ಶೋಭಾ ಕರಂದ್ಲಾಜೆಯ ಪ್ರಜಾಪ್ರಭುತ್ವದ ಸದಸ್ಯತ್ವದಿಂದ ರದ್ದು ಮಾಡಬೇಕು : ಐವನ್ ಡಿ ಸೋಜ

Thursday, May 20th, 2021
ivan

ಮಂಗಳೂರು : ದೇಶದ ಲೋಕಸಭೆಗೆ ಶೋಭಾ ಕರಂದ್ಲಾಜೆಯಂತಹ ಸಂಸದರು ಆಯ್ಕೆಯಾಗಿರುವುದು ಪ್ರಜಾಪ್ರಭುತ್ವದ ಒಂದು ದೊಡ್ಡ ದುರಂತ,  ಇಂತಹವರನ್ನು ಪ್ರಜಾಪ್ರಭುತ್ವದ ಸದಸ್ಯತ್ವದಿಂದ ರದ್ದು ಮಾಡಬೇಕು. ತಮ್ಮ ಸ್ವಾರ್ಥಕ್ಕಾಗಿ ಒಂದು ಸಮುದಾಯವನ್ನೇ ಬಲಿತೆಗೆದುಕೊಂಡು, ಸುಳ್ಳು ಹೇಳಿಕೆಗಳನ್ನು ನೀಡಿರುವುದು ಪ್ರಜಾಪ್ರಭುತ್ವದಲ್ಲಿ ಇದೊಂದು ಕಪ್ಪು ಚುಕ್ಕೆ  ಎಂದು ಐವನ್ ಡಿ ಸೋಜ ತಿಳಿಸಿದರು. ಶೋಭಾ ಕರಂದ್ಲಾಜೆ ಕ್ರೈಸ್ತ ಸಮಾಜಕ್ಕೆ ಅಪಮಾನ ಮಾಡಿರುವುದನ್ನು ಖಂಡಿಸಿ ಕಮಿಷನರಿಗೆ, ಉಪಪೋಲಿಸ್ ಆಯುಕ್ತ(ಡಿಸಿಪಿ)ರಾದ ಹರಿರಾಮ್ ಶಂಕರ್, ಇವರಿಗೆ ದೂರು  ನೀಡಲಾಯಿತು ಮತ್ತು ಕೂಡಲೇ ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಡಿಸಿಪಿಯವರು […]

ವಂಶದ ಹಿತಾಸಕ್ತಿ ಮತ್ತು ಅಭಿವೃದ್ಧಿಯನ್ನು ಬಯಸತಕ್ಕ ಪ್ರಜಾಪ್ರಭುತ್ವ ಇದು ಇಂದಿನ ವಿಪರ್ಯಾಸ : ಸಚಿವ ಸಿ.ಟಿ.ರವಿ

Saturday, February 15th, 2020
ct-ravi

ಮೈಸೂರು : ಮಹಾರಾಜರ ಕಾಲದಲ್ಲಿ ವಂಶಪಾರಂಪರ್ಯ ಅಧಿಕಾರ ಇದ್ದರೂ ಕೂಡ ವಂಶದ ಹಿತಾಸಕ್ತಿಗಾಗಿ ಕೆಲಸ ಮಾಡದ ರಾಜಪ್ರಭುತ್ವ. ಈಗ ಪ್ರಜಾಪ್ರಭುತ್ವದ ಒಳಗೇನೇ ವಂಶದ ಹಿತಾಸಕ್ತಿ ಮತ್ತು ವಂಶದ ಅಭಿವೃದ್ಧಿಯನ್ನು ಬಯಸತಕ್ಕ ಪ್ರಜಾಪ್ರಭುತ್ವ ಇದು ಇಂದಿನ ವಿಪರ್ಯಾಸ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ವಿಷಾದ ವ್ಯಕ್ತಪಡಿಸಿದರು. ಅವರಿಂದು ಮೈಸೂರು ಸರಸ್ವತಿಪುರಂದಲ್ಲಿರುವ ಜೆಎಸ್ ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ಜಗದ್ಗುರು ಶ್ರೀವೀರ ಸಿಂಹಾಸನ ಮಹಾಸಂಸ್ಥಾನ ಮಠ, ಸುತ್ತೂರು ಶ್ರೀಕ್ಷೇತ್ರ ಮತ್ತು ಜಗದ್ಗುರು ಶ್ರೀಶಿವರಾತ್ರೀಶ್ವರ ಮಹಾವಿದ್ಯಾಪೀಠ […]

