ತುಳು ಅಕಾಡೆಮಿ ತೌಳವರ ತವರೂರು ಇದ್ದಂತೆ” – ದಯಾನಂದ ಜಿ ಕತ್ತಲ್‌ಸಾರ್

Wednesday, August 18th, 2021
Sarayu Yakshagana

ಮಂಗಳೂರು : ತುಳು ಅಕಾಡೆಮಿಯು ಕೊರೊನಾದ ಸಂಕಷ್ಟ ಕಾಲದಲ್ಲೂ ಕಲೆ, ಕಲಾವಿದರಿಗಾಗಿ ಸದಾ ತೆರೆದಿದೆ. ಯಾವುದೇ ಕಾರ್ಯಕ್ರಮಗಳನ್ನು ನಡೆಸಲು ಯಾರಿಗೂ ನಾವು ಅನುಮತಿ ನಿರಾಕರಿಸಿಲ್ಲ. ಇದು ತುಳುವ ಬಂಧುಗಳಿಗೆ ತವರೂರು ಆಗಿಯೇ ಇದೆ. ಅಂತಹಾ ಅವಕಾಶವನ್ನು ಎಲ್ಲಾ ತೌಳವ ಬಂಧುಗಳು ಬಳಸಿಕೊಂಡು ಕಮರಿ ಹೋದ ಕಲಾಬದುಕನ್ನು ಖಂಡಿತಾ ಪುನಃ ಕಟ್ಟಿಕೊಳ್ಳಬಹುದು. ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ ಕತ್ತಲ್‌ಸಾರ್‌ರವರು ತುಳುವೆರೆ – ಏಳಾಟೊ – ಸರಯೂ ಸಪ್ತಾಹೊದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷೀಯ ಭಾಷಣದಲ್ಲಿ […]

ನೂತನ ತುಳು ಭಾಷಿಗ ಕುಲಪತಿಗೆ ತುಳು ಅಕಾಡೆಮಿ ಅಭಿನಂದನೆ

Thursday, June 13th, 2019
Yadpaditya

ಮಂಗಳೂರು : ಇದೇ ಪ್ರಥಮ ಬಾರಿಗೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ತುಳು ಮಾತೃ ಭಾಷಿಗ ಕುಲಪತಿ ನೇಮಕಗೊಂಡಿರುವುದನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಭಿನಂದಿಸಿದೆ. ನೂತನ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರನ್ನು ಅಕಾಡೆಮಿ ನಿಯೋಗ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ.ಭಂಡಾರಿ ಅವರ ನೇತೃತ್ವದ ನಿಯೋಗವು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಕುಲಪತಿಯವರಿಗೆ ಅಭಿನಂದನೆ ಸಲ್ಲಿಸಿತು. ಮಂಗಳೂರು ವಿಶ್ವವಿದ್ಯಾನಿಲಯವು ಈಗಾಗಲೇ ಸ್ನಾತಕೋತ್ತರ ಪದವಿಯಲ್ಲಿ ತುಳು ಭಾಷೆಯ ವಿಭಾಗವನ್ನು ಆರಂಭಿಸಿರುವುದು ಹಾಗೂ ಪ್ರಸಕ್ತ ಶೆಕ್ಷಣಿಕ ವರ್ಷದಿಂದ […]

ಪದವಿ ತರಗತಿಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ತುಳು ಅಕಾಡೆಮಿ ಅಧ್ಯಕ್ಷರ ಮನವಿ

Tuesday, June 4th, 2019
AC-bhandary

ಮಂಗಳೂರು : ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಒಂದು ಐಚ್ಛಿಕ ಭಾಷೆಯಾಗಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಲಾಗಿದೆ. 2019-20 ನೇ ಸಾಲಿನಲ್ಲಿ ತುಳುವನ್ನು ಒಂದು ಭಾಷೆಯಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿ ಮಂಗಳೂರು ವಿಶ್ವವಿದ್ಯಾನಿಲಯ ಆದೇಶ ಹೊರಡಿಸಿದೆ. ಪದವಿ ವಿದ್ಯಾರ್ಥಿಗಳು ತುಳು ಭಾಷೆ, ಸಂಸ್ಕೃತಿಯನ್ನು ಅಭ್ಯಾಸ ಮಾಡುವ ಘನ ಉದ್ದೇಶದಿಂದ ತುಳುಭಾಷೆಯನ್ನು ಒಂದು ಭಾಷಾ ವಿಷಯವಾಗಿ ಕಲಿಯಲು ಮಂಗಳೂರು ವಿಶ್ವವಿದ್ಯಾನಿಲಯ ಅವಕಾಶ ಮಾಡಿಕೊಟ್ಟಿರುವುದು ಅಭಿನಂದನೀಯ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ತುಳು ಭಾಷೆಯನ್ನು ಕಾಲೇಜುಗಳಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ವಿಶ್ವವಿದ್ಯಾನಿಲಯವು […]

