ಪೂರೈಸುತ್ತಾ ಬಂದಿರವುದಾಗಿಯೂ ಈತ ಹೇಳಿದ್ದಾನೆ.

ಈ ಬಗ್ಗೆ ಪೋಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದರೆ,  ವಿಜೇಂದರ್ ಸಿಂಗ್ ಅವರು ತನಗೂ ಡ್ರಗ್ಸ್ ಸ್ಮಗ್ಲರ್ ಗಳಿಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.