ರಾಜ್ಯ ಸರಕಾರದ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸಿ: ಜೆ. ಆರ್. ಲೋಬೊ

Saturday, December 22nd, 2018
j-r-lobo

ಮಂಗಳೂರು: ಕರ್ನಾಟಕ ಸರಕಾರವು ಹಿಂದುಳಿದ ವರ್ಗದ ಜನರಿಗೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅದನ್ನು ಜನತೆಗೆ ತಲುಪಿಸುವಂತಹ ಕೆಲಸವು ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ಪದಾಧಿಕಾರಿಗಳ ಮೂಲಕ ಆಗಬೇಕು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ಜೆ. ಆರ್. ಲೋಬೊ ರವರು ತಾರೀಕು 21.12.2018 ರಂದು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ಘಟಕದ ನೂತನ ಅಧ್ಯಕ್ಷರಾದ ಶ್ರೀ ರಮಾನಂದ ಪೂಜಾರಿ ಯವರಿಗೆ ಅಧಿಕರ ಹಸ್ತಾಂತರ […]

ಸದ್ದಿಲ್ಲದೆ ಕೆಲಸ ಮಾಡಿ ಜನಮನ ಗೆದ್ದ ಜೆ.ಆರ್. ಲೋಬೊ

Friday, May 11th, 2018
j-r-lobo

ಮಂಗಳೂರು: ಸರಕಾರಿ ಅಧಿಕಾರಿಯಾಗಿದ್ದ ಜೆ.ಆರ್.ಲೋಬೊ ಅವರು ಸದ್ದಿಲ್ಲದೆ ಸಾಧಿಸಿದ ಶಾಸಕ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಎಲ್ಲ ಸ್ತರದ ಜನರಿಗೆ ಪ್ರಯೋಜನ ಆಗುವಂತೆ ಸಕಲ ಸೌಲಭ್ಯಗಳು ಮಂಗಳೂರಿನಲ್ಲಿ ಅನುಷ್ಠಾನ ಆಗುವಂತೆ ಶ್ರಮಿಸಿದ ಶಾಸಕ ಲೋಬೊ. ನಗರ ಪ್ರದೇಶದಲ್ಲಿ ಕೆಲಸ ಮಾಡಲು ಹೇಳಿ ಮಾಡಿಸಿದಂತ ಶಾಸಕ ಲೋಬೊ ಎಂದುಹೇಳಬೇಕಾಗುತ್ತದೆ. ಏಕೆಂದರೆ, ನಗರದಲ್ಲಿ ಅತೀ ಶ್ರೀಮಂತರು ಇರುತ್ತಾರೆ ಜೀವನೋಪಾಯಯಕ್ಕಾಗಿ ವಲಸೆ ಬಂದಿರುವ ಬಡ ಕಾರ್ಮಿಕರು ಇರುತ್ತಾರೆ. ಈ ಎಲ್ಲ ಸ್ತರದ ಜನರ ಆಶೋತ್ತಾರಗಳನ್ನು ಪೂರೈಸಲು ನಾಯಕನಾದವನಿಗೆ ಅಂತಹುದೇ ಆದ ಮನಸ್ಸು ಇರಬೇಕಾಗುತ್ತದೆ. […]

