ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಮಹಾರಾಷ್ಟ್ರ ನೀರಾವರಿ ಸಚಿವ

Friday, August 6th, 2021
Maharastra

ಬೆಂಗಳೂರು : ಮಹಾರಾಷ್ಟ್ರ ರಾಜ್ಯದ ನೀರಾವರಿ ಸಚಿವ ಜಯಂತ್ ಪಾಟೀಲ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವನ್ನು ಭೇಟಿಯಾಗಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ಸಭೆಯ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಎರಡೂ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ, ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡುವ ಕುರಿತು ಚರ್ಚಿಸಲಾಯಿತು. ಉಭಯ ರಾಜ್ಯಗಳ ಜಂಟಿ ಯೋಜನೆಯಾದ ದೂದ್ ಗಂಗಾ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಯ ೩ ನೇ ಹಂತದ ಬಗ್ಗೆಯೂ ವಿಷದವಾಗಿ ಚರ್ಚಿಸಲಾಗಿತು. ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ […]

ಹಂತ ಹಂತವಾಗಿ ನೀರು ಬಿಡುಗಡೆ ಮಹಾರಾಷ್ಟ್ರ ಸಮ್ಮತಿ : ಕಾರಜೋಳ

Wednesday, June 23rd, 2021
Karajola

ಚಿಕ್ಕೋಡಿ : ಜಲಾಶಯ ಸಂಪೂರ್ಣ ಭರ್ತಿಯಾದಾಗ ಒಮ್ಮೆಲೆ ನೀರು ಬಿಡುಗಡೆ ಮಾಡಿದರೆ ತೊಂದರೆಯಾಗುತ್ತದೆ. ಆದ್ದರಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಇದಕ್ಕೆ ಅವರು ಕೂಡ ಒಪ್ಪಿಕೊಂಡಿದ್ದಾರೆ ಎಂದು ಉಪ ಮುಖ್ಯಮಂತ್ರಿ‌  ಗೋವಿಂದ ಕಾರಜೋಳ ತಿಳಿಸಿದರು. ಹಂತ ಹಂತವಾಗಿ ನೀರು‌ ಬಿಡುಗಡೆಗೆ ಮಹಾರಾಷ್ಟ್ರ ಸರಕಾರ ಕೂಡ ಸಹಮತ ವ್ಯಕ್ತಪಡಿಸಿದೆ. ಪ್ರವಾಹ ಪರಿಸ್ಥಿತಿ ಉದ್ಭವಿಸಿದರೆ ನದಿತೀರದ ಜನರು ಹಾಗೂ ಜಾನುವಾರುಗಳ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಹ ಬಂದಾಗ ಸಂಪೂರ್ಣ ಜಲಾವೃತವಾಗುವ […]

ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತರರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆ

Sunday, June 20th, 2021
Inter-state-flood

ಬೆಂಗಳೂರು  : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತರರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆ ನಡೆಸಿದರು. ಮಹಾರಾಷ್ಟ್ರ ರಾಜ್ಯದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್, ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯ ಸರ್ಕಾರಗಳ […]

ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಪ್ರಾರಂಭದ ಸೂಚನೆ

Tuesday, March 16th, 2021
Maharastra

ನವದೆಹಲಿ:  ಮಹಾಮಾರಿ ಕೊರೋನಾ ವೈರಸ್ ಎರಡನೇ ಅಲೆ ಮಹಾರಾಷ್ಟ್ರದಲ್ಲಿ ಮತ್ತೆ ಪ್ರಾರಂಭ ವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಎಚ್ಚರಿಸಿದೆ. ದೇಶದಲ್ಲಿ ಇಂದು ಸತತ 6ನೇ ದಿನವೂ 20,000ಕ್ಕೂ ಹೆಚ್ಚು ಕರೋನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಟ್ಟುನಿಟ್ಟಾದ ನಿಯಂತ್ರಣ ತಂತ್ರಗಳತ್ತ ಗಮನಹರಿಸುವಂತೆ ಕೇಂದ್ರ ಸರ್ಕಾರ ಅತಿ ಹೆಚ್ಚು ಕೊರೋನಾ ಪೀಡಿತ ಮಹಾರಾಷ್ಟ್ರಕ್ಕೆ ಸೂಚಿಸಿದೆ. ದೇಶದಲ್ಲಿ ಮಂಗಳವಾರ 24,492 ಹೊಸ ಕೋವಿಡ್ -19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 1.14 ಕೋಟಿಗೆ ತಲುಪಿದೆ ಎಂದು ಕೇಂದ್ರ ಆರೋಗ್ಯ […]

ಮುಂದೆ ಒಂದು ದಿನ ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿ ಭಾರತದ ಭಾಗವಾಗಲಿದೆ : ಫಡ್ನವೀಸ್

