ಚೀನಾದ ನಿಷೇಧಿತ ಆ್ಯಪ್ ಬಳಸಿ ಹಣ ವರ್ಗಾವಣೆ ಮಾಡುತ್ತಿದ್ದ ಇಬ್ಬರು ಟಿಬೆಟಿಯನ್ನರ ಬಂಧನ

Thursday, November 11th, 2021
Tibetians

ಮಂಗಳೂರು : ಚೀನಾದ ನಿಷೇಧಿತ ಆ್ಯಪ್ ಬಳಸಿ ಹಲವಾರು ಮಂದಿಗೆ ಮೋಸ ಮಾಡಿರುವ ಇಬ್ಬರು ಟಿಬೆಟಿಯನ್ನರು ಪೊಲೀಸರು ಬಂಧಿಸಿದ್ದಾರೆ. ಮುಂಡಗೋಡು ಟಿಬೆಟಿಯನ್ ಕ್ಯಾಂಪ್ ನಿವಾಸಿಗಳಾದ ಲೋಬಸಂಗ್ ಸಂಗ್ಯೆ (24), ದಪಕ ಪುಂದೇ (44) ಬಂಧಿತರು. ಮಂಗಳೂರು ಸಿಇಎನ್ ಪೊಲೀಸರು ಕಾರ್ಯಾಚರಣೆ ನಡೆಸಿ ಇವರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇವರು ಚೀನಾದ ನಿಷೇಧಿತ ಆ್ಯಪ್ ಬಳಸಿ ವಂಚನೆ ಮಾಡುತ್ತಿದ್ದರು. ಮೊಬಿವಿಕ್, ವಿಚಾಟ್, ರೆಡ್ಪ್ಯಾಕ್ ಮುಂತಾದ ಆ್ಯಪ್ ಬಳಸುತ್ತಿದ್ದರು ಎಂಬುದು ತಿಳಿದುಬಂದಿದೆ. ಕ್ರೆಡಿಟ್ ಕಾರ್ಡ್ ರದ್ದು ಮಾಡಿಸಲು ಮನವಿ ಮಾಡಿದವರಿಗೆ ಕರೆ ಮಾಡುತ್ತಿದ್ದ ಇವರು, […]

ಚೀನಾದಿಂದ ರಾಜ್ಯದ ರೈತರಿಗೆ ಅಪಾಯಕಾರಿ ಬೀಜ ಪಾರ್ಸಲ್

Friday, June 4th, 2021
chaina-seed

ಗದಗ : ಚೀನಾ ದೇಶದಿಂದ ಬೀಜಗಳನ್ನು ಬೇರೆ ಬೇರೆ ದೇಶಗಳಿಗೆ ಕಳುಹಿಸಲಾಗುತ್ತಿದೆ. ಈ ಬೀಜಗಳು ಕೀಟ ಮತ್ತು ರೋಗಾಣುಗಳಿಂದ ಕೂಡಿದ್ದು, ಅವುಗಳನ್ನು ಬಿತ್ತನೆ ಮಾಡಿದರೆ ಬೆಳೆದ ಒಂದು ತಿಂಗಳಲ್ಲಿ ಕೀಟ ಮತ್ತು ರೋಗಾಣುಗಳಿಂದ ಬೆಳೆ ಸಂಪೂರ್ಣ ನಾಶವಾಗುತ್ತದೆ. ಅನಾಮದೇಯರಿಂದ ಬೀಜ ಬಂದರೆ ರೈತರು ಸ್ವೀಕರಿಸಬಾರದು ಎಂದು ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ. ತಿಳಿಸಿದ್ದಾರೆ. ಈಗಾಗಲೇ ಇಂಗ್ಲೆಂಡ್  ಹಾಗೂ ಕೆನಡಾ ದೇಶಗಳಲ್ಲಿ ಅನೇಕ ರೈತರಿಗೆ ಇಂತಹ ಬೀಜಗಳನ್ನು ಕಳುಹಿಸಲಾಗಿದೆ. ಅಮೆರಿಕಾದಲ್ಲಿ 14 ಜಾತಿಯ ಹೂವಿನ ತಳಿ ಪತ್ತೆ […]