ಕದ್ರಿ ಸ್ಮಶಾನ ಭೂಮಿ ಉದ್ಘಾಟನೆಗೆ ಅಡ್ಡಿ

Wednesday, March 21st, 2018
mayor-bhaskar

ಮಂಗಳೂರು: ಕದ್ರಿಯಲ್ಲಿರುವ ಹಿಂದೂ ಸ್ಮಶಾನದ ಉದ್ಘಾಟನೆಗೆ ಬಂದಿದ್ದ ಜನಪ್ರತಿನಿಧಿಗಳಿಗೆ ಸ್ಥಳೀಯರು ಅಡ್ಡಿಪಡಿಸಿದರು. ತಮ್ಮ ಬೇಡಿಕೆಗಳಿಗೆ ಸ್ಪಂದಿಸದೇ ಇರುವುದರಿಂದ ಉದ್ಘಾ ಟನೆಗೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಸ್ಮಶಾನದ ಸುತ್ತ ಇಂಟರ್‌ಲಾಕ್‌ ಅಳವಡಿಸಿರುವುದಕ್ಕೆ ಸ್ಥಳೀಯ ಜೋಗಿ ಸಮಾಜದವರು ಆಕ್ಷೇಪ ವ್ಯಕ್ತಪಡಿಸಿದರು. ಇಂಟರ್‌ಲಾಕ್‌ ಅನ್ನು ತೆರವುಗೊಳಿಸಬೇಕು. ಜೋಗಿ ಸಮಾಜದ ಇತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಶಾಸಕ ಜೆ.ಆರ್‌. ಲೋಬೊ, ಮೇಯರ್ ಭಾಸ್ಕರ್‌ ಮೊಯಿಲಿ, ಸ್ಥಳೀಯರ ಬೇಡಿಕೆಗಳನ್ನು ಆಲಿಸಿದರು. ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಶಾಸಕ ಲೋಬೊ ಭರವಸೆ ನೀಡಿದರು. […]

ಸರಕಾರಿ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆ ರದ್ದುಗೊಳಿಸಲು ಶಾಲಾ ಶಿಕ್ಷಕರ ಒತ್ತಾಯ

Friday, March 16th, 2018
j-r-lobo

ಮಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ಕಡ್ಡಾಯ ವರ್ಗಾವಣೆಯ ನೆಪದಲ್ಲಿ ನಗರ ಪ್ರದೇಶದ ಸರಕಾರಿ ಶಾಲಾ ಶಿಕ್ಷಕರನ್ನು ಗ್ರಾಮಾಂತರ ಪ್ರದೇಶಗಳಿಗೆ ಕಳುಹಿಸುವ ಕ್ರಮವು ತೀರಾ ಅವೈಜ್ಞಾನಿಕವಾಗಿದ್ದು, ಈಗಾಗಲೇ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಸರಕಾರಿ ಶಾಲಾ ಶಿಕ್ಷಕರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಎಸ್‌ಎಫ್‌ಐ, ಡಿವೈಎಫ್‌ಐ ಮಾರ್ಗದರ್ಶನದಲ್ಲಿ ಸರಕಾರಿ ಶಾಲಾ ಶಿಕ್ಷಕರು ಇಂದು (15-03-18) ದ.ಕ. ಜಿಲ್ಲಾಧಿಕಾರಿಗಳು, ಸಚಿವರಾದ ಯು.ಟಿ. ಖಾದರ್, ಶಾಸಕರಾದ ಜೆ.ಆರ್. ಲೋಬೊ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಐವನ್ ಡಿ’ಸೋಜರವರನ್ನು ಭೇಟಿಯಾಗಿ ಮನವಿಯನ್ನು ಅರ್ಪಿಸಿದರು. ಶಿಕ್ಷಣ ಇಲಾಖೆಯು ಒಂದು ಜಿಲ್ಲೆಯನ್ನು […]

ಕಸಬಾ ಬೆಂಗ್ರೆ ಅಹಿತಕರ ಘಟನೆಗೆ ಕಾಂಗ್ರೆಸ್ ಕುಮ್ಮಕ್ಕು: ಸಂಸದ ನಳಿನ್ ಆರೋಪ

Thursday, February 22nd, 2018
nalin-kumar

ಮಂಗಳೂರು: ಕಸಬಾ ಬೆಂಗ್ರೆಯಲ್ಲಿ ನಿನ್ನೆ ನಡೆದ ಅಹಿತಕರ ಘಟನೆಗೆ ಕಾಂಗ್ರೆಸ್ ಕುಮ್ಮಕ್ಕು ಕಾರಣ. ಕಾಂಗ್ರೆಸ್ ಈ ಕೃತ್ಯವನ್ನು ವ್ಯವಸ್ಥಿತವಾಗಿ ನಡೆಸಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಒಂದು ತಿಂಗಳಿನಿಂದ ಇಂತಹ ಕೃತ್ಯವೆಸಗಲು ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ಕಾಂಗ್ರೆಸ್ ನ ವ್ಯವಸ್ಥಿತ ಷಡ್ಯಂತ್ರವಿದೆ. ಇದೀಗ ಈ ಕೃತ್ಯವನ್ನು ಬಿಜೆಪಿಯವರು ಎಸಗಿದ್ದಾಗಿ ಆರೋಪಿಸಲಾಗುತ್ತಿದೆ. ಈ ಘಟನೆಯ ಹಿಂದೆ ಶಾಸಕರು, ಸಚಿವರ ಕೈವಾಡವಿದೆ ಎಂದು ನಳಿನ್ ಆರೋಪಿಸಿದರು, ಜನಪ್ರತಿನಿಧಿಯಾದ ಶಾಸಕರು ಎರಡೂ ಸಮುದಾಯಗಳ ಜನರೊಂದಿಗೆ ಮಾತನಾಡಬೇಕಿತ್ತು. ಆದರೆ […]

ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಕ್ರೀಡಾಂಗಣ: ಲೋಬೊ

Monday, January 22nd, 2018
j.r.lobo

ಮಂಗಳೂರು: ನಗರದ ಉರ್ವ ಮಾರಿಗುಡಿ ಸಮೀಪದಲ್ಲಿನ ಒಂದು ಎಕರೆ ಜಮೀನಿನಲ್ಲಿ 6.50 ಕೋಟಿ ರೂ. ವೆಚ್ಚದ ಅಂತಾರಾಷ್ಟ್ರೀಯ ಗುಣಮಟ್ಟದ ಸುಸಜ್ಜಿತ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ,  ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿದ್ದು, 2020ರ ಒಳಗಾಗಿ ಕ್ರೀಡಾಂಗಣ ನಿರ್ಮಾಣವಾಗುವ ನಿರೀಕ್ಷೆ ಇದೆ ಎಂದರು. ಕ್ರೀಡಾಂಗಣ ನಿರ್ಮಾಣವಾದರೆ ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲು ಸಾಧ್ಯವಾಗಲಿದೆ. ಉರ್ವದಲ್ಲಿ ಈ ಹಿಂದೆ ಪೊಲೀಸ್ […]

‘ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿಲ್ಲ’

Monday, January 1st, 2018
surathkal

ಮಂಗಳೂರು: ಎಡಿಬಿ ಮೊದಲ ಹಂತದ ಯೋಜನೆಯಡಿ ಸುರತ್ಕಲ್‌ ಭಾಗದಲ್ಲಿ ಕೈಗೆತ್ತಿಕೊಳ್ಳಲಾದ ಒಳಚರಂಡಿ ಅವ್ಯವಸ್ಥೆಯ ಕುರಿತು ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ನಡುವೆ ಶನಿವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ತೀವ್ರ ವಾಗ್ವಾದ ನಡೆಯಿತು. ಆರಂಭದಲ್ಲಿ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ನಾಯಕ ಗಣೇಶ್‌ ಹೊಸಬೆಟ್ಟು, ಸುರತ್ಕಲ್‌ನ ಮಧ್ವನಗರದಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ತೆರೆದಿಡಲಾಗಿದೆ. ತ್ಯಾಜ್ಯ ನೀರಿನ ಮರುಬಳಕೆಗೆ ಪಾಲಿಕೆಯು ಎಂಆರ್‌ಪಿಎಲ್ ಜತೆಗೆ ಒಡಂಬಡಿಕೆ ಮಾಡಿಕೊಂಡಿದೆ. ಆದರೆ, ಎಂಆರ್‌ಪಿಎಲ್‌ವರೆಗೆ ಪೈಪ್‌ಲೈನ್‌ ಅಳವಡಿಕೆ ಆಗಿಲ್ಲ. ಹೀಗಾಗಿ ಸಂಸ್ಕರಿಸಿದ ನೀರು ಚರಂಡಿ […]