Saturday, November 21st, 2020
Devendra-Fadnavis

ಮುಂಬೈ: ಮುಂದೆ ಒಂದಲ್ಲ ಒಂದು ದಿನ  ಪಾಕಿಸ್ತಾನದ ಅತಿದೊಡ್ಡ ನಗರ ಕರಾಚಿ ಭಾರತದ ಭಾಗವಾಗಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದರು. ಮುಂಬೈನಲ್ಲಿ ನಡೆದ ಘಟನೆಯ ಬಗ್ಗೆ ಮಾತನಾಡುತ್ತಾ ಫಡ್ನವೀಸ್ ಈ ಹೇಳಿಕೆ ನೀಡಿದ್ದಾರೆ. ಆಡಳಿತಾರೂಢ ಶಿವಸೇನಾ ಕಾರ್ಯಕರ್ತರೊಬ್ಬರು ಸಿಹಿ ತಿನಿಸಿನ ಅಂಗಡಿಯೊಂದರ ಮಾಲೀಕರಿಗೆ ‘ಕರಾಚಿ’ ಎಂಬ ಪದವನ್ನು ಅಂಗಡಿಯ ಹೆಸರಿನಿಂದ ಕೈಬಿಡುವಂತೆ ಕೋರಿದ್ದರು, ಕಾರಣ ಕರಾಚಿ ಪಾಕಿಸ್ತಾನದ ನಗರಒಂದರ ಹೆಸರಾಗಿದೆ. ಈ ಬಗ್ಗೆ ಪ್ರತಿಕ್ರಯಿಸಿರುವ ಮಹಾ ಮಾಜಿ ಸಿಎಂ”ನಾವು” ಅಖಂಡ ಭಾರತ”(ಅವಿಭಜಿತ ಭಾರತ) […]

ಮುಂದೆ ಗಲಾಟೆ ನಡೆಯುತ್ತಿದೆ ಎಂದು ಚಿನ್ನಾಭರಣ ದರೋಡೆ ಮಾಡುತ್ತಿದ್ದ ನಾಲ್ವರ ಬಂಧನ

Thursday, October 22nd, 2020
chain snatchers

ಉಡುಪಿ : ಉಡುಪಿ ಡಿಸಿಐಬಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜಪ್ಪ ಡಿ.ಆರ್. ನೇತೃತ್ವದಲ್ಲಿ  ನಾಲ್ವರು ಅಂತರ್ ‌ರಾಜ್ಯ ಸರ ಕಳವು ಆರೋಪಿಗಳನ್ನು ಪೊಲೀಸರು ಉಡುಪಿ ಶ್ರೀಕೃಷ್ಣ ಮಠ ಪಾರ್ಕಿಂಗ್ ಸ್ಥಳದ ಬಳಿ ಬಂಧಿಸಿದ್ದಾರೆ. ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ವಯಸ್ಸಾದ ಒಂಟಿ ಹೆಂಗಸರು ಹಾಗೂ ಗಂಡಸರನ್ನು ನಯವಾದ ಮಾತುಗಳಿಂದ ವಂಚಿಸಿ ಚಿನ್ನಾಭರಣಗಳನ್ನು ಆರೋಪಿಗಳು ಕಳವು ಮಾಡುತಿದ್ದರು. ಬಂಧಿತರನ್ನು ಇರಾನಿ ಗ್ಯಾಂಗ್‌ಗೆ ಸೇರಿದ ಅಂತಾರಾಜ್ಯ ವಂಚಕರಾದ ಮಹಾರಾಷ್ಟ್ರ ರಾಜ್ಯದ ಅಹ್ಮದ್‌ನಗರ ಜಿಲ್ಲೆ ಶ್ರೀರಾಮಪುರದ ಝಾಕಿರ್ ಹುಸೈನ್ (26), ಕಂಬರ್ ರಹೀಮ್ […]

ಉಡುಪಿ ಜಿಲ್ಲೆಯಲ್ಲಿ ಸೋಮವಾರ 73 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ

Monday, June 1st, 2020
udupi-corona

ಉಡುಪಿ : ಸೋಮವಾರ  ಉಡುಪಿ ಜಿಲ್ಲೆಯಲ್ಲಿ 73 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಪೈಕಿ ಹೆಚ್ಚಿನವರು ಮಹಾರಾಷ್ಟ್ರದಿಂದ ಮರಳಿದವರಾಗಿದ್ದಾರೆ. ಸುಮಾರು 37 ಸೋಂಕಿತರ ಮೂಲ ಪತ್ತೆಯಾಗಿಲ್ಲ, ಕೆಲವು ಪ್ರಕರಣಗಳ ಮೂಲ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಆರೋಗ್ಯ ಇಲಾಖೆ ಅವರ ಸೋಂಕಿನ ಮೂಲ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ. ಇನ್ನು 33 ಮಂದಿ ಮಹಾರಾಷ್ಟ್ರದಿಂದ ಆಗಮಿಸಿದವರಲ್ಲಿ ಪಾಸಿಟಿವ್ ಕಂಡುಬಂದಿದೆ. ಮೂವರು ದುಬೈನಿಂದ ಬಂದವರಾಗಿದ್ದಾರೆ

