ಕೂಳೂರು ಮೇಲ್ಸೇತುವೆಯಿಂದ ಹಾರಿದ ವ್ಯಕ್ತಿ ನಾಪತ್ತೆ

Tuesday, November 3rd, 2020
Kuluru River

ಮಂಗಳೂರು : ಪ್ರತ್ಯಕ್ಷದರ್ಶಿಯೊಬ್ಬರು  ಕೂಳೂರು ಮೇಲ್ಸೇತುವೆಯಿಂದ ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವ ನದಿಗೆ ಹಾರಿರುವ  ಬಗ್ಗೆ  ಪೊಲೀಸರಿಗೆ ದೂರು  ನೀಡಿದ ಹಿನ್ನಲೆಯಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಇಂದು ಬೆಳಗ್ಗೆ 10:30ರ ಸುಮಾರಿಗೆ ವ್ಯಕ್ತಿಯೊಬ್ಬರು ಮೇಲ್ಸೇತುವೆಯಲ್ಲಿ ಸ್ವಲ್ಪ ನಡೆದು ಬಳಿಕ ನದಿಗೆ ಹಾರಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲೇ‌‌ ಕಾರ್ಯಪ್ರವೃತ್ತರಾದ ಪೊಲೀಸರು ಸ್ಥಳಕ್ಕಾಗಮಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಣಂಬೂರು ಹಾಗೂ ಕಾವೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಜತೆಗೆ ಅಗ್ನಿಶಾಮಕ ದಳವೂ ಸ್ಥಳದಲ್ಲಿ ಕಾರ್ಯಾಚರಣೆ […]

ಮಂಗಳೂರು : ಸಹೋದರನನ್ನು ಚೂರಿಯಿಂದ ಇರಿದು ಕೊಲೆ; ಆರೋಪಿ ಬಂಧನ

Friday, October 18th, 2019
abdul rehaman

ಮಂಗಳೂರು : ಸಣ್ಣ ಜಗಳದಿಂದಾಗಿ ವ್ಯಕ್ತಿಯೋರ್ವವನು ತನ್ನ ಸಹೋದರನನ್ನು ಇರಿದು ಕೊಲೆ ಮಾಡಿದ ಘಟನೆ ಗುರುವಾರ ತಡ ರಾತ್ರಿ ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಂಗ್ರೆಯಲ್ಲಿ ನಡೆದಿದೆ. ಬೆಂಗ್ರೆ ನಿವಾಸಿ ಮುಸ್ತಾಫ ಕೊಲೆಯಾದ ವ್ಯಕ್ತಿ. ಮುಸ್ತಫಾನರ ಸಹೋದರ ರೈಜು ಯಾನೆ ಅಬ್ದುಲ್ ರಹಮಾನ್ ಕೊಲೆ ಆರೋಪಿಯಾಗಿದ್ದಾನೆ.ಇವರಿಬ್ಬರೂ ಮೀನುಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು.ಆಸ್ತಿಯ ವಿಚಾರವಾಗಿ ಮನೆಯಲ್ಲಿ ಸಹೋದರರಿಬ್ಬರೂ ಯಾವಾಗಲೂ ಗಲಾಟೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಅಲ್ಲದೆ ತಾಯಿ ಹಾಗೂ ತಂಗಿಗೆ ಮನೆಯ ವಿಚಾರದಲ್ಲಿ ರೈಜು ಹಿಂಸೆ ನೀಡುತ್ತಿದ್ದ ಎಂದು ಹೇಳಲಾಗಿದೆ. […]

ಪಣಂಬೂರು : ಅಪಹರಣ ಪ್ರಕರಣ; 4 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Tuesday, September 17th, 2019
Sandesh

ಮಂಗಳೂರು : ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿಶ್ವನಾಥ ಪಂಡಿತ್ ಎಂಬುವರ ಅಪಹರಣ ಪ್ರಕರಣದಲ್ಲಿ ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಬಪ್ಪನಾಡು ನಿವಾಸಿ ಸಂದೇಶ್ ಪುತ್ರನ್ (40) ಬಂಧಿತ ಆರೋಪಿ. ಆರೋಪಿ ವಿರುದ್ಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ವಿಶ್ವನಾಥ ಪಂಡಿತ್ ಎಂಬುವರ ಅಪಹರಣ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದ ಆರೋಪಿ ಬಳಿಕ ವಿವಿಧ ಕಡೆ ವಾಸ್ತವ್ಯ ಬದಲಿಸುತ್ತಾ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಈತನ ವಿರುದ್ಧ ಬಂಧನ ವಾರಂಟ್ […]