ಮಾರಣಾಂತಿಕ ಕೊರೊನಾ ವೈರಸ್ ​ಗೆ ಹುಬೈ​ನಲ್ಲಿ ಒಂದೇ ದಿನ 242 ಸಾವು

Thursday, February 13th, 2020
virus

ಬೀಜಿಂಗ್ : ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ಭೀತಿ ಮುಂದುವರೆದಿದೆ. ಇಲ್ಲಿನ ಹುಬೈ ನಗರವೊಂದರಲ್ಲೇ ಬುಧವಾರ ಒಂದೇ ದಿನ 242 ಜನರು ಸಾವನ್ನಪ್ಪಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ. ಹಾಗೇ, ಸಾವಿನ ಭೀತಿ ಎದುರಿಸುತ್ತಿರುವ ಚೀನಾದಲ್ಲಿ 14,840 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಚೀನಾದಲ್ಲಿ ಒಟ್ಟು ಸಾವಿನ ಸಂಖ್ಯೆ 1,355ಕ್ಕೆ ಏರಿಕೆಯಾಗಿದೆ. ಕೊರೊನಾ ವೈರಸ್ನಿಂದಾಗಿ ಚೀನಾದಲ್ಲಿ ಪ್ರತಿದಿನ ನೂರಾರು ಜನ ಸಾವಿಗೀಡಾಗುತ್ತಿದ್ದಾರೆ. ಚೀನಾದಲ್ಲಿ ಇದುವರೆಗೂ 60,000 ಜನರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ವೈರಸ್ ಹರಡುವಿಕೆಯನ್ನು […]

ಕಾಸರಗೋಡಿನಲ್ಲೂ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆ

Monday, February 3rd, 2020
karona-vairas

ಮಂಗಳೂರು : ಕೇರಳದಲ್ಲಿ ಕೊರೊನಾ ವೈರಸ್ ನ ಎರಡನೇ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಕಾಸರಗೋಡಿನ ಕಾಂಞಗಾಡ್ ನಲ್ಲಿ ಮೂರನೇ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ ಸೋಮವಾರ ಖಚಿತಪಡಿಸಿದ್ದಾರೆ. ಮೂರನೇ ವ್ಯಕ್ತಿ ಕೂಡಾ ಇತ್ತೀಚೆಗೆ ಕೊರೊನಾ ವೈರಸ್ ತವರಾದ ಚೀನಾದಿಂದ ತಾಯ್ನಾಡಿಗೆ ಮರಳಿದ್ದು, ಈಗಾಗಲೇ ಚೀನಾದಿಂದ ಕೇರಳಕ್ಕೆ ಬಂದಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಪತ್ತೆಯಾಗಿತ್ತು. ಪ್ರಸ್ತುತ ರೋಗಿಗೆ ಕಾಸರಗೋಡಿನ ಕಾಂಞಗಾಡ್ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ […]

ಚೀನಾದಲ್ಲಿ ಮಾರಣಾಂತಿಕ ಕೊರೊನಾ ವೈರಸ್‍ಗೆ 170 ಮಂದಿ ಬಲಿ

Thursday, January 30th, 2020
karona-viras

ಬೀಜಿಂಗ್ : ವಿಶ್ವಾದ್ಯಂತ ಕೊರೊನಾ ವೈರಸ್ ಭೀತಿ ಹೆಚ್ಚಾಗಿದ್ದು, ಚೀನಾದಲ್ಲಿ ಕಂಡುಬಂದಿರುವ ಮಾರಣಾಂತಿಕ ಕೊರೋನ್ ವೈರಸ್‍ಗೆ ಬಲಿಯಾದವರ ಸಂಖ್ಯೆ 170ಕ್ಕೆ ಏರಿದೆ. ದಿನೇ ದಿನೇ ಚೀನಾದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಈವರೆಗೆ 7,700 ಮಂದಿಗೆ ಸೋಂಕು ತಗುಲಿರುವುದು ಖಚಿತಗೊಂಡಿದೆ. ಇತ್ತ ಭಾರತದಲ್ಲಿ ಸುಮಾರು 670 ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಕೇರಳದಲ್ಲಿಯೇ ಅತಿ ಹೆಚ್ಚು ಅಂದರೆ 633 ಮಂದಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಇನ್ನು ದೆಹಲಿಯಲ್ಲಿ 3, ಪಂಜಾಬ್‍ನಲ್ಲಿ 16, ಹರ್ಯಾಣದಲ್ಲಿ […]

