ಎಲ್ಲ ಕಡೆಗಳಲ್ಲಿ ಭಗವಂತನ ಅಸ್ತಿತ್ವದ ಅನುಭವ ಮಾಡುವ ಕನಕದಾಸರು !

Sunday, November 21st, 2021
Kanakadasa

ಮಂಗಳೂರು :  ಬೀರಪ್ಪನಾಯಕನು ೧೬ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಬಂಕಾಪುರ ಪ್ರಾಂತ್ಯದ ಬಾಡ ಪಟ್ಟಣದ ದಳಪತಿಯಾಗಿದ್ದನು. ಬಚ್ಚಮ್ಮ ಬೀರಪ್ಪನ ಹೆಂಡತಿ. ಇವರು ತಿರುಪತಿ ವೆಂಕಟೇಶ್ವರಸ್ವಾಮಿಯ ಭಕ್ತರು. ತಿರುಪತಿ ತಿಮ್ಮಪ್ಪನ ಕೃಪೆಯಿಂದ ಈ ದಂಪತಿಗಳಿಗೆ ಒಂದು ಗಂಡು ಮಗು ಜನಿಸಿತು. ಅದಕ್ಕೆ ‘ತಿಮ್ಮಪ್ಪ’ ಎಂದೇ ಹೆಸರಿಟ್ಟರು. ತಿಮ್ಮಪ್ಪ ನಾಯಕ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸದ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತನು. ತಂದೆಯ ಕಾಲಾನಂತರ ಬಂಕಾಪುರ ಪ್ರಾಂತ್ಯಕ್ಕೆ ದಳಪತಿಯಾದನು. ತಿಮ್ಮಪ್ಪನು ಹೊಸ ಮನೆ ಕಟ್ಟಿಸುವಾಗ ಆ ಸ್ಥಳದಲ್ಲಿ ಆತನಿಗೆ ಚಿನ್ನ, ವಜ್ರ, […]

ದೈವಸ್ಥಾನದ ಮೈದಾನದಲ್ಲಿ ಹಿಂದೂ ಯುವಕರ ಜೊತೆ ಆಡುತ್ತಿದ್ದ ಅನ್ಯ ಧರ್ಮೀಯ ಯುವಕನನ್ನು ಹೊರದಬ್ಬಿದ ಆಡಳಿತ ಮಂಡಳಿ ಸದಸ್ಯ

Wednesday, July 14th, 2021
cricket

ಸುಳ್ಯ :  ಜಯನಗರದ ಶ್ರೀನಾಗ ಬ್ರಹ್ಮ ಆದಿ ಮೊಗೇರ್ಕಳ ಹಾಗೂ ಸ್ವಾಮಿ ಕೊರಗಜ್ಜ ದೈವಸ್ಥಾನದ ಮೈದಾನದಲ್ಲಿ ಹಿಂದೂ ಯುವಕರ ಜೊತೆ ಆಡುತ್ತಿದ್ದ ಅನ್ಯ ಧರ್ಮೀಯ ಯುವಕನನ್ನ ಆಡಳಿತ ಮಂಡಳಿ ಸದಸ್ಯ ಪ್ರವೀಣ್ ಹೊರದಬ್ಬಿದ್ದಾರೆ. ಪ್ರವೀಣ್ ಹಿಂದೂ ಯುವಕರೊಂದಿಗೆ ಕ್ರಿಕೆಟ್‌ ಆಟವಾಡುತ್ತಿದ್ದ ಕ್ರೈಸ್ತ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ‌ಇಲ್ಲಿ ಅನ್ಯಧರ್ಮಿಯರಿಗೆ ಆಡಲು ಅವಕಾಶವಿಲ್ಲ ಎಂದು ಯುವಕನನ್ನು ಸ್ಥಳದಿಂದ ಹೊರಹೋಗುವಂತೆ ಒತ್ತಾಯಿಸಿದ್ದು, “ಹಿಂದೂಗಳು ಅನ್ಯಧರ್ಮಿಯರೊಡನೆ ಏಕೆ ಆಡುತ್ತಾರೆ?” ಎಂದು ಪ್ರವೀಣ್‌ ಕೇಳಿದ್ದಾರೆ. ಈ ಮೈದಾನದಲ್ಲಿ ಯಾವುದೇ ಅನ್ಯಜಾತಿಯವರು ಆಡಬಾರದು ಎಂದು […]

29 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ವೇದವ್ಯಾಸ್ ಕಾಮತ್

Thursday, October 10th, 2019
vedhavyas-kamath

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮರೋಳಿ ವಾರ್ಡಿನ ಜಯನಗರದಲ್ಲಿ 29 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು. ಗುದ್ದಲಿಪೂಜೆ ನೆರವೇರಿಸಿ ಬಳಿಕ ಪ್ರತಿಕ್ರಿಯಿಸಿದ ಅವರು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಸ್ಥಳೀಯ ನಿವಾಸಿಗಳ ಬೇಡಿಕೆಯಂತೆ ಈ ರಸ್ತೆಯನ್ನು 29 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. ಕ್ಷೇತ್ರವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಿಕೊಂಡು […]

