ಉಡುಪಿಯಲ್ಲಿ 3 ದಶಕಗಳ ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್

3:52 PM, Monday, March 11th, 2013
Share
1 Star2 Stars3 Stars4 Stars5 Stars
(No Ratings Yet)
Loading...

Congress in Udupiಉಡುಪಿ : ಉಡುಪಿ ನಗರಸಭೆಯ ಇತಿಹಾಸದಲ್ಲಿ 3 ದಶಕಗಳಲ್ಲಿ ಇದೆ ಮೊದಲ ಬಾರಿಗೆ ಕಾಂಗ್ರೆಸ್ ಗೆಲುವು ದಾಖಲಿಸಿಕೊಂಡಿದೆ. ಒಟ್ಟು 35 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 22 ವಾರ್ಡ್ ಗಳಲ್ಲಿ ಗೆಲುವನ್ನು ಸಾದಿಸಿದರೆ ಬಿಜೆಪಿ ಪಕ್ಷ ಕೇವಲ 12 ಸೀಟುಗಳನ್ನು ಗೆದ್ದುಕೊಂಡು ತೀವ್ರ ನಿರಾಸೆಯನ್ನನುಭವಿಸಿದೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.

ಕಾರ್ಕಳ ಪುರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲುವು ದಾಖಲಿಸಿದ್ದು, ಒಟ್ಟು 23 ವಾರ್ಡುಗಳಲ್ಲಿ ಕಾಂಗ್ರೆಸ್‌ 12 ಸ್ಥಾನಗಳನ್ನು, ಬಿಜೆಪಿ 11 ಸ್ಥಾನಗಳನ್ನು ಪಡೆದಿದೆ.

ಕುಂದಾಪುರ ಪುರಸಭೆಯಲ್ಲಿ ಬಿಜೆಪಿ ಬಹುತಮತ ಪಡೆದಿದ್ದು, ಬಿಜೆಪಿಗೆ 12 ಸ್ಥಾನಗಳು ದೊರೆತರೆ, ಕಾಂಗ್ರೆಸ್‌ಗೆ 9 ಹಾಗೂ ಸಿಪಿಐಎಂಗೆ 2 ಸ್ಥಾನಗಳನ್ನು ಪಡೆದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English