ಚೀನಾದ ಶಾಂಘೈನಲ್ಲಿ ಬಸ್ ಸಂಚರಿಸುತ್ತಿದ್ದ ವೇಳೆ ಕುಸಿದ ರಸ್ತೆ : ಹತ್ತು ಪ್ರಯಾಣಿಕರು ನಾಪತ್ತೆ

Tuesday, January 14th, 2020
china

ಶಾಂಘೈ : ಬಸ್ಸೊಂದು ಸಂಚರಿಸುತ್ತಿದ್ದ ವೇಳೆಯೇ ರಸ್ತೆ ಕುಸಿದು ಹೋದ ಪರಿಣಾಮ ಬಸ್ ನಲ್ಲಿದ್ದ ಕನಿಷ್ಠ ಹತ್ತು ಪ್ರಯಾಣಿಕರು ನಾಪತ್ತೆಯಾದ ಘಟನೆ ಚೀನಾದ ಶಾಂಘೈನಲ್ಲಿ ನಡೆದಿದೆ. ಈ ಅವಗಢ ಸೋಮವಾರ ಸಂಜೆಯ ವೇಳೆಗೆ ನಡೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗ್ರೇಟ್ ವಾಲ್ ಆಸ್ಪತ್ರೆಗೆ ಮುಂಭಾಗದಲ್ಲಿ ರಸ್ತೆಯ ಒಂದು ಭಾಗ ಕುಸಿದು ಕಂದಕ ಉಂಟಾಗಿದೆ. ಅದೇ ವೇಳೆ ಅಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕ ಸಂಸ್ಥೆಯ ಬಸ್ ಅದರೊಳಗೆ ಬಿದ್ದಿದೆ. ಬಸ್ ಬಿದ್ದ ರಭಸಕ್ಕೆ ಅದು ಸ್ಫೋಟಗೊಂಡಿದೆ ಎಂದು […]

ಚೀನಾ ದೂತಾವಾಸದ ಸಿಬ್ಬಂದಿಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿ ಸುಹೈ ಅಜೀಜ್ ತಲ್ಪುರ್

Saturday, November 24th, 2018
karachi

ಪಾಕಿಸ್ತಾನ: ‘ಮಗಳಿಗೆ ಕೇವಲ ಧಾರ್ಮಿಕ ಶಿಕ್ಷಣ ಸಾಲದು, ಆಧುನಿಕ ಶಿಕ್ಷಣ ಸಿಗಬೇಕು ಎಂದು ಅಪ್ಪ ನನ್ನನ್ನು ಖಾಸಗಿ ಶಾಲೆಗೆ ಸೇರಿಸಿದರು. ಸಂಬಂಧಿಕರು, ನೆರೆಹೊರೆಯವರು ನಮ್ಮನ್ನು ದೂರ ಮಾಡಿದರು. ಆದರೆ ಅಪ್ಪ ಅಂಜಲಿಲ್ಲ. ಹುಟ್ಟಿದ ಊರನ್ನೇ ಬಿಟ್ಟು ಬೇರೊಂದು ಊರಲ್ಲಿ ನನಗೆ ಬದುಕುಕಟ್ಟಿಕೊಟ್ಟರು. ನನ್ನ ಎಲ್ಲ ಸಾಧನೆ ಅವರಿಗೆ ಅರ್ಪಣೆ…’ ಹೀಗೆ ತಮ್ಮ ಬಾಲ್ಯ ನೆನಪಿಸಿಕೊಂಡು ಭಾವುಕರಾದವರು ಚೀನಾ ದೂತಾವಾಸದ ಸಿಬ್ಬಂದಿಯನ್ನು ಬಲೂಚ್ ಉಗ್ರರ ದಾಳಿಯಿಂದ ಕಾಪಾಡಿದ ಕರಾಚಿಯ ಪೊಲೀಸ್ ವರಿಷ್ಠಾಧಿಕಾರಿ ಸುಹೈ ಅಜೀಜ್ ತಲ್ಪುರ್. ಉಗ್ರರ ನಿಗ್ರಹ […]