ಕಾಸರಗೋಡಿನಲ್ಲಿ ಭಾನುವಾರ ಹತ್ತು ಮಂದಿಗೆ ಕೋವಿಡ್ ಪಾಸಿಟಿವ್, 3691 ಮಂದಿ ಮೇಲೆ ನಿಗಾ

Sunday, May 31st, 2020
kerala-corona

ಕಾಸರಗೋಡು :  ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಭಾನುವಾರ  ಮಹಾರಾಷ್ಟ್ರದಿಂದ ಬಂದ ಹತ್ತು ಮಂದಿಗೆ  ಕೋವಿಡ್ ದ್ರಢಪಟ್ಟಿದೆ. ಮಂಗಲ್ಪಾಡಿ ನಾಲ್ಕು, ಪೈವಳಿಕೆ, ಮಧೂರು ತಲಾ ಎರಡು, ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್, ಕಾಸರಗೋಡು ನಗರಸಭಾ ವ್ಯಾಪ್ತಿಯಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ಮೊಗ್ರಾಲ್ ಪುತ್ತೂರು ನಿವಾಸಿ 59 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿಗಳಾದ 43, 40 ವರ್ಷದ ವ್ಯಕ್ತಿಗಳು, ಕಾಸರಗೋಡು ನಗರಸಭೆ ನಿವಾಸಿ 30 ವರ್ಷದ ವ್ಯಕ್ತಿ, ಮಂಗಲ್ಪಾಡಿ ನಿವಾಸಿಗಳಾದ 64, 27, 23, 51 ವರ್ಷದ […]

ದ.ಕ. ಜಿಲ್ಲೆಯಲ್ಲಿ ರವಿವಾರದಂದು 14 ಮಂದಿಯಲ್ಲಿ ಕೊರೊನಾ ಪತ್ತೆ, ಒಂದೇ ದಿನ 12 ಮಂದಿ ಬಿಡುಗಡೆ

Sunday, May 31st, 2020
Dk corona

ಮಂಗಳೂರು : ದ.ಕ. ಜಿಲ್ಲೆಯಲ್ಲಿ ರವಿವಾರದಂದು 14 ಮಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಜೊತೆಗೆ  ಒಂದೇ ದಿನ 12 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿತರ ಪೈಕಿ 9 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಒಬ್ಬರು ದುಬೈನಿಂದ ಬಂದಿದ್ದು, ಮತ್ತೊಬ್ಬರು ಮಲೇಶ್ಯಾದಿಂದ ಮರಳಿದವರಾಗಿದ್ದಾರೆ. ಇನ್ನು ಮೂರು ಮಂದಿ ಮಹಾರಾಷ್ಟ್ರದಿಂದ ಮರಳಿದವರಲ್ಲಿ ಸೋಂಕು ಪತ್ತೆಯಾಗಿದೆ. 3 ಹಾಗೂ 11 ವರ್ಷದ ಬಾಲಕಿಯರು, 71 ಹಾಗೂ 76 ವರ್ಷದ ವ್ಯಕ್ತಿಗಳು ಕೂಡ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನುಳಿದಂತೆ 69, 41, 36 ವರ್ಷದ […]

ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 164ಕ್ಕೆ ಎರಿಕೆ, ಶುಕ್ರವಾರ 15 ಹೊಸ ಸೋಂಕು ಪ್ರಕರಣ ಪತ್ತೆ

Friday, May 29th, 2020
Udupi-covid

ಉಡುಪಿ: ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 164ಕ್ಕೆ ಎರಿಕೆಯಾಗಿದ್ದು, ಶುಕ್ರವಾರ 15 ಹೊಸ ಸೋಂಕು ಪ್ರಕರಣಗಳು ದೃಢವಾಗಿದೆ. ಸೋಂಕಿತರಲ್ಲಿ ಇಬ್ಬರು ಹತ್ತು ವರ್ಷಕ್ಕಿಂದ ಕಡಿಮೆ ವಯಸ್ಸಿನ ಮಕ್ಕಳಾಗಿದ್ದರೆ, ಇಬ್ಬರು 60 ವರ್ಷಕ್ಕಿಂದ ಮೇಲ್ಪಟ್ಟ ವೃದ್ಧರೂ ಸೇರಿದ್ದಾರೆ. ಇಂದಿನ ಎಲ್ಲಾ 14 ಪ್ರಕರಣಗಳೂ ಕೂಡಾ ಮಹಾರಾಷ್ಟ್ರದಿಂದ ಬಂದವರಿಂದಲೇ ವರದಿಯಾಗಿದೆ. ಇವರೆಲ್ಲರನ್ನೂ ನಿಗಧಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಇವರಲ್ಲಿ ಗ್ರೀನ್ ಜೋನ್ ನಲ್ಲಿದ್ದ ಜಿಲ್ಲೆಗೆ ಮಹಾರಾಷ್ಟ್ರದಿಂದ ಬರುತ್ತಿರುವವರಿಂದ ಸೋಂಕು ಪ್ರಕರಣ ಹೆಚ್ಚುತ್ತಿದೆ. ಕೇರಳ, ತೆಲಂಗಾಣ ಪ್ರಯಾಣಿಕರಲ್ಲೂ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದು, ಆದರೆ ಮಹಾರಾಷ್ಟ್ರದ […]