ಅಮಿತ್ ಶಾ, ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್​ನಿಂದ ಬೃಹತ್​ ಪ್ರತಿಭಟನೆ

Tuesday, November 5th, 2019
Pratibhatane

ಬೆಂಗಳೂರು: ವೈರಲ್ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿಡಿಯೋ ಸಂಭಾಷಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಭಾಗಿಯಾಗಿದ್ದಾರೆ. ಇಬ್ಬರೂ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಎಂ.ಜಿ. ರಸ್ತೆಯ ಟ್ರಿನಿಟಿ ವೃತ್ತದ ವಿಜಯ ಬ್ಯಾಂಕ್ ಜಂಕ್ಷನ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ನ ವಿವಿಧ ನಾಯಕರು ಭಾಗಿಯಾಗಿದ್ದರು. ಅಮಿತ್ ಶಾ ಹಾಗೂ ಬಿ.ಎಸ್.ಯಡಿಯೂರಪ್ಪ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. […]

ಪ್ರಜಾಪ್ರಭುತ್ವ ಎನ್ನುವುದು ಮೊದಲು ನಮ್ಮಲ್ಲಿ, ನಮ್ಮ ಮನೆಯಲ್ಲಿ ಇರಬೇಕು : ಕನ್ಹಯ್ಯ ಕುಮಾರ್

Monday, August 12th, 2019
BVK

ಮಂಗಳೂರು : “ಪ್ರಜಾಪ್ರಭುತ್ವ ಹಾಗೂ ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ದೇಶದ್ರೋಹ” ಎಂದು ಜೆಎನ್ ಯು ವಿದ್ಯಾರ್ಥಿ ಸಂಘ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಮಂಗಳೂರಿನಲ್ಲಿ ಆಯೋಜಿಸಿದ್ದ ಬಿ.ವಿ.ಕಕ್ಕಿಲ್ಲಾಯ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಶನಿವಾರ ಅವರು ಮಾತನಾಡಿದರು. “ಕವಲು ದಾರಿಯಲ್ಲಿ ಭಾರತದ ಯುವಜನರು” ಎಂಬ ವಿಷಯದ ಕುರಿತು ಮಾತನಾಡಿದ ಕನ್ಹಯ್ಯ ಕುಮಾರ್, “ದೇಶದ ಮೇಲೆ ಪ್ರೀತಿ ಇದ್ದರೆ ಅಶಕ್ತರಲ್ಲಿ ಪ್ರಶ್ನೆ ಎತ್ತುವುದಲ್ಲ, ಬದಲಾಗಿ ಬಲಾಢ್ಯರಲ್ಲಿ ಪ್ರಶ್ನೆ ಎತ್ತಬೇಕಿದೆ. ಪ್ರಜಾಪ್ರಭುತ್ವ ಎನ್ನುವುದು ಮೊದಲು ನಮ್ಮಲ್ಲಿ, ನಮ್ಮ […]

ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಪತ್ರಕರ್ತರ ಪಾತ್ರ ಹಿರಿದು- ಪಿ.ಬಿ.ಆಚಾರ್ಯ

Monday, July 1st, 2019
DKWJU

ಮಂಗಳೂರು: ಪ್ರಜಾಪ್ರಭುತ್ವ ಬಲಗೊಳಿಸುವಲ್ಲಿ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪತ್ರಕರ್ತರ ಪಾತ್ರ ಬಲು ಹಿರಿದಾದುದು ಎಂದು ನಾಗಾಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಮಾಜಿಕ ಮತ್ತು ಶೈಕ್ಷಣಿಕ ಕೊಡುಗೆ ನೀಡುವ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಬಲು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. […]

ಜೆಡಿಎಸ್ ಪ್ರಜಾ ವಿರೋಧಿ ಪ್ರಜಾಪ್ರಭುತ್ವ ಎಷ್ಟು ಸರಿ?