ಬೆಂಗಳೂರಲ್ಲಿ ಮತ್ತೆ ಅಬ್ಬರಿಸಿದ ವರುಣ: ಒಂದು ವಾರ ರಾಜ್ಯಾದ್ಯಂತ ಭಾರಿ ಮಳೆ ಸಾಧ್ಯತೆ

Thursday, October 4th, 2018
bengalore

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಅಬ್ಬರ ಶುರುವಾಗಿದೆ. ಇನ್ನೂ ಒಂದು ವಾರ ಕಾಲ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಲಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ. ಯಶವಂತಪುರ, ಜಯನಗರ, ಶಾಂತಿನಗರ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಚೆನ್ನೈ ಕರಾವಳಿ ತೀರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವುದರಿಂದ ಮಳೆಯಾಗುತ್ತಿದೆ. ಮುಂದಿನ ವಾರವೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಚಂಡಮಾರುತ ಉಂಟಾಗಲಿದ್ದು, ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದೆ […]

ಬೆಂಗಳೂರಲ್ಲಿ ನಿಲ್ಲದ ವರುಣನ ಅಬ್ಬರ: ಜನರಿಗೆ ಮತ್ತೆ ಸಂಕಷ್ಟ..!

Thursday, September 27th, 2018
bengaluru

ಬೆಂಗಳೂರು: ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಯಿಂದ ನಗರದಲ್ಲಿ ಪ್ರವಾಹದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಮಳೆ ಸೃಷ್ಟಿಸಿರುವ ಅವಾಂತರದಿಂದ ಜನರು ಪಾರಾಗುವ ಮೊದಲೇ ಮತ್ತೆ ಬುಧವಾರ ಮಳೆ ಸುರಿದಿದೆ. ಸಂಜೆ ಕೃಷ್ಣರಾಜಪುರಂ 66 ಮಿ.ಮೀ, ಮಹಾದೇವಪುರ 62 ಮಿ.ಮೀ, ಬೊಮ್ಮನಹಳ್ಳಿ 54 ಮಿ.ಮೀ, ಹೆಚ್ಎಸ್ಆರ್ ಲೇಔಟ್ 52 ಮಿ.ಮೀ, ದೊಮ್ಮಲೂರು ಮತ್ತು ಕೊಣೆನ ಅಗ್ರಹಾರದಲ್ಲಿ ತಲಾ 86 ಮಿ.ಮೀ ಮಳೆ ದಾಖಲಾಗಿದೆ. ಸೋಮವಾರ ಮತ್ತು ಮಂಗಳವಾರದ ಎರಡೂ ದಿನಗಳು ಒಟ್ಟು 22 ಮಿ.ಮೀ. ಮಳೆಯಾಗಿದ್ದು, ಮೈಸೂರು ರಸ್ತೆ, […]

ಜಯನಗರ ಶಾಸಕಿ ಸೌಮ್ಯ ರೆಡ್ಡಿಯನ್ನು ಅಭಿನಂದಿಸಿದ ಮಾಜಿ ಸಿಎಂ ಸಿದ್ದರಾಮಯ್ಯ!

Thursday, June 14th, 2018
siddaramaih

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರ ಚುನಾವಣೆಯಲ್ಲಿ ಜಯಗಳಿಸಿರುವ ಸೌಮ್ಯ ರೆಡ್ಡಿ ಅವರನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅಭಿನಂದಿಸಿದರು. ತಮ್ಮ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ್ದ ಸೌಮ್ಯ ರೆಡ್ಡಿ ಅವರನ್ನು ಸಿದ್ದರಾಮಯ್ಯ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರು ನಗರದ 28 ಕ್ಷೇತ್ರದ ಪೈಕಿ 16 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಮತದಾರರು ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಶೇ.38 ರಷ್ಟು ಮತ ಲಭಿಸಿದೆ‌. ಈಗ ಇನ್ನೆರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇವೆ. ರಾಜ್ಯದ ಜನತೆಯ ಒಲವು ನಮ್ಮೊಂದಿಗೆ ಇದೆ ಎಂದು ವಿಶ್ವಾಸ […]