ಮತ್ತೆ ದುಷ್ಕೃತ್ಯ…ಮೂವರು ಯುವಕರ ಮೇಲೆ ತಲ್ವಾರ್‌ನಿಂದ ಹಲ್ಲೆ

Monday, April 9th, 2018
murdered

ಮಂಗಳೂರು: ಮೂವರ ಯುವಕರ ಮೇಲೆ ಅಪರಿಚಿತರ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ನಿನ್ನೆ ತಡರಾತ್ರಿ ಇಲ್ಲಿಯ ಬೆಂಗ್ರೆ ಫುಟ್ಬಾಲ್ ಮೈದಾನ ಬಳಿ ಈ ಘಟನೆ ನಡೆದಿದೆ. ಕಸಬ ಬೆಂಗ್ರೆಯ ಅನ್ವೀಝ್, ಸಿರಾಜ್ ಹಾಗೂ ಇಝಾದ್ ಎಂಬುವರ ಮೇಲೆ ತಲವಾರ್‌ನಿಂದ ದಾಳಿ ನಡೆದಿದೆ. ಘಟನೆಯಲ್ಲಿ ಇವರು ಗಾಯಗೊಂಡಿದ್ದಾರೆ. ಕಸಬ ಬೆಂಗ್ರೆಯಿಂದ ತಣ್ಣೀರುಬಾವಿಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಘಟನೆ ಕುರಿತು ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಣಂಬೂರು ಕಡಲ ಕಿನಾರೆ: ಮೀನು ಹಿಡಿಯುವ ಸ್ಪರ್ಧೆ

Monday, December 25th, 2017
panambur

ಮಂಗಳೂರು: ಇಲ್ಲಿನ ಕಡಲ ಕಿನಾರೆಯಲ್ಲಿ ರವಿವಾರ ಗಾಳ ಹಾಕಿ ಮೀನು ಹಿಡಿಯುವ ಸ್ಪರ್ಧೆ ನಡೆಯಿತು. ದೇಶ-ವಿದೇಶಗಳ ಆ್ಯಂಗ್ಲಿಂಗ್‌ ಪ್ರಿಯರು ಬೃಹತ್‌ ಮೀನುಗಳ ನಿರೀಕ್ಷೆಯಲ್ಲಿ ಗಾಳ ಹಿಡಿದು ಬಂಡೆ ಕಲ್ಲಿನ ಮೇಲೆ ನಿಂತಿದ್ದ ದೃಶ್ಯ ಕಂಡು ಬಂತು. ಮಲೇಶ್ಯ, ಓಮಾನ್‌, ಕೇರಳ, ದ.ಕ.,ಉಡುಪಿ ಮತ್ತಿತರ ಕಡೆಗಳಿಂದ ಬಂದ 60ಕ್ಕೂ ಮಿಕ್ಕಿ ಆ್ಯಂಗ್ಲಿಂಗ್‌ ಪ್ರಿಯರು ಗಾಳ ಹಾಕಿ ಮೀನು ಹಿಡಿಯಲು ಆಗಮಿಸಿದ್ದರು. ಮುಂಜಾನೆ ಉಡುಪಿಯ ಮೊಹಮ್ಮದ್‌ ಆಸೀಫ್‌ ಗಾಳಕ್ಕೆ ಸುಮಾರು 11.76 ಕೆ.ಜಿ. ಗಾತ್ರದ ಕ್ವೀನ್‌ ಫಿಶ್‌ ಲಭಿಸಿತು. ಮಲೇಶ್ಯಾದ […]