ತುಳು ಅಕಾಡೆಮಿಯಲ್ಲಿ ತುಳು ಭಾಷಾ ಕಲಿಕಾ ತರಗತಿ ಉದ್ಘಾಟನೆ

Saturday, September 15th, 2018
Tulu-study

ಮಂಗಳೂರು: ಭಾಷೆಯನ್ನು ಕಲಿಯುವುದರಿಂದ ನಾಡಿನ ಸಂಸ್ಕೃತಿಯ ಪರಿಚಯ ಆಗುವುದು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಪಡೆದಿರುವ ಖ್ಯಾತ ಸಾಹಿತಿ, ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿಯ ಅಧಿಕಾರಿ ಕೇಶವ ಕುಡ್ಲ ಅವರು ಹೇಳಿದರು. ತುಳು ಸಾಹಿತ್ಯ ಆಶ್ರಯದಲ್ಲಿ ತುಳು ಭಾಷಾ ಕಲಿಕಾ ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ತಾನು ಮೂಲತಃ ಹಾಸನ ಜಿಲ್ಲೆಯವರಾಗಿದ್ದು 25 ವರ್ಷಗಳ ಹಿಂದೆ ಉದ್ಯೋಗ ನಿಮಿತ್ತವಾಗಿ ಬಂದು ತುಳುಭಾಷೆ ಕಲಿತು ಇಂದು ತುಳುನಾಡಿನವನೇ ಆಗಿದ್ದೇನೆ ಎಂದು ಹೇಳಿದರು. ತುಳುವರು ಹೊರಜಿಲ್ಲೆ – […]

ಕನ್ನಡ ಮತ್ತು ಸಂಸ್ಕ್ರತಿ ಸಚಿವೆ ಡಾ. ಜಯಮಾಲಾರಿಗೆ ತುಳು ಅಕಾಡೆಮಿ ಅಭಿನಂದನೆ

Wednesday, June 13th, 2018
Tulu Academy

ಮಂಗಳೂರು: ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನೂತನ ಸಚಿವರಾಗಿ ನೇಮಕಗೊಂಡಿರುವ ಡಾ. ಜಯಮಾಲಾರವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸಚಿವರ ಗೃಹ ಕಛೇರಿಯಲ್ಲಿ ಭೇಟಿಯಾಗಿ ಅಭಿನಂಧಿಸಲಾಯಿತು. ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ಎ.ಸಿ ಭಂಡಾರಿಯವರು ಮಂಗಳೂರಿನಲ್ಲಿರುವ ಅಕಾಡೆಮಿಯ ಸಾಂಸ್ಕ್ರತಿಕಭವನ ತುಳುಭವನಕ್ಕೆ ಭೇಟಿ ನೀಡಬೇಕೆಂದು ಸಚಿವರನ್ನು ವಿನಂತಿಸಿದರು. ಈಗಾಗಲೇ ತುಳುಭವನಕ್ಕೆ ಕಟ್ಟಡದ ಕಾಮಗಾರಿಗೆ 4.80 ಕೋಟಿ ಸರಕಾರದ ಅನುದಾನ ಬಿಡುಗಡೆಯಾಗಿದ್ದು 5 ಕೋಟಿಗೂ ಹೆಚ್ಚು ಮೊತ್ತ ಖರ್ಚಾಗಿರುತ್ತದೆ. ತುಳುಭವನದ ನೆಲ ಅಂತಸ್ತಿನ ಕಾಮಗಾರಿ ಪೂರ್ತಿ ಆಗಿದ್ದು […]