ಗುರುವಾರದಂದು ಭಾರಿ ತಲ್ಲಣ ಮೂಡಿಸಿದ್ದ ಷೇರು ಮಾರುಕಟ್ಟೆ..ಶುಕ್ರವಾರ ಹೂಡಿಕೆದಾರರಿಗೆ ಶುಭದಾಯಕ

Friday, October 12th, 2018
share-market

ನವದೆಹಲಿ: ಗುರುವಾರದಂದು ಭಾರಿ ತಲ್ಲಣ ಮೂಡಿಸಿದ್ದ ಭಾರತೀಯ ಷೇರು ಮಾರುಕಟ್ಟೆ, ಶುಕ್ರವಾರ ಹೂಡಿಕೆದಾರರಿಗೆ ಶುಭದಾಯಕವಾಗಿ ಆರಂಭಗೊಂಡಿದೆ. ದಿನದ ಆರಂಭದಲ್ಲೇ ಸೆನ್ಸೆಕ್ಸ್ 650ಕ್ಕೂ ಹೆಚ್ಚು ಅಂಕ ಜಿಗಿತ ಕಂಡಿದ್ದು, ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಜೊತೆಯಲ್ಲಿ ನಿಫ್ಟಿ ಸಹ ಕೊಂಚ ಚೇತರಿಕೆಯನ್ನು ಪಡೆದು, 10,350ರ ಅಸುಪಾಸಿನಲ್ಲಿ ಆರಂಭ ಪಡೆದಿದೆ. ಕಳೆದ ಕೆಲ ದಿನಗಳಲ್ಲಿ ಕೆಟ್ಟ ಪರಿಸ್ಥಿತಿ ಅನುಭವಿಸುತ್ತಿದ್ದ ಅದಾನಿ ಪೋರ್ಟ್, ವೇದಾಂತ, ಇಂಡಸ್ಸಿಂಡ್ ಬ್ಯಾಮಕ್, ರಿಲಯನ್ಸ್,ಆಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಏಷ್ಯನ್ ಪೈಂಟ್ಸ್, ಹೀರೋ ಮೋಟೋ ಕಾರ್ಪ್ಗಳು ಚೇತರಿಕೆಯ […]

ಪ್ರಧಾನಿ ಮೋದಿ ದಾವೋಸ್‌ ಭಾಷಣಕ್ಕೆ ತಲೆದೂಗಿದ ಚೀನಾ!

Friday, January 26th, 2018
modi-speak

ನವದೆಹಲಿ: ಸ್ವಿಡ್ಜರ್‌ಲ್ಯಾಂಡ್‌‌ನ ದಾವೋಸ್‌ನಲ್ಲಿ ನಡೆದ ವರ್ಲ್ಡ್‌‌‌ ಎಕನಾಮಿಕ್ಸ್‌ ಫೋರಂ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣವನ್ನು ಚೀನಾ ಸ್ವಾಗತಿಸಿದೆ. ದಾವೋಸ್‌ನಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂದು ಪ್ರತಿಪಾದಿಸಿದ್ದರು. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌‌ ಟ್ರಂಪ್‌ ಅವರ ‘ಅಮೆರಿಕ ಫಸ್ಟ್‌‌’ ನೀತಿ ವಿರುದ್ಧ ಪರೋಕ್ಷವಾಗಿ ಮೋದಿ ದನಿ ಎತ್ತಿದ್ದರು. ಪ್ರಧಾನಿ ಮೋದಿ ಅವರ ಈ ಭಾಷಣವನ್ನು ಸ್ವಾತಿಸಿರುವ ಚೀನಾ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು […]

ಭಾರತದ-ಚೀನಾ ನಡುವಿನ ಸಂಬಂಧ ಉಪನ್ಯಾಸ

Saturday, December 9th, 2017
BL Santhosh

ಮೂಡುಬಿದಿರೆ: ಭಾರತವು ಯಾವ ಅಪಾಯಕಾರಿ ದೇಶಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗಿತ್ತೋ, ಆ ದೇಶವನ್ನು ಕಡೆಗಣಿಸಿ, ನಿರ್ಲಕ್ಷಿತ ದೇಶಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿರುವುದೇ ಇಂದಿನ ಚೀನಾ ಮತ್ತು ಭಾರತದ ನಡುವಿನ ಸಮಸ್ಯೆಗೆ ಕಾರಣ ಎಂದು ಬಿ.ಜೆ.ಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿರುವ ಬಿ.ಎಲ್.ಸಂತೋಷ್ ಹೇಳಿದರು. ಅವರು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಕ್ಲಬ್ ಹಾಗೂ ಸಂಚಲನ ಮೂಡಬಿದಿರೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ `ಭಾರತ ಮತ್ತು ಚೀನಾ ನಡುವಿನ ಸಂಬಂಧ’ ಎಂಬ ವಿಷಯದ ಕುರಿತು ಮಾತನಾಡಿದರು. ದುರಾದೃಷ್ಟವಷಾತ್ ನಾವು […]