ಒಂದೇ ಹೆಸರು… ಕೊಲೆ ಕೇಸ್‌ನಲ್ಲಿ ಇನ್ಯಾರನ್ನೋ ಬಂಧಿಸಿ ಪೇಚಿಗೆ ಸಿಲುಕಿದ ಪೊಲೀಸ್ರು

Friday, December 22nd, 2017
arrested

ಮಂಗಳೂರು: ಪಣಂಬೂರು ಪೊಲೀಸರ ಎಡವಟ್ಟಿನಿಂದಾಗಿ ಅಮಾಯಕ ಯುವಕನ ವಿರುದ್ಧ ಲುಕೌಟ್ ನೋಟಿಸ್ ಜಾರಿಯಾಗಿ, ಗುರುವಾರ ಆ ವ್ಯಕ್ತಿ ವಿದೇಶದಿಂದ ಆಗಮಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಬೇಕಾದ ಪ್ರಸಂಗ ನಡೆಯಿತು. ಕುಳಾಯಿ ವಿದ್ಯಾನಗರ ನಿವಾಸಿ ಮೊಹಮ್ಮದ್ ಅಶ್ಫಕ್ ಪೊಲೀಸರ ವಿಚಾರಣೆಗೆ ಒಳಪಟ್ಟವರು. ಅಶ್ಫಕ್‌ ವಿದೇಶದಿಂದ ಆಗಮಿಸುತ್ತಿದ್ದ ಸಂದರ್ಭದಲ್ಲಿ ಠಾಣೆಯಲ್ಲಿ ವಿಚಾರಣೆ ನಡೆಸಿದರು. ನಂತರ ಹೇಳಿಕೆ ಪಡೆದು ಆತನನ್ನು ಬಿಡುಗಡೆಗೊಳಿಸಿ ಮನೆಯವರೆಗೆ ತಲುಪಿಸಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಪೊಲೀಸರು ಮಾಡಿದ ಪ್ರಮಾದಕ್ಕೆ ಅಶ್ಫಕ್‌ ಅವಮಾನ ಎದುರಿಸುವಂತಾಯಿತು ಎಂಬ ಮಾತು […]

ಪಣಂಬೂರು : ಪ್ರವಾಸಿಗರನ್ನು ರಕ್ಷಿಸಿದ ಜೀವ ರಕ್ಷಕ ಪಡೆಯ ಸಿಬ್ಬಂದಿ .

Monday, October 2nd, 2017
panamburu

ಮಂಗಳೂರು: ಪಣಂಬೂರು ಬೀಚ್‌ನಲ್ಲಿ ನೀರಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರನ್ನು ಬೀಚ್‌ನಲ್ಲಿರುವ ಜೀವ ರಕ್ಷಕ ಪಡೆಯ ಸಿಬ್ಬಂದಿ ರಕ್ಷಿಸಿದ್ದಾರೆ. ಬೆಂಗಳೂರು ದಾಸರ ಹಳ್ಳಿಯ 8ನೇ ಕ್ರಾಸ್‌ನ ಮೆಕ್ಯಾನಿಕ್‌ಗಳಾದ ಸಾದಿಕ್ (21), ನರಸಿಂಹ ಮೂರ್ತಿ (19) ಎಂಬುವವರನ್ನು ರಕ್ಷಣೆ ಮಾಡಲಾಗಿದೆ . ಬೆಂಗಳೂರಿನ ದಾಸರಹಳ್ಳಿಯ 8 ನೇ ಕ್ರಾಸ್‌ ನಿವಾಸಿಗಳಾದ ಇವರು ಮಂಗಳೂರಿಗೆ ಪ್ರವಾಸಕ್ಕಾಗಿ ಬಂದಿದ್ದರು.

ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಬೀಚ್ ಉತ್ಸವ

Saturday, December 31st, 2016
Beach-festival-

ಮಂಗಳೂರು: ಪಣಂಬೂರು ಕಡಲ ತೀರದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಹಮ್ಮಿಕೊಂಡ ಮೂರು ದಿನಗಳ ಬೀಚ್ ಉತ್ಸವವನ್ನು ಮಂಗಳೂರು ಸಹಾಯಕ ಕಮೀಶನರ್ ರೇಣುಕಾ ಪ್ರಸಾದ್ ಗಾಳಿ ಪಟ ಹಾರಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲೆಯಲ್ಲಿ ಕರಾವಳಿ ಉತ್ಸವ ನಡೆಯುತ್ತಿದ್ದು, ಇದರ ಜೊತೆಗೆ ನಿನ್ನೆ ಬೀಚ್ ಉತ್ಸವಕ್ಕೆ ಚಾಲನೆ ದೊರೆತಿದೆ. ಜ.1ರವರೆಗೆ ಮೂರು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳೊಂದಿಗೆ ಬೀಚ್ ಉತ್ಸವ ನಡೆಯಲಿದೆ. ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಬೀಚ್ ವಾಲಿಬಾಲ್, ನೃತ್ಯ, ಸ್ಕೇಟಿಂಗ್, ಬೀಚ್ ತ್ರೋಬಾಲ್, ಯೋಗ, ಉದಯ […]

