ಪತ್ರಕರ್ತ, ಕವಿ ಮನೋಹರ ಪ್ರಸಾದ್ ಇನ್ನಿಲ್ಲ

Friday, March 1st, 2024
manohar-prasad

ಮಂಗಳೂರು : ಪತ್ರಕರ್ತ, ಕಾರ್ಯಕ್ರಮ ನಿರೂಪಕ, ಕತೆಗಾರ ಹಾಗೂ ಕವಿ ಮನೋಹರ ಪ್ರಸಾದ್(64) ಮಾ.1ರ ಶುಕ್ರವಾರ ಇಂದು ಮುಂಜಾನೆ ನಿಧನರಾಗಿದ್ದಾರೆ. ಮೂಲತಃ ಕಾರ್ಕಳ ತಾ| ಕರುವಾಲು ಗ್ರಾಮದವರಾದ ಮನೋಹರ ಪ್ರಸಾದ್ ಮಂಗಳೂರಿನಲ್ಲಿ ಕಾಲೇಜು ಪದವಿ ಶಿಕ್ಷಣ ಪೂರ್ತಿಗೊಳಿಸಿ “ನವ ಭಾರತ’ ಪತ್ರಿಕೆಯಲ್ಲಿ ಪತ್ರಿಕಾ ವೃತ್ತಿ ಜೀವನ ಆರಂಭಿಸಿದ್ದರು. ಬಳಿಕ “ಉದಯವಾಣಿ’ಗೆ ಮಂಗಳೂರು ವರದಿಗಾರರಾಗಿ ಸೇರ್ಪಡೆಗೊಂಡಿದ್ದರು. ಅಲ್ಲಿಂದ ಮೊದಲ್ಗೊಂಡು ಮುಖ್ಯ ವರದಿಗಾರರಾಗಿ, ಬಳಿಕ ಬ್ಯೂರೋ ಚೀಫ್ ಮತ್ತು ಪ್ರಸ್ತುತ ಸಹಾಯಕ ಸಂಪಾದಕರ ಹುದ್ದೆಯವರೆಗೆ ಸತತ 36 ವರ್ಷಗಳ ಸೇವೆ […]

ಕಾರ್ಕಳ ಉತ್ಸವವು ಉತ್ತಮ ರೀತಿಯಲ್ಲಿ ಆಗುವಂತೆ ಸಚಿವರಿಂದ ಶ್ರೀ ವೆಂಕಟರಮಣ ದೇವರ ದರ್ಶನ

Wednesday, March 9th, 2022
Sunil Kumar

ಕಾರ್ಕಳ : ಕರ್ನಾಟಕದ ಇತಿಹಾಸದಲ್ಲೇ ಅತ್ಯಧ್ಬುತವಾಗಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರೂ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆಯುವ ಕಾರ್ಕಳ ಉತ್ಸವವು ಉತ್ತಮ ರೀತಿಯಲ್ಲಿ ಆಗುವಂತೆ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವಳದ ಒಂದನೇ ಮೊಕ್ತೇಸರರಾದ ಜಯರಾಮ ಪ್ರಭು, ಅರ್ಚಕರಾದ ಅನಿಲ್ ಜ್ಯೋಷಿ, ರವೀಂದ್ರ ಪುರಾಣಿಕ, ಪರ್ಯಾಯ ಅರ್ಚಕರಾದ ಗೋಪಾಲಕೃಷ್ಣ ಜ್ಯೋಶಿ, ಹಿತೈಷಿಗಳಾದ ಪಾಲಡ್ಕ ನರಸಿಂಹ ಪ್ರಭು, ಕೆ. ಸುರೇಂದ್ರ […]

