ಆರೋಗ್ಯ ಸಚಿವ ಬಿ. ಶ್ರೀರಾಮುಲು ಗೆ ಮಾತೃ ವಿಯೋಗ

Friday, August 21st, 2020
Ramulu mother

ಬಳ್ಳಾರಿ: ಕೋವಿಡ್ ಸೋಂಕಿಗೆ ತುತ್ತಾಗಿ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿ ಬಳ್ಳಾರಿಯ ಮನೆಗೆ ಹಿಂದಿರುಗಿ ದ  ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ತಾಯಿ ಹೊನ್ನೂರಮ್ಮ (95) ಬುಧವಾರ ತಡರಾತ್ರಿ ವಯೋಸಹಜ ಕಾರಣದಿಂದ ನಿಧನರಾದರು. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ಬಳಿಕ ಬಳ್ಲಾರಿಯ ತಮ್ಮ ನಿವಾಸಕ್ಕೆ ತೆರಳಿದ್ದರು. ತಾಯಿಯ ನಿಧನದ ಬಗೆಗೆ ಸಚಿವ ಶ್ರೀರಾಮುಕು ಟ್ವೀಟ್ ಮಾಡಿದ್ದು “ನನ್ನ ತಾಯಿಯವರಾದ ಹೊನ್ನೂರಮ್ಮ ಅವರು ನಿನ್ನೆ ತಡ ರಾತ್ರಿ ವಯೋಸಹಜ […]

ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಮಾತೃ ವಿಯೋಗ

Wednesday, August 12th, 2020
kasturi

ಮೂಡಬಿದ್ರೆ : ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಯವರ ಮಾತೃಶ್ರೀ ಕಸ್ತೂರಿ 63 ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ 5.45 ಕ್ಕೆ ಮುಡಬಿದ್ರೆ ಸ್ವರಾಜ್ ಮೈದಾನಿನ ಸಮೀಪವಿರುವ ಅವರ ಮನೆಯಲ್ಲಿ ನಿಧನರಾದರು. ರಮೇಶ್ ಶಾಂತಿ ಮತ್ತು ಕಸ್ತೂರಿ ದಂಪತಿಗಳಿಗೆ 6 ಜನ ಮಕ್ಕಳು ನಾಲ್ಕು ಗಂಡು ಮತ್ತು ಎರಡು  ಹೆಣ್ಣು, ಸುದರ್ಶನ್ ಮೊದಲನೆಯವರು. ರಮೇಶ್ ಶಾಂತಿ ಸ್ವರಾಜ್ ಮೈದಾನ ಅಯ್ಯಪ್ಪ ಗುಡಿಯಲ್ಲಿ ಅರ್ಚಕರಾಗಿದ್ದರೆ ನಾಳೆ ಆಗಸ್ಟ್ 13 ರಂದು ಅಂತ್ಯಕ್ರಿಯೆ ನಡೆಯಲಿದ್ದು, ಬೆಳಿಗ್ಗೆ 7 ರಿಂದ 9.30 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ […]

ಭಾಸ್ಕರ್ ಎಂ ಸಾಲ್ಯಾನ್ ರಿಗೆ ಮಾತೃ ವಿಯೋಗ

Friday, July 31st, 2020
Kamala

ಮುಂಬಯಿ : ಭಾರತ್ ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಂ ಸಾಲ್ಯಾನ್ ಅವರ ತಾಯಿ ಕಮಲಾ ಎಂ ಸಾಲ್ಯಾನ್ (82) ಜು. 30ರಂದು ಮೂಲ್ಕಿಯ ಸ್ವಗೃಹ ಕಮಲ ಸದನದಲ್ಲಿ ನಿಧನ ಹೊಂದಿದರು. ಮೃತರು ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷರೂ, ಬಿಲ್ಲವ ಸಮಾಜದ ಮುಖಂಡರಾದ ಜಯ ಸಿ. ಸುವರ್ಣರ ಹಿರಿಯ ಸಹೋದರಿ. ಸಮಾಜ ಸೇವಕ ದಿ. ಮುದ್ದು ಸಾಲ್ಯಾನ್ ಅವರ ಧರ್ಮಪತ್ನಿ. ಕಮಲಾ ಎಂ ಸಾಲ್ಯಾನ್ ಇವರು ಮಕ್ಕಳಾದ ತಾರಾ ಡಾ. ಜಗನ್ನಾಥ್, ಶಶೀಂದ್ರ ಎಂ ಸಾಲ್ಯಾನ್, ರವಿ. ಎಂ ಸಾಲ್ಯಾನ್, […]

ಗೋಸಂರಕ್ಷಣೆಯ ಬಗ್ಗೆ ಇಸ್ಲಾಂ ಧರ್ಮದ ಖುರಾನ್‌ನಲ್ಲಿ ಉಲ್ಲೇಖಿಸಲಾಗಿದೆ : ಮೊಹಮ್ಮದ್ ಪೈಜ್ ಖಾನ್

Tuesday, January 5th, 2016
Kuran

ಬದಿಯಡ್ಕ: ಪೂಜನೀಯ ಗೋಮಾತೆ ಮತ-ಧರ್ಮಗಳನ್ನು ಪರಸ್ಪರ ಒಂದುಗೂಡಿಸುವಂತಹ ಶಕ್ತಿ. ಗೋಸಂರಕ್ಷಣೆಯ ಬಗ್ಗೆ ಇಸ್ಲಾಂ ಧರ್ಮದಲ್ಲೂ ಪೂಜನೀಯತೆಯ ಸ್ಥಾನವನ್ನು ನೀಡಬೇಕೆಂದು ಪವಿತ್ರ ಖುರಾನ್‌ನಲ್ಲಿ ಉಲ್ಲೇಖಿಸಲಾಗಿದೆ. ಯಾವ ದೇಶದಲ್ಲಿ ಇಸ್ಲಾಂ ಮತಾನುಯಾಯಿ ಬದುಕುತ್ತಾನೋ ಅಲ್ಲಿ ಆ ದೇಶದ ನಂಬಿಕೆಯನ್ನು ಗೌರವಿಸಬೇಕೆಂದು ಪೈಗಂಬರರು ಸಾರಿದ್ದಾರೆಂದು ಖ್ಯಾತ ಗೋ ಕಥನಕಾರ ಮೊಹಮ್ಮದ್ ಪೈಜ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು. ಯುವ ಬ್ರಿಗೇಡ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಬದಿಯಡ್ಕದ ಗಣೇಶ ಮಂದಿರದಲ್ಲಿ ಆಯೋಜಿಸಲಾದ ಗೋ ಕಥೆ ಅಂಬೆಯ ಕೂಗು ವಿಶೇಷೋಪನ್ಯಾಸದಲ್ಲಿ ಅವರು ಮಾತನಾಡುತ್ತಿದ್ದರು. […]