ಸ್ಮಾರ್ಟ್ ಆದ ಬೊಕ್ಕಪಟ್ಣ ಸರ್ಕಾರಿ ಶಾಲೆ

Wednesday, December 20th, 2017
govt-school

ಮಂಗಳೂರು: ನಗರದ ಬೊಕ್ಕಪಟ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದೀಗ ಸ್ಮಾರ್ಟ್‌ ಆಗಿ ರೂಪುಗೊಂಡಿದೆ. ಮಂಗಳೂರು ಕೋಸ್ಟಲ್‌ ರೌಂಡ್‌ ಟೇಬಲ್‌ನಿಂದ ಶಾಲೆಗೆ ದೃಶ್ಯ–ಶ್ರವಣ ಕೊಠಡಿ ಹಾಗೂ ಸ್ಮಾರ್ಟ್‌ ಕ್ಲಾಸ್‌ಗಳನ್ನು ನಿರ್ಮಿಸಲಾಗಿದೆ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಂಡಿರುವ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್–190, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಆಧುನಿಕ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ರೌಂಡ್‌ ಟೇಬಲ್‌ ಅಧ್ಯಕ್ಷ ಸುದೇಶ್‌ ಕರುಣಾಕರ್‌ ತಿಳಿಸಿದರು. […]

ಲಕ್ಷದ್ವೀಪ ಮಂಗಳೂರು ಹಳೆ ಬಂದರಿನಲ್ಲಿ ವಾಣಿಜ್ಯ ವ್ಯವಹಾರ ಮುಂದುವರಿಸಲು ಒಪ್ಪಿಗೆ : ಶಾಸಕ ಜೆ.ಆರ್.ಲೋಬೊ

Tuesday, October 31st, 2017
JR lobo

ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದ ನಿಯೋಗದ ಸಮಗ್ರ ಮಾಹಿತಿ ಮತ್ತು ಒಡಂಬಡಿಕೆಯನ್ನು ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಲಕ್ಷದ್ವೀಪ ಆಡಳಿತ ಮಂಡಳಿ ಮಂಗಳೂರು ಬಂದರಿನ ಮೂಲಕ ವಾಣಿಜ್ಯ ವ್ಯವಹಾರ ಮುನ್ನಡೆಸಲು ಒಪ್ಪಿಗೆ ನೀಡಿತು. ಶಾಸಕ ಜೆ.ಆರ್.ಲೋಬೊ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅಧಿಕಾರಿಗಳ ಜೊತೆ ನಿಯೋಗ ಲಕ್ಷದ್ವೀಪಕ್ಕೆ ಅಕ್ಟೋರ್ 30, 31 ಹಾಗೂ ನವೆಂಬರ್ 1 ರವರೆಗೆ ಹೋಗಿ ಮಾತುಕತೆ ನಡೆಸಿತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ 100 ಕೋಟಿ ರೂಪಾಯಿ ಮೊತ್ತದ ಯೋಜನೆ ಮಂಜೂರಾಗಿದೆ. […]

ಆಶಾ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಿ: ಶಾಸಕ ಜೆ.ಆರ್.ಲೋಬೊ

Thursday, October 26th, 2017
JR lobo

ಮಂಗಳೂರು: ಮಂಗಳೂರು ನಗರದ ಜೆಪ್ಪು, ಬಂದರ, ಕದ್ರಿಯಲ್ಲಿ ಆಶಾ ಕಾರ್ಯಕರ್ತರನ್ನು ಬೇಗನೆ ಭರ್ತಿ ಮಾಡಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚಿಸಿದರು. ಅವರು ಮಂಗಳುರು ನಗರದಲ್ಲಿರುವ ಆರೋಗ್ಯ ಕೇಂದ್ರಗಳ ಪ್ರಗತಿ ಪರಿಶೀಲನೆ ಮಾಡಿ ಮಾತನಾಡುತ್ತಿದ್ದರು. ಜೆಪ್ಪುವಿನಲ್ಲಿ 6, ಬಂದರ ನಲ್ಲಿ 6 ಮತ್ತು ಕದ್ರಿಯಲ್ಲಿ 3 ಹುದ್ದೆಗಳಿದ್ದು ಇವುಗಳಿಗೆ ತ್ವರಿತವಾಗಿ ನೇಮಕ ಮಾಡುವಂತೆ ತಿಳಿಸಿದರು. ಆಶಾ ಕಾರ್ಯಕರ್ತರಿಗೆ ಮಾಸಿಕ 5 ಸಾವಿರ ರೂಪಾಯಿ ವೇತನ ಮತ್ತು ಹೆಚ್ಚಿವರಿಗೆ ಭತ್ತೆ ನೀಡಲಾಗುತ್ತದೆ. ಸ್ಥಳೀಯರನ್ನು ಮಾತ್ರ ನೇಮಕ ಮಾಡಬೇಕು. […]