ಕಾರ್ಕಳಕ್ಕೆ ಬಿ.ಎಸ್ಸಿ ನರ್ಸಿಂಗ್ ಕಾಲೇಜು ಮಂಜೂರು : ವಿ ಸುನಿಲ್ ಕುಮಾರ್

Tuesday, January 25th, 2022
Sunil Kumar

ಕಾರ್ಕಳ : ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾರ್ಕಳ ಮತ್ತು ಹೆಬ್ರಿ ತಾಲೂಕುಗಳು ಮಲೆನಾಡಿನ ತಪ್ಪಲಿನ ಪ್ರದೇಶಗಳನ್ನು ಹೊಂದಿದ್ದು ಹೆಚ್ಚಿನ ಪ್ರದೇಶಗಳು ತಾಲೂಕು ಕೇಂದ್ರದಿಂದ 20 ಕಿ.ಮೀ ವ್ಯಾಪ್ತಿಯನ್ನು ಹೊಂದಿರುತ್ತದೆ. ಕಾರ್ಕಳದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನರ್ಸಿಂಗ್, ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸುಗಳನ್ನು ವ್ಯಾಸಂಗ ಮಾಡಬೇಕಾದರೆ ಜಿಲ್ಲಾ ಕೇಂದ್ರಗಳಿಗೆ ಹೋಗಬೇಕಾಗಿತ್ತು. ಬಿ.ಎಸ್ಸಿ ನರ್ಸಿಂಗ್ ಮಾಡಬೇಕಾದರೆ ಮಂಗಳೂರು ವೆನ್ಲಾಕ್ ಇಲ್ಲವೇ ಅಧಿಕ ಪ್ರವೇಶ ಶುಲ್ಕ ಪಾವತಿಸಿ ಖಾಸಗಿ ನರ್ಸಿಂಗ್ ಕಾಲೇಜುಗಳನ್ನು ಆಶ್ರಯಿಸಬೇಕಾಗಿತ್ತು. ಕಾರ್ಕಳ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳ […]

ದಿ. ಸುಧೀರ್ ಪುರಾಣಿಕ್ ಹಾಗೂ ದಿ. ಪ್ರದೀಪ್ ಕೋಟ್ಯಾನ್ ರವರಿಗೆ ಪುಷ್ಪ ನಮನ

Wednesday, November 17th, 2021
Karkala-BJP

ಕಾರ್ಕಳ   : ಕಾರ್ಕಳದಲ್ಲಿ ಜಾತಿ, ಮತ, ಪಕ್ಷ ಭೇದವಿಲ್ಲದ ಅಜಾತ ಶತ್ರು ಎಂಬ ಖ್ಯಾತಿಯ ಶ್ರೀ ಸುಧೀರ್ ಪುರಾಣಿಕ್ ಹಾಗೂ ಪುರಸಭಾ ಮಾಜಿ ಅಧ್ಯಕ್ಷ, ಎಪಿಎಂಸಿ ಮಾಜಿ ಅಧ್ಯಕ್ಷ, ಬಿಲ್ಲವ ಸಮಾಜದ ಮುಂದಾಳು ಸ್ನೇಹ ಜೀವಿಯಾಗಿ ಭಾರತೀಯ ಜನತಾ ಪಕ್ಷದ ಮುಂದಾಳು ಆಗಿರುವ ಶ್ರೀ ಪ್ರದೀಪ್ ಕೋಟ್ಯಾನ್ ಇವರ ಶ್ರದ್ಧಾಂಜಲಿ ಕಾರ್ಯಕ್ರಮ, ನುಡಿನಮನ ಮತ್ತು ಪುಸ್ಪಾರ್ಚನೆ ಕಾರ್ಕಳ ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ನಡೆಯಿತು. ಪಕ್ಷದ ಪ್ರಮುಖರಾದ ಬೋಳ ಪ್ರಭಾಕರ ಕಾಮತ್, ಹಿರಿಯರಾದ ರಾಮಚಂದ್ರ ನಾಯಕ್, ಕರ್ನಾಟಕ […]

ಟೂತ್‌ಪೇಸ್ಟ್ ಎಂದು ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿದ ಮಹಿಳೆ ಸಾವು

Wednesday, September 1st, 2021
rat Poison

ಕಾರ್ಕಳ : ಮಹಿಳೆಯೊಬ್ಬರು ಟೂತ್‌ಪೇಸ್ಟ್ ಬದಲು ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿದ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ  ಕಾರ್ಕಳದ ಕಾಬೆಟ್ಟುವಿನಲ್ಲಿ ನಡೆದಿದೆ. ಮೃತರನ್ನು ಕಲಾವತಿ(61) ಕಾರ್ಕಳ ಕಾಬೆಟ್ಟುವಿನ ನಿವಾಸಿ ಎಂದು ಗುರುತಿಸಲಾಗಿದೆ. ಇವರು ಆಗಸ್ಟ್ 20ರಂದು ಬೆಳಗ್ಗೆ ಮನೆಯಲ್ಲಿ ತಿಳಿಯದೇ ಟೂತ್‌ಪೇಸ್ಟ್ ಬದಲು ಇಲಿ ಪಾಷಾಣದಲ್ಲಿ ಹಲ್ಲು ಉಜ್ಜಿ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು ಸೆ.1ರಂದು ಬೆಳಿಗ್ಗೆ 7 ಗಂಟೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ […]

ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸ್ ಠಾಣೆಗೆ ಕರೆಸಿ ಹಲ್ಲೆ, ಆಸ್ಪತ್ರೆಗೆ ದಾಖಲು

Friday, July 9th, 2021
Radhakrishna

ಕಾರ್ಕಳ:  ಕಾಂಗ್ರೆಸ್ ಕಾರ್ಯಕರ್ತನನ್ನು ಪೊಲೀಸ್ ಠಾಣೆಗೆ ಕರೆಸಿ ಆತನ ಮೇಲೆ ಠಾಣಾಧಿಕಾರಿ ಹಲ್ಲೆ ನಡೆಸಿದ ಪರಿಣಾಮ ಆತ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಕಾರ್ಕಳ ತಾಲೂಕಿನ ಹಿರ್ಗಾನ ನಿವಾಸಿ ರಾಧಾಕೃಷ್ಣ ಎಂಬವರು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ತನ್ನ ಫೇಸ್ ಬುಕ್ ನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪೋಸ್ಟ್ ಗಳನ್ನು ಹಾಕಿದ್ದರು ಎಂದು ದೂರಲಾಗಿದೆ. ರಾಧಾಕೃಷ್ಣ ಅವರ  ಫೇಸ್ ಬುಕ್ ನ ಫೇಕ್ ಐಡಿಯ ಮುಖಾಂತರ 2020 ಆಗಸ್ಟ್ ನಲ್ಲಿ ಕಿಡಿಗೇಡಿಗಳು ಸೈನಿಕರ ಬಗ್ಗೆ […]

ಬಸ್ ಮಾಲಕನ ಹತ್ಯೆಗೆ ವಿಫಲ ಯತ್ನ, ಒಂಭತ್ತು ಮಂದಿ ಆರೋಪಿಗಳ ಬಂಧನ

Friday, November 6th, 2020
saifuddin

ಉಡುಪಿ : ಎಕೆಎಂಎಸ್ ಬಸ್ ಮಾಲಕನ  ಹತ್ಯೆಗೆ ವಿಫಲ ಯತ್ನ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಸಹಿತ ಒಂಭತ್ತು ಮಂದಿ ಆರೋಪಿ ಗಳನ್ನು ಪೊಲೀಸರು ಕಾರ್ಕಳದ ಮುರತ್ತಂಗಡಿಯ ರಿಜೆನ್ಸಿ ಲಾಡ್ಜ್ ನಲ್ಲಿ ಬಂಧಿಸಿದ್ದಾರೆ. ಕೊಡಗು ವಿರಾಜಪೇಟೆಯ ದರ್ಶನ್ ದೇವಯ್ಯ, ಆತನ ಪತ್ನಿ ಸೌಭಾಗ್ಯ, ಮೂಡಬಿದ್ರೆ ಮಾರ್ನಾಡುವಿನ ಸಂತೋಷ್ ಪೂಜಾರಿ, ಗೋಪಾಲ, ಸೋಮವಾರಪೇಟೆಯ ಅನಿಲ್ ಕುಮಾರ್, ಬೆಳ್ತಂಗಡಿ ಮಾರೋಡಿಯ ಸುಕೇಶ್ ಪೂಜಾರಿ, ಬೆಳ್ತಂಗಡಿ ಟಿ.ಬಿ.ಕ್ರಾಸ್‌ನ ಮೋಹನ, ಕೆ.ಆರ್. ನಗರದ ಸೋಮು, ಪಿರಿಯಾಪಟ್ಟಣದ ಮಹೇಶ್ ಬಾಬು ಬಂಧಿತ ಆರೋಪಿಗಳು. ಮಲ್ಪೆ ಕೊಡವೂರಿನ […]