Monday, May 21st, 2018
kumara swamy

ಮಂಗಳೂರು : ಕೇವಲ 37 ಸೀಟುಗಳನ್ನು ಗೆದ್ದುಕೊಂಡಿರುವ ಜೆಡಿಯಸ್, ಕಾಂಗ್ರೆಸ್ಸ್ ಬೆಂಬಲಕೊಡುತ್ತೇನೆ ಎಂದ ಮಾತ್ರಕ್ಕೆ ರಾಜ್ಯಭಾರಮಾಡವುದುದು ಎಷ್ಟು ಸರಿ. ಅಷ್ಷಕ್ಕೂ ಕಾಂಗ್ರೆಸ್ಸ್‌ಗಾಗಲಿ, ಜೆಡಿಯಸ್‌ಗಾಗಲೀ ಮತದಾರರು ಸ್ಪಷ್ಟ ಬಹುಮತ ನೀಡಿಲ್ಲ. ಚುನಾವಣಾ ಪೂರ್ವ ಮೈತ್ರಿಯಂತೂ ಮಾಡಿಕೊಂಡೇ ಇರಲಿಲ್ಲಿ. ಈಗ ನಡೆಯುತ್ತಿರುವುದು ಮತದಾರರಿಗೆ ಒಪ್ಪಿಗೆ ಇಲ್ಲದೆ ಎರಡು ಪಕ್ಷಗಳು ಸೇರಿ ಅಧಿಕಾರಕ್ಕಾಗಿ ಮಾಡುತ್ತಿರುವ ಪ್ರಜಾ ವಿರೋಧಿ ಕೆಲಸ ಎಂಬುದು ಜನತೆಗೆ ಸ್ಪಷ್ಟವಾಗಿದೆ. ಸಿದ್ದರಾಮಯ್ಯ 1999 ರಲ್ಲಿ  ದೇವೆಗೌಡರ ಜ್ಯಾತ್ಯಾತೀತ ಜನತಾದಳ ಪಕ್ಷಕ್ಕೆ ಸೇರಿ ಆ  ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. 2004 ರಲ್ಲಿ ಕಾಂಗ್ರೆಸ್-ಜೆಡಿಎಸ್ […]

ಮತದಾರರ ಕೈಯಲ್ಲಿ ದೇಶದ ಭವಿಷ್ಯ

Monday, April 11th, 2016
Kerala Vote

ಕಾಸರಗೋಡು : ನಾಡಿನ ಭವಿಷ್ಯ ತಮ್ಮ ಕೈಯ್ಯಲಿದೆ ಎಂಬುದನ್ನು ಮತದಾರರು ತಿಳಿದಿರಬೇಕು ಎಂದು ಖ್ಯಾತ ಸಾಹಿತಿ ಡಾ.ಅಂಬಿಕಾಸುತನ್ ಮಾಂಙಾಡ್ ಹೇಳಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಕಾಸರಗೋಡು ಹೊಸ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾದ ಮತದಾರರಿಗಿರುವ ತಿಳುವಳಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಅಧಿಕಾರವಿದ್ದು , ಅದರ ಸ್ಪಷ್ಟ ಅರಿವು ನಮಗಿರಬೇಕೆಂದು ಅವರು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಪಾಲ್ಗೊಂಡಿದ್ದ ಪ್ರತಿಯೊಬ್ಬರೂ ‘ತಾನು ಮತ ಚಲಾಯಿಸಿ ತನ್ನ ಕರ್ತವ್ಯವನ್ನು ಪಾಲಿಸುತ್ತೇನೆ’ […]

ಹಿಂದುಗಳು ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ : ಸಿಪಿಐ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್

Monday, October 28th, 2013
ಹಿಂದುಗಳು ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ : ಸಿಪಿಐ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್

ಮಂಗಳೂರು : ದೇಶದಲ್ಲಿ ಪ್ರಜಾಪ್ರಭುತ್ವವೆಂದರೆ ಬಹುಸಂಖ್ಯಾತರ ಆಳ್ವಿಕೆ ಎಂದಾಗಿದೆ. ಬಹುಸಂಖ್ಯಾತ ರಾಗಿರುವ ಕೋಮುವಾದಿ ಹಿಂದುಗಳು ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿದ್ದಾರೆ. ಬಿಜೆಪಿ ಹಾಗೂ ಆರ್‍ಎಸ್‍ಎಸ್ ಸಂಘಟನೆಗಳು ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವಲ್ಲಿ ತೊಡಗಿರುವುದಾಗಿ ಸಿಪಿಐ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಆರೋಪಿಸಿದರು. ನಗರದಲ್ಲಿ ನಡೆದ ದ.ಕ ಜಿಲ್ಲಾ ಮಟ್ಟದ ಮುಸ್ಲಿಂ ಸಮುದಾಯದ ಹಕ್ಕೊತ್ತಾಯ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ. ಆರ್‍ಎಸ್‍ಎಸ್‍ನಂ ತಹ ಕೋಮುವಾದಿ ಹಿಂದುತ್ವ […]