ಪಣಂಬೂರು ಮೀನಕಳೀಯದಲ್ಲಿ ವಿವಾಹಿತೆ ಮಹಿಳೆಯ ಕೊಲೆ

Tuesday, January 13th, 2015
meenakaliya murder

ಮಂಗಳೂರು : ವಿವಾಹಿತೆ ಮಹಿಳೆಯೊಬ್ಬರನ್ನು ಬಚ್ಚಲು ಮನೆಯಲ್ಲಿ ಬರ್ಬರವಾಗಿ ಹತ್ಯೆಮಾಡಲಾಗಿದ್ದು ಮೃತಳನ್ನು ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕೆ ಕಲ್ಪನ(25) ಎಂದು ಗುರುತಿಸಲಾಗಿದೆ. ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೀನಕಳೀಯ ಎಂಬಲ್ಲಿ ಈ ಘಟನೆ ನಡೆದಿದೆ. ಸೋಮವಾರ ರಾತ್ರಿ ಪಾಳಿಯಲ್ಲಿ ಗಂಡ ಕೆಲಸಕ್ಕೆ ಹೋಗಿದ್ದು ಮಂಗಳವಾರ ಬೆಳಗ್ಗೆ ಮನೆಗೆ ವಾಪಾಸು ಬಂದಾಗ ಕೊಲೆ ಕೃತ್ಯ ಬಯಲಾಗಿದೆ. ಆಕೆಯ ತಲೆಗೆ ಕಲ್ಲನ್ನು ಎತ್ತಿ ಹಾಕಿ ಈ ಕೃತ್ಯ ನಡೆಸಲಾಗಿದೆ. ರಾಜೇಶ್ ಮತ್ತು ಕಲ್ಪನ ಉತ್ತರ ಪ್ರದೆಶ ಮೂಲದಾವರಾಗಿದ್ದು, ಕೆಲ […]

ಸಿಐಎಸ್‍ಎಫ್ ಸಿಬ್ಬಂದಿ ಗುಂಡು ಹಾರಿಸಿ ಆತ್ಮಹತ್ಯೆ

Monday, February 24th, 2014
Sandeep-Sarkate

ಸುರತ್ಕಲ್ : ಸಿಐಎಸ್‍ಎಫ್ ಸಿಬ್ಬಂದಿಯೊಬ್ಬ ತನ್ನ ಸರ್ವಿಸ್ ರೈಫಲ್‍ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ತಡರಾತ್ರಿ ಪಣಂಬೂರು ಸಿಐಎಸ್‍ಎಫ್ ಕ್ಯಾಂಪ್‍ನಲ್ಲಿ ಸಂಭವಿಸಿದೆ. ಮಹಾರಾಷ್ಟ್ರ ನಿವಾಸಿ ಸಂದೀಪ್ ಸರ್ಕಟೆ (26) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಕೇವಲ ಎರಡು ವರುಷದ ಹಿಂದೆಯಷ್ಟೇ ಸಿಐಎಸ್‍ಎಫ್‍ಗೆ ಸೇರ್ಪಡೆಗೊಂಡಿದ್ದ ಸಂದೀಪ್ ಆರಂಭದಿಂದಲೂ ಪಣಂಬೂರು ವಿಭಾಗದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದರು. ಶುಕ್ರವಾರ ಇವರು ರಾತ್ರಿ ಪಾಳಿಯ ಕೆಲಸವನ್ನು ನಿರ್ವಹಿಸುತ್ತಿದ್ದು ತಡರಾತ್ರಿ 1.20ರ ಸುಮಾರಿಗೆ ತಮ್ಮ ಕಚೇರಿಯ ಹಿಂಭಾಗಕ್ಕೆ ತೆರಳಿ ಸರ್ವಿಸ್ ರೈಫಲ್‍ನಿಂದ ತಲೆಗೆ ಗುಂಡು […]