ಕಾರ್ಕಳ : ಪ್ರೀತಿಸಿದ ಹುಡುಗನೊಂದಿಗೆ ಯುವತಿ ಪರಾರಿ; ಸುದ್ದಿ ಕೇಳಿ ತಂಗಿ ಸಾವು

Friday, September 4th, 2020
surakshita

ಉಡುಪಿ:  ಕಾರ್ಕಳದ  ಮಂಜಲ್ತಾರ್ ಎಂಬಲ್ಲಿ ಬಾಹುಬಲಿ ಸ್ವೀಟ್ ಫ್ಯಾಕ್ಟರಿ ಎಂಬ ಆಹಾರ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುರಕ್ಷಾ ಎಂಬ 20  ವಯಸ್ಸಿನ  ಯುವತಿ ಎರಡು ದಿನಗಳಿಂದ ಕಾಣೆಯಾಗಿದ್ದಾಳೆ ಎಂದು  ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಕಳ ತಾಲೂಕು ಮಾಳ ಗ್ರಾಮದ ಮಂಜಲ್ತಾರ್ ಮಾರಿಗುಡಿ ಬಳಿ ವಾಸವಿದ್ದ ಯುವತಿ  ಸುರಕ್ಷಿತ ಅಸ್ಸಾಂ ಮೂಲದ ಭುವನ್ ಎಂಬ ಯುವಕನನ್ನು ಪ್ರೀತಿಸಿದ್ದಾಳೆ ಎನ್ನಲಾಗಿದ್ದು,  ಆಕೆ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ  ತಾಯಿ  ಸುನೀತಾ ನೀಡಿದ ದೂರಿನಲ್ಲಿ ಸೆಪ್ಟೆಂಬರ್ 2 ರಂದು ಬೆಳಿಗ್ಗೆ ಕೆಲಸಕ್ಕೆ ಹೋದವಳು ಮನೆಗೆ ಬರಲಿಲ್ಲ ಎಂದು ತಿಳಿಸಿದ್ದಾರೆ. ಯುವತಿಗೆ  ಲಾಕ್ಡೌನ್ ಸಂದರ್ಭದಲ್ಲಿ ನಿಶ್ಚಿತಾರ್ಥ […]

ತಕ್ಷಣ ಪ್ರಸಿದ್ದಿ ಹೊಂದಲು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಅರೋಪಿ

Friday, August 21st, 2020
vikash Kumar

ಮಂಗಳೂರು : ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಇಟ್ಟಿದೆ ಎಂದು ಬೆದರಿಕೆ ಕರೆ ಮಾಡಿದರೆ ಧಿಡೀರನೆ ಪ್ರಸಿದ್ದಿ ಪಡೆಯ ಬಹುದು ಎಂದು ಆರೋಪಿ ಯೋಚಿಸಿದ್ದ ಎಂದು ಮಂಗಳೂರು ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಹೇಳಿದ್ದಾರೆ. 33 ವರ್ಷದ ಕಾರ್ಕಳ ಮುದ್ರಾಡಿ ನಿವಾಸಿ ವಸಂತ್ ಶೇರಿಗಾರ್ ಆರೋಪಿಯಾಗಿದ್ದು ಈತ 8 ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾನೆ , ಮೊಬೈಲ್ ಫೋನ್ ಬಳಸುವಲ್ಲಿ ತುಂಬಾ ಪರಿಣಿತರಿದ್ದಾನೆ ಎಂದು ಪೊಲೀಸ್ ಆಯುಕ್ತ ತಿಳಿಸಿದ್ದಾರೆ. ಶುಕ್ರವಾರ (ಆಗಸ್ಟ್ 21) ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ […]

ಹಾಸ್ಯ ಸಾಹಿತಿ, ನಟ ಶೇಖರ ಭಂಡಾರಿ ಕೊರೋನಾ ದಿಂದ ಮೃತ್ಯು

Monday, August 10th, 2020
shekar bhandary

ಮಂಗಳೂರು: ನಾಟಕ ಚಲನಚಿತ್ರ ನಟ, ಹಾಸ್ಯ ಸಾಹಿತಿ, ಪ್ರಾಸ ಕವಿ ಕಾರ್ಕಳ ಶೇಖರ ಭಂಡಾರಿ (72.) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ದಿನಗಳ ಹಿಂದೆ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಸೋಮವಾರ ನಿಧನರಾದರು. ಅವರ ಗಂಟಲ ದ್ರವ ಪರೀಕ್ಷಾ ವರದಿ ಇಂದು ತಲುಪಿದ್ದು ಅವರಿಗೆ ಕೋವಿಡ್ ಸೋಂಕು ದೃಢವಾಗಿತ್ತು. ಕೈಬೆರಳು ರಹಸ್ಯ, ನಿಮ್ಮ ಯಾವ ಬೆರಳಿನಲ್ಲಿ ಅದೃಷ್ಟವಿದೆ ನೋಡಿ ! ಶೇಖರ ಭಂಡಾರಿ ಕಾರ್ಕಳದ ಬೆಟ್ಟದ ಮನೆ […]