ಜಯನಗರ, ಪರಿಷತ್‌‌ ಚುನಾವಣೆ: ಗೆದ್ದ ಅಭ್ಯರ್ಥಿಗಳಿಗೆ ಪರಮೇಶ್ವರ್ ಶುಭಾಶಯ

Wednesday, June 13th, 2018
parameshwar

ಬೆಂಗಳೂರು: ರಾಜ್ಯ ವಿಧಾನಸಭೆಯ ಜಯನಗರ ಕ್ಷೇತ್ರದಲ್ಲಿ ಹಾಗೂ ವಿಧಾನ ಪರಿಷತ್‌ ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಸಾಧಿಸಿದ ಗೆಲುವಿಗೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಂತಸ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್ ಮೂಲಕ ತಮ್ಮ ಸಂತಸ ಹಂಚಿಕೊಂಡಿರುವ ಅವರು ಗೆದ್ದ ಅಭ್ಯರ್ಥಿಗಳಿಗೆ ಈ ಮೂಲಕ ಅಭಿನಂದನೆ ಕೂಡ ಸಲ್ಲಿಸಿದ್ದಾರೆ. ಜಯನಗರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಅನುಕಂಪದ ಅಲೆಯನ್ನೂ ಮೀರಿ ಉತ್ತಮ ಗೆಲುವು ಸಾಧಿಸಿರುವ ಸೌಮ್ಯ ರೆಡ್ಡಿಗೆ ಪರಮೇಶ್ವರ್ ಶುಭಾಶಯ ತಿಳಿಸಿದ್ದಾರೆ. ಈ ಗೆಲುವಿಗೆ ಕಾರಣರಾದ ಮತದಾರರನ್ನು ಅಭಿನಂದಿಸಿರುವ […]

ಜಯನಗರ ಚುನಾವಣೆ…ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಗೆ ಭರ್ಜರಿ ಜಯ!

Wednesday, June 13th, 2018
soumya-ramlinga'

ಬೆಂಗಳೂರು: ಜಯನಗರ ವಿಧಾನಸಭಾ ಚುನಾವಣೆ 2018ರ ಫಲಿತಾಂಶ ಹೊರ ಬಿದ್ದಿದೆ. ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಇಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಭರ್ಜರಿ ಜಯ ದಾಖಲಿಸಿದ್ದಾರೆ. ಅವರಿಗೆ ತೀವ್ರ ಸ್ಪರ್ಧೆಯೊಡ್ಡಿದ ಬಿಜೆಪಿಯ ಬಿ.ಎನ್. ಪ್ರಹ್ಲಾದ್ ಇಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಇನ್ನು ಅಬ್ಬರದ ಪ್ರಚಾರ ನಡೆಸಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಠೇವಣಿಯೂ ಉಳಿಸಿಕೊಳ್ಳಲಾಗದೆ ಮುಖಭಂಗ ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ಇಲ್ಲಿನ ಚುನಾವಣೆ ಜೂನ್ 11ಕ್ಕೆ ಮುಂದೂಡಿತ್ತು. ಸೋಮವಾರ […]

ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ… ಕಾಂಗ್ರೆಸ್‌ ಅಭ್ಯರ್ಥಿ ಸೌಮ್ಯಾರೆಡ್ಡಿ ಭಾರಿ ಮುನ್ನಡೆ!

Wednesday, June 13th, 2018
soumya-reddy

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭಗೊಂಡಿದೆ. ಕ್ಷೇತ್ರದಲ್ಲಿ ನಾಲ್ಕು ಅಂಚೆ ಮತಗಳಿದ್ದು, ಮೊದಲು ಅಂಚೆ ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ. ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾರೆಡ್ಡಿಗೆ ಭಾರಿ ಮುನ್ನಡೆ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ. ಮತಗಟ್ಟೆ ಬಳಿ ಪಟಾಕಿ ಸಿಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. 10ನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ ಭಾರಿ ಮುನ್ನಡೆ ಪಡೆದಿದ್ದಾರೆ. 40,677 ಮತಗಳನ್ನು ಪಡೆದಿರುವ ಸೌಮ್ಯಾರೆಡ್ಡಿ ಸುಮಾರು 15 ಸಾವಿರ ಮತಗಳಿಂದ ಮುನ್ನಡೆ […]

ಜಯನಗರ ಕ್ಷೇತ್ರದ ಚುನಾವಣೆ: ‘ಕೈ’ ಅಭ್ಯರ್ಥಿಯನ್ನ ಬೆಂಬಲಿಸಲು ದೇವೇಗೌಡರ ಸೂಚನೆ

Tuesday, June 5th, 2018
devegowda

ಬೆಂಗಳೂರು: ಬಿಜೆಪಿ ಶಾಸಕ ಬಿ.ಎನ್. ವಿಜಯಕುಮಾರ್ ಅವರ ನಿಧನ ಹಿನ್ನೆಲೆಯಲ್ಲಿ ಮುಂದೂಡಿದ್ದ ಜಯನಗರ ವಿಧಾನಸಭೆ ಚುನಾವಣೆ ಜೂನ್ 11 ರಂದು ನಡೆಯಲಿದ್ದು, ಮಹತ್ವದ ಬೆಳವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕಾಳೇಗೌಡ ಅವರು ಕಣದಿಂದ ಹಿಂದೆ ಸರಿದಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಸೂಚನೆ ಮೇರೆಗೆ ಕಣದಿಂದ ಹಿಂದೆ ಸರಿದಿರುವ ಕಾಳೇಗೌಡರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಗೌಡರು ಸೂಚನೆ ನೀಡಿದ್ದಾರೆ. ಅದೇ ರೀತಿ ಈ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೂ ಕಾಂಗ್ರೆಸ್‌ಗೆ ಬೆಂಬಲ ನೀಡುವಂತೆ ದೇವೇಗೌಡ ಸೂಚನೆ ನೀಡಿದ್